ಶೆಟ್ಟರ ಅಂಗಡಿಗೆ ಯಾವತ್ತೂ ಸಹ ನಷ್ಟವಾಗುವುದಿಲ್ಲ.

ಶೆಟ್ಟರ ಅಂಗಡಿ ಯಾವಾಗಲೂ ಗ್ರಾಹಕರಿಂದ ತುಂಬಿರುತ್ತಿತ್ತು. ಅಷ್ಟೊಂದು ವಹಿವಾಟು. ಅವರ ಅಂಗಡಿಯ ಎದುರಿಗೇ MBA ಪದವೀಧರ ಅಂಗಡಿ ತೆರದ. 

ಎದುರಾಳಿಗೆ  competition ಕೊಡಲು ಸರಕುಗಳ ಬೆಲೆ ಕಡಿಮೆ ಮಾಡಿವುದು ಒಂದು strategy ಎಂದು ಓದಿದ್ದು ಜ್ಞಾಪಿಸಿಕೊಂಡ. ಐದಾರು ರೂಗಳಿಗೆ ಕೊಂಡ ತೆಂಗಿನಕಾಯಿಯನ್ನು ಹತ್ತು ರೂಪಾಯಿಗಳಿಗೆ ಶೆಟ್ಟರು ಮಾರುತ್ತಿದ್ದರು. ಇವನು ಕಾಯಿ ಬೆಲೆ ಎಂಟು ರೂಗಳಿಗೆ ಇಳಿಸಿದ. ಶೆಟ್ಟರೂ  ಎಂಟು ರೂಗಳಿಗೆ ಬೆಲೆ ಇಳಿಸಿದರು. ಎದುರಾಳಿಯನ್ನು ಮಣಿಸುವ ಮತ್ತೊಂದು ಅಸ್ತ್ರ"No profit, no loss" ಎನ್ನುವ concept ನ್ನು ಅಳವಡಿಸಿ ಕಾಯಿ ಬೆಲೆಯನ್ನು ಆರು ರೂಗಳಿಗೆ ಇಳಿಸಿದ. ಶೆಟ್ಟರೂ ಆರು ರೂಗಳಿಗೆ ಬೆಲೆ ಇಳಿಸಿದರು. ಬೆಲೆ ಇಳಿಸಿದರೂ ಶೆಟ್ಟರ ವ್ಯಾಪಾರ ಮೊದಲಿನಂತೇ ಅಭಾದಿತವಾಗಿ ಮುಂದುವರೆದಿದ್ದು ನೇೂಡಿ ಇವನಿಗೆ ಏನು ಮಾಡಬೇಕೆಂದು ಯೇೂಚಿಸಲಾರಂಭಿಸಿದ. ತಟ್ಟನೆ ಜ್ಞಾಪಕಕ್ಕೆ ಬಂತು-initial loss is also a promotional expenditure and a stepping stone for long term sustainable establishment.ಈ strategy ಉಪಯೇೂಗಿಸಿದರೆ ಶೆಟ್ಟರು ನಷ್ಟವನ್ನು ಬಹುದಿನಗಳ ತನಕ ಭರಿಸಲಾರದೆ ಅಂಗಡಿ ಮುಚ್ಚುತ್ತಾರೆ ಎಂದು ಯೇೂಚಿಸಿದವನೇ, ಕಾಯಿ ಬೆಲೆಯನ್ನು ನಾಲ್ಕು ರೂಗಳಿಗೆ ಇಳಿಸಿದ. ಶೆಟ್ಟರೂ ನಾಲ್ಕು ರೂಗಳಿಗೆ  ಇಳಿಸಿದರು.  ಇವನ ವ್ಯಾಪಾರವೇನೇೂ  ದ್ವಿಗುಣಗೊಂಡಿತು. ಆದರೆ ಶೆಟ್ಟರ ವ್ಯಾಪಾರ ಎಂದಿನಂತೆ ಮುಂದುವರೆದಿತ್ತು. ಈಗೇ ಐದಾರು ತಿಂಗಳು ಕಳೆಯಿತು.
ಒಂದು ದಿನ MBA ಹೇೂಟೆಲ್ ನಲ್ಲಿ ಕಾಫಿ ಕುಡಿಯುತ್ತಿರುವಾಗ ಶೆಟ್ಟರು ಕಾಫಿ ಕುಡಿಯಲು ಬಂದರು. MBA ನೇ ಮಾತಿಗೆ ಮೊದಲು ಮಾಡಿದ. "ನಮ್ಮಿಬ್ಬರ competition ನಲ್ಲಿ ಅನಾಶ್ಯಕವಾಗಿ ನಷ್ಟ ಮಾಡಿಕೊಳ್ಳುತ್ತಿದ್ದೇವೆ. ತೆಂಗಿನ ಕಾಯಿ ಒಂದರಿಂದಲೇ ನಲವತ್ತರಿಂದ ಐವತ್ತು ಸಾವರ ನಷ್ಟವಾಯಿತು. ನಿಮಗೆಷ್ಟು ನಷ್ಟವಾಯಿತು?" ಎಂದು ಕೇಳಿದ. ಶೆಟ್ಟರು ನಗುತ್ತಾ ಹೇಳಿದರು "ನಾನ್ಯಾಕೆ ಲಾಸ್ ಮಾಡಿಕೊಳ್ಳಲಿ, ನಿಮ್ಮ ಅಂಗಡಿಯಿಂದ ನಾಲ್ಕು ರೂಗೆ ಕಾಯಿ ತರಿಸಿ ಅದನ್ನೇ ನಾನು ಮಾರುತ್ತಿದ್ದೆ!!!?"

No comments:

Post a Comment