ಚಿತ್ರ: "ಇಷ್ಟಕಾಮ್ಯ"

ಕಥೆ: ದೊಡ್ಡೇರಿ ವೆಂಕಟಗಿರಿ ರಾವ್ ಅವರ ಕಾದಂಬರಿ 'ಇಷ್ಟಕಾಮ್ಯ'
ಚಿತ್ರಕಥೆ-ನಿರ್ದೇಶನ: ನಾಗತಿಹಳ್ಳಿ ಚಂದ್ರಶೇಖರ್
ಸಂಗೀತ: ಬಿ.ಅಜನೀಶ್ ಲೋಕನಾಥ್
ಛಾಯಾಗ್ರಹಣ: ರವಿ ಕುಮಾರ್ ಸನಾ
ತಾರಾಗಣ: ವಿಜಯ್ ಸೂರ್ಯ, ಮಯೂರಿ, ಕಾವ್ಯ ಶೆಟ್ಟಿ, ಚಿಕ್ಕಣ್ಣ, ರಂಗಾಯಣ ರಘು, ಬಿ.ಜಯಶ್ರೀ, ಮಂಡ್ಯ ರಮೇಶ್, ಪ್ರಕಾಶ್ ಬೆಳವಾಡಿ, ವಿಶೇಷ ಪಾತ್ರದಲ್ಲಿ ಸುಮನ್ ನಗರ್ಕರ್ ಮತ್ತು ಇತರರು.
*******************************************************************************
ನಾನು ನಾಗತಿಹಳ್ಳಿ ಚಂದ್ರಶೇಖರ್ ಅವರ ನಿರ್ದೇಶನದಲ್ಲಿ ಚಲನಚಿತ್ರವಾಗಿ ಬೆಳ್ಳಿ ತೆರೆಯನ್ನು ಕಂಡ ದೊಡ್ಡೇರಿ ವೆಂಕಟಗಿರಿರಾವ್ ಅವರ ಕೃತಿ ಆಧಾರಿಸಿದ ಇಷ್ಟಕಾಮ್ಯ ಚಿತ್ರವನ್ನು ನೋಡಿದೆ. ಈ ಒಂದು ಚಲನಚಿತ್ರದ ಬಗ್ಗೆ ಒಂದು ಎರಡು ಮಾತುಗಳನ್ನು ಹಂಚಿಕೊಳ್ಳುವುದಕ್ಕೆ ಇಷ್ಟಪಡುತ್ತೆನೆ.


ಅಪ್ಪಟ ಕರಾವಳಿ ಬೆಡಗಿ ಕಾವ್ಯ ಶೆಟ್ಟಿ ಅವರ ದರ್ಪ-ಅಹಂಕಾರದ ನಟನೆ ಕಂಡಾಗ ಹೆಣ್ಣು ಮಕ್ಕಳಿಗೆ ಅಹಂಕಾರ ಇರಬೇಕು, ಆದರೆ ಇಷ್ಟಿರಬಾರದು ಎಂದು ಅನಿಸಿದರೂ ತಪ್ಪಿಲ್ಲ. ಒಟ್ನಲ್ಲಿ ಇವರ ನಟನೆಯೂ ಹೆಚ್ಚು ಅತೀ ಎನಿಸದೆ ತುಂಬಾ ನೀಟಾಗಿ ಖಡಕ್ ಜೊತೆಗೆ ನ್ಯಾಚುರಲ್ ಆಗಿ ನಟಿಸಿದ್ದು, ಇವರ ಪ್ಲಸ್ ಪಾಯಿಂಟ್.
ಉಳಿದಂತೆ ನಟ ಚಿಕ್ಕಣ್ಣ ಅವರು ಎಷ್ಟು ಬೇಕು ಅಷ್ಟೇ ಕಾಮಿಡಿ ಮಾಡಿದ್ದು, ಮಂಡ್ಯ ರಮೇಶ್ ಅವರು ಕೂಡ ಕೊಂಚ ನಗಿಸುತ್ತಾರೆ. ರಂಗಾಯಣ ರಘು ಅವರು ಕಾಮಿಡಿಯ ಜೊತೆ-ಜೊತೆಗೆ ಅಪ್ಪ ಅನ್ನೋ ಪಾತ್ರವನ್ನು ತುಂಬಾ ಚೆನ್ನಾಗಿ ನಿಭಾಯಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಸುಮನ್ ನಗರ್ಕರ್ ಮತ್ತು ಪ್ರಕಾಶ್ ಬೆಳವಾಡಿ ಚೆನ್ನಾಗಿ ನಟಿಸಿದ್ದಾರೆ.
ನಾಗತಿಹಳ್ಳಿ ಚಂದ್ರಶೇಖರ್ ಅವರ ಸಿನಿಮಾ ದೊಡ್ಡೇರಿ ವೆಂಕಟಗಿರಿರಾವ್ ಅವರ 'ಇಷ್ಟಕಾಮ್ಯ' ಕಾದಂಬರಿ 'ಇಷ್ಟಕಾಮ್ಯ'ದಲ್ಲಿ ಒಂದು ಎಳೆ ಅಷ್ಟನ್ನೇ ತೆಗೆದುಕೊಂಡು ಸಾಕಷ್ಟು ಬದಲಾವಣೆ ಮಾಡಿ ಸಿನಿಮಾವನ್ನಾಗಿ ಮಾಡಿದ್ದಾರೆ. ಒಂದು ಚಿಕ್ಕ ಎಳೆಯನ್ನು ಎತ್ತಿಕೊಂಡರೂ ಮೂಲ ಕಾದಂಬರಿಯನ್ನು ಸ್ಮರಿಸಬೇಕಾದ್ದು ನಿರ್ದೇಶಕನ ಕರ್ತವ್ಯ. ಎಂದು ಪತ್ರಿಕೆಯಲ್ಲಿ ಹೇಳಿಕೊಂಡಿದ್ದಾರೆ.

ಇನ್ನು ಸಿನಿಮಾದ ಕಥೆಯ ಕಡೆ ಬಂದರೆ ಅಜ್ಜ ಕಟ್ಟಿದ 'ಬೆಳ್ಳಕ್ಕಿ ಆಸ್ಪತ್ರೆ'ಯಲ್ಲಿ ಹಳ್ಳಿಯ ಜನರ ಸೇವೆ ಮಾಡುತ್ತಾ ಹುಟ್ಟಿದ ಊರಲ್ಲೇ ಒಂಟಿಯಾಗಿ ಜೀವನ ಮಾಡುತ್ತಿರುವ ಡಾಕ್ಟರ್ ಆಕರ್ಷ್ (ವಿಜಯ್ ಸೂರ್ಯ) ಗೆ ಅಡುಗೆಯವನಾದ ನಿಂಬೆ (ಚಿಕ್ಕಣ್ಣ) ಯೇ ಬಂಧು-ಬಳಗ ಎಲ್ಲಾ ಆಗಿರ್ತಾನೆ. ಹಣ-ಆಸ್ತಿ-ಅಂತಸ್ತು-ಐಶ್ವರ್ಯ ಎಲ್ಲಾ ಇದ್ರೂನೂ ಆಕರ್ಷ್ ಮನಸ್ಸಿಗೆ ನೆಮ್ಮದಿ ಅನ್ನೋದು ಇರೋದಿಲ್ಲಾ, ಹಳ್ಳಿಯಲ್ಲಿನ ಬಡವರ ಸೇವೆ ಮಾಡುತ್ತಾ ಅದರಲ್ಲೇ ಸುಖ ಕಾಣುತ್ತಾ ಇರುವ ಡಾಕ್ಟರ್ ಆಕರ್ಷ್ ಗೆ ಒಂದು ಆಕ್ಸಿಡೆಂಟ್ ಮೂಲಕ ಅಚ್ಚರಿ (ಮಯೂರಿ) ಪರಿಚಯ ಆಗುತ್ತಾಳೆ.
ಶ್ರೀಮಂತ ಮನೆತನದ ಹುಡುಗ ಆದರೂ ಸಿಂಪಲ್ ವ್ಯಕ್ತಿತ್ವ ಹೊಂದಿರುವ ಡಾಕ್ಟರ್ ಆಕರ್ಷ್ ಗೆ ಬಡ ಜನರು ಎಂದರೆ ಪ್ರೀತಿ. ಇಂತಹ ಹುಡುಗನಿಗೆ ಮುದ್ದು-ಮುದ್ದಾದ ಮುಗ್ದ ಬಡ ಹಳ್ಳಿ ಹುಡುಗಿ 'ಅಚ್ಚರಿ' ಆಕಸ್ಮಿಕವಾಗಿ ಸಿಗುತ್ತಾಳೆ. ಆಗ ಡಾಕ್ಟರ್ ಆಕರ್ಷ್ ಕಾರಿಗೆ ಅಡ್ಡ ಬರುವ ಅಚ್ಚರಿಗೆ ತೀವ್ರ ಗಾಯ ಆಗುತ್ತೆ, ಆಕೆ 'ಬೆಳ್ಳಕ್ಕಿ' ಆಸ್ಪತ್ರೆ ಸೇರುತ್ತಾಳೆ. ಅಂತೂ ಅಪಘಾತದ

ಮೂಲಕ ಒಂದು ಮುಗ್ದ ಪ್ರೇಮ ಚಿಗುರೊಡೆಯುತ್ತದೆ. ರೋಗಿಯಾಗಿ ಆಸ್ಪತ್ರೆ ಸೇರಿದ ಅಚ್ಚರಿ ಆಕರ್ಷ್ ಹೃದಯ ಗೆದ್ದು ಪ್ರೀತಿಯ ಅಚ್ಚು ಆಗುತ್ತಾಳೆ. ಮುಗ್ದ ಮನಸ್ಸಿನ 'ಅಚ್ಚರಿ' ತನಗೆ ಪ್ರಾಣ ಕೊಟ್ಟ ದೇವರು ಅಂತ ಆಕರ್ಷ್ ನನ್ನು ಹಾಗೂ ತನ್ನ ಸುತ್ತ-ಮುತ್ತಲಿನ ಜನರನ್ನು ಸ್ವಚ್ಛ ಮನಸ್ಸಿನಿಂದ ಪ್ರೀತಿ ಮಾಡುತ್ತಿದ್ದರೆ, ಇದಕ್ಕೆ ವಿರುದ್ಧ ವ್ಯಕ್ತಿತ್ವ-ಮನೋಭಾವ ಹೊಂದಿರುವ ಶ್ರೀಮಂತ ಮನೆತನದ ಹುಡುಗಿ ಅದಿತಿ (ಕಾವ್ಯ ಶೆಟ್ಟಿ) ಅಂತರಂಗದ ಶುದ್ಧಿಗಿಂತ ಬಹಿರಂಗ ಶುಧ್ದಿಯೇ ಮೇಲು ಅಂತ ಅಹಂಕಾರದಿಂದ ಮೆರೆದಾಡುತ್ತಿರುತ್ತಾಳೆ.

ಅಹಂಕಾರದ ಮೂಟೆ ಅದಿತಿ (ಕಾವ್ಯ ಶೆಟ್ಟಿ) ತಮ್ಮ ಟೀ ಎಸ್ಟೆಟ್ ನ ಕೆಲಸದಿಂದ ಅಚ್ಚರಿ (ಮಯೂರಿ) ಯನ್ನು ತೆಗೆದು ಹಾಕಿದಳು ಅನ್ನೋ ಕೋಪದಲ್ಲಿ ಇಬ್ಬರ ನಡುವೆ ದ್ವೇಷ ಹುಟ್ಟುತ್ತೆ. ಈ ನಡುವೆ ಆಕರ್ಷ್ ಜೊತೆ ಪ್ರೀತಿ ಮಿತಿ ಮೀರಿ ಅಚ್ಚರಿ ತನ್ನದೇ ಲೋಕದಲ್ಲಿ ಕಳೆದು ಹೋಗಿರುವಾಗ ಆಕೆಗೆ ಒಂದು ಶಾಕ್ ಕಾದಿರುತ್ತದೆ. ತದನಂತರ ಟ್ವಿಸ್ಟ್ ಮೇಲೆ ಟ್ವಿಸ್ಟ್ ಅಷ್ಟಕ್ಕೂ ಮುಂದೇನಾಗುತ್ತೆ? ಅದಿತಿಗೂ ಡಾಕ್ಟರ್ ಆಕರ್ಷ್ ಗೂ ಏನು ಸಂಬಂಧ? ಅಚ್ಚರಿ ತನ್ನ ಪ್ರೀತಿಯನ್ನು ಉಳಿಸಿಕೊಳ್ಳುತ್ತಾಳಾ? ಅನ್ನೋದನ್ನ ನೀವು ಥಿಯೇಟರ್ ನಲ್ಲಿ ನೋಡಿದರೆ ಚೆಂದ.

ಹೀಗೆ ಕಥೆಯು ಪ್ರತಿ ಸನ್ನಿವೇಶದಲ್ಲಿಯೂ ಸಹ ಒಂದು ಒಂದು ಟ್ಟೀಸ್ಟ್ ನೀಡುತ್ತ ಹೋಗುತ್ತದೆ. ಈ ಚಿತ್ರದಲ್ಲಿ ಬರುವ ಕೆಲವು ನೋಡುಗರಿಗೆ ಮನಸ್ಸಿನಲ್ಲಿ ನಾಟುವಂತಹ ಡೈಲಾಗ್ ಅಂದರೆ "ಪ್ರೀತಿಗೆ ಸಂಬಂದಗಳ ಲೇಬಲ್ ಬೇಕ" ಪ್ರತಿ ಒಬ್ಬ ಯುವಕ-ಯುವತಿಯರಿಗೆ ಇಷ್ಟವಾಗುತ್ತದೆ. ಇನ್ನು ಚಿತ್ರಣಾಗಿರುವ ಸ್ಥಳಗಳು ಎಲ್ಲಾ ಹೊಸ ಪರಿಚಯಗಳು. ನಮ್ಮ ಮಲೆನಾಡಿನ ಜನಪದ ದೀಪವಾಳಿಯ ಸೊಗಡು, ಸೊಗಸಾಗಿ ಮುಡಿಬಂದಿದೆ.

Song Name: NEE NANAGOSKARA
Singer: SHREYA GHOSHAL, B.AJANEESH LOKNATH
Lyrics: NAGATHIHALLI CHANDRASHEKHAR
Music: B.AJANEESH LOKNATH
Song Name: NAA NINAGE
Singer: CHINTAN VIKAS
Lyrics: RASHTRA KAVI KU.VEM.PU
Music: B.AJANEESH LOKNATH
-ದ್ಯಾವನೂರು ಮಂಜುನಾಥ್
No comments:
Post a Comment