May 30, 2016

ಪಿಎಂಒ ವೆಬ್ ಸೈಟಲ್ಲಿ ಕನ್ನಡ ಇಲ್ಲ.

ನಮಸ್ತೆ ನರೇಂದ್ರ ಮೋದಿ
     ಇತ್ತಿಚಿಗೆ ಬಿಡುಗಡೆಯಾದ ಪಿಎಂಒ ವೆಬ್ ಸೈಟನ್ನು  ನೋಡಿ ಅದರಲ್ಲಿ ಪ್ರಮುಖ ಪ್ರಾದೇಶಿಕ ಭಾಷೆಗಳಾದ ತೆಲುಗು, ತಮಿಳು, ಗುಜರಾತ್, ಮಾರಾಠಿ, ಮಲಯಾಳಂ ಮತ್ತು ಬಂಗಾಳಿ ಅಂತಹ ಆರು ಭಾಷೆಗಳಲ್ಲಿ ಮಾಹಿತಿಗಳು ಕಾರ್ಯನಿರ್ವಹಿಸುತ್ತಿದೆ ಆದರೆ ಕನ್ನಡ ಭಾಷೆ ಇಲ್ಲದಿರುವು ನಮಗೆ ದುಃಖ ಉಂಟುಮಾಡುವ ವಿಷಯವಾಗಿದೆ.
 ನಿಮಗೆ ಗೊತ್ತಿಲ್ಲವ ಕನ್ನಡ ಭಾಷೆ ನಮ್ಮ ಭಾರತ ದೇಶದ ಒಂದು ಪ್ರದೇಶಿಕ ಹಾಗೂ ಸಂಸ್ಕೃತಿಕ ಭಾಷೆ ಎಂದು. ಕೇಳಿ .... ನಾ ಹೇಳುತ್ತನೆ. ವಿಶ್ವದಲ್ಲಿ ಯಾವುದೇ ಮಗು ತಾಯಿಯ ಗರ್ಭದಿಂದ ಹೊರ ಬಂದಾಗ ಮೊದಲು ಮಾತನಾಡುವ ಪದ ಅಮ್ಮ ಎಂದು ಈ ಒಂದು ಪದದ ಮೂಲ ಕನ್ನಡ. ಕನ್ನಡ ಕೇವಲ ಒಂದು ಭಾಷೆಯಲ್ಲ ಇದು ಒಂದು ಸಂಸ್ಕೃತಿಯಾಗಿದೆ, ಕನ್ನಡ ಉಳಿವಿಗಾಗಿ ಇಂದು ದೂರದ ಅವೇರಿಕ ದೇಶದಲ್ಲಿ ಅಕ್ಕ ಸಮ್ಮೇಳನಗಳು ನಡೆಯುತ್ತಿದೆ. ಅಲ್ಲಿ ಜನರಿಗೆ ಇರುವ ಪ್ರೀತಿ ನಿಮಗೆ ಯಾಕೆ ಸ್ವಾಮಿ ಇಲ್ಲ.

   ಕನ್ನಡ ಎಂದರೆ ನೀವು ಯಾಕೆ ತಲೆಯನ್ನು ಕೆಡಿಸಿಕೊಳ್ಳುವುದಿಲ್ಲ. ಪ್ರಾದೇಶಿಕ ಭಾಷೆಯಲ್ಲಿ ನೀವು ಆರಂಭಿಸಿದ ವೆಬ್ ಸೈಟ್ ನೀವು ಏನ್ ಹೇಳುವುದಕ್ಕೆ ಹೋಗುತ್ತಿದ್ದಿರ. ಕನ್ನಡ ಒಂದು ಪ್ರಾದೇಶಿಕ ಭಾಷೆಯಾಗಿರುವುದು ಹಾಗೂ ಇಲ್ಲಿನ ಜನರಿಗೆ ನಿಮಗೆ ಯಾಕೆ ದ್ವೇಷ. ಘಂಟೆ ಘಂಟೆ ಭಾಷಣವನ್ನು ಮಾಡುವ ನೀವು ಕನ್ನಡ ಭಾಷೆ ಹಾಗು ಕನ್ನಡ ನಾಡಿನ ಬಗ್ಗೆ ನಿಮ್ಮ ಪ್ರೀತಿ ವಿಶ್ವಾಸ ಎಂತಹದಾಗಿದೆ ಎಂದು ನಿಮ್ಮ ಈ ಸಣ್ಣತನದಲ್ಲಿ ತಿಳಿಯುತ್ತದೆ. ಛೇ ... ..
     ನಿಮಗೆ ನಮ್ಮ ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಇಲ್ಲಿಯ ಜನರ ಮೇಲೆ ಪ್ರೀತಿ ವಿಶ್ವಾಸ ಇದ್ದಾರೆ ಕೂಡಲೆ ನಿಮ್ಮ ಪಿಎಂಒ ವೆಬ್ ಸೈಟ್ ಅಲ್ಲಿ ಕನ್ನಡವನ್ನು ಸೇರಿಸಿ.

ಇಂತಿ
ದ್ಯಾವನೂರು ಮಂಜುನಾಥ್
ಕನ್ನಡಿಗ
ಭಾರತ ದೇಶ

No comments:

Post a Comment