October 12, 2020

ಗೊರೂರು ಹೇಮಾವತಿ ಜಲಾಶಯ ಬೇಕೋ ಬೇಡವೋ.....!

 ೧೯೭೦ರ ದಶಕದಲ್ಲಿ ನೀರಿಗಾಗಿ ರೈತರ ಹೋರಾಟ ಹಾದಿ-1
 ಹಾಸನ ಜಿಲ್ಲೆಯ ಜೀವ ನದಿ ಹೇಮಾವತಿ ನದಿಗೆ ಅಡ್ಡಲಾಗಿ ಗೊರೂರು ಬಳಿ ಕೈಗೊಂಡಿದ್ದ ಜಲಾಶಯ ಬೇಕು-ಬೇಡ ಎನ್ನುವ ಬಗ್ಗೆ ವಿವಾದಗಳು ಹೆಚ್ಚುತ್ತಿತ್ತು. ಇಲ್ಲಿಯ ರೈತರು ನೀರಿನ ದಾಹದ ಕೊರೆತೆಯನ್ನು ಅನುಭವಿಸಿದ್ದರು. ಇದನ್ನು ಮನಗಂಡ ಮೈಸೂರು ಸರ್ಕಾರ ಹೇಮಾವತಿ ನದಿಗೆ ಅಡ್ಡಲಾಗಿ ಗೊರೂರಿನಲ್ಲಿ ಜಲಾಶಯ ನಿರ್ಮಾಣ ಮಾಡಿದರೆ ನಾಡಿನ ರೈತರ ಸಮಸ್ಯೆ ಪರಿಹಾರವಾಗುದೆಂದು ತಿಳಿದಿ ಈ ಯೋಜನೆಗೆ ಮುಂದಾಯಿತು. 

ಆದರೆ, ಗೊರೂರು ಜಲಾಶಯ ನಿರ್ಮಾಣ  ಮಾಡಿದರೆ ತಮಿಳುನಾಡಿಗೆ ಎಲ್ಲಿ ನೀರಿನ ಪೂರೈಕೆ ಆಗುವುದಿಲ್ಲವೋ ಎಂದು ತಿಳಿದು ಅಂದಿನ ತಮಿಳುನಾಡಿನ ಮುಖ್ಯಮಂತ್ರಿಗಳಾದ ಶ್ರೀ.ಎಂ.ಕರುಣಾನಿಧಿಯವರು ಗೊರೂರು ಜಲಾಶಯ ನಿರ್ಮಾಣ ಮಾಡದಂತೆ ದೆಹಲಿಯಲ್ಲಿ ಪ್ರಧಾನಿಗಳಾಗಿದ್ದ ಶ್ರೀಮತಿ ಇಂದಿರಾ ಗಾಂಧಿಯವರನ್ನು ಭೇಟಿ ಮಾಡಿ 'ಹೇಮಾವತಿ ಜಲಾಶಯದ ನಿರ್ಮಾಣವನ್ನು ಮಾಡುವುದರಿಂದ ತಮಿಳುನಾಡಿನ  ಜನತೆಯ ಹಿತಾಸಕ್ತಿಗೆ ಧಕ್ಕೆಯುಂಟಾಗುತ್ತದೆ. ಈ ಕಾರಣದಿಂದ ಮೈಸೂರು ಸರ್ಕಾರವು ಈ ಯೋಜನೆಯನ್ನು ಮುಂದುವರಿಸದಂತೆ ಕೇಂದ್ರ ಸರ್ಕಾರ ಭರವಸೆ ಕೊಡಬೇಕೆಂಬುದು ನಮ್ಮ ರಾಜ್ಯದ ಎಲ್ಲಾ ಪಕ್ಷಗಳ ಆಭಿಪ್ರಾಯವಾಗಿದೆ. ಜಲಾಶಯದ ಬದಲು ನಾಲ್ಕನೇ ಪಂಚವಾರ್ಷಿಕ ಯೋಜನೆಯಲ್ಲಿ ಸೇಲಂ ಉಕ್ಕಿನ ಕಾರ್ಖಾನೆ ಮತ್ತು ತೈಲ ಶುದ್ದೀಕರಣ ಕಾರ್ಯಗಾರದ ಸ್ಥಾಪನೆಗಳನ್ನು ಮಂಜೂರು ಮಾಡಬೇಕೆಂದು' ಮನವಿ ಮಾಡಿದ್ದರು.
 
ಶ್ರೀ ಎಸ್ ಶಿವಪ್ಪನವರು ೧೯೭೦ ಫೆಬ್ರವರಿ ೨೧ರಂದು ವಾರ್ತಾಗೋಷ್ಠಿ:
ಆ ಸಮಯದಲ್ಲಿ ಕಾವೇರಿ ವಿವಾದದ ಬಗ್ಗೆ ಆನೇಕ ಪರ ವಿರೋಧ ಚರ್ಚೆಗಳು ನಡೆಯುತ್ತಿತ್ತು. ಆದರೆ ಜಿಲ್ಲೆಯಲ್ಲಿ ಹೇಮಾವತಿ ಜಲಾಶಯವನ್ನು ಪೂರೈಸುವುದು ಖಚಿತ. ರೈತರು ಯಾವುದೇ ರೀತಿಯಲ್ಲಿ ರಾಜಕೀಯ ಪ್ರಭಾವಕ್ಕೆ ಮುಣಿಯಭಾರದೆಂದು ಲೋಕಸಭಾ ಸದಸ್ಯರಾದ ಶ್ರೀ ಎಸ್ ಶಿವಪ್ಪನವರು ೧೯೭೦ ಫೆಬ್ರವರಿ ೨೧ರಂದು ಒಂದು ವಾರ್ತಾಗೋಷ್ಠಿಯನ್ನು ಮಾಡಿದರು. 
ಈ ವಾರ್ತಾಗೋಷ್ಠಿಯಲ್ಲಿ ಅವರು ಮಾತನಾಡಿ, 'ಕಾವೇರಿ ನೀರಿನ ಬಳಕೆ ಬಗ್ಗೆ ದೇಶದಲ್ಲಿರುವ ರಾಜಕೀಯ ಅನಿಶ್ಚಿತತೆಯ ಸಂದರ್ಭದಲ್ಲಿ ತಮಿಳುನಾಡು ಸರ್ಕಾರವು ಕೇಂದ್ರದ ಮೇಲೆ ಬೀರುತ್ತಿರುವ ಅಥವಾ ಬೀರಬಹುದಾದ ಯಾವುದೇ ರಾಜಕೀಯ ಪ್ರಭಾವದಿಂದ ಮೈಸೂರಿನ ಜನತೆಗೆ ಅನ್ಯಾಯವಾಗುವುದನ್ನು  ರಾಜ್ಯದ ಯಾವ ಪ್ರಜೆಯೂ ಸಹಿಸಲಾರ ತಮಿಳುನಾಡಿನ ಮುಖ್ಯಮಂತ್ರಿಗಳು ೧೯೭೦ ಫೆಬ್ರವರಿ ೧೮ರಂದು ಪ್ರಧಾನಿಗಳ ಭೇಟಿ ಮಾಡಿ ಹೇಮಾವತಿ ನಿರ್ಮಾಣ ಕಾರ್ಯವನ್ನು ತಡೆಯಬೇಕೆಂದು ಮನವಿ ಮಾಡಿದ್ದಾರೆ. ಪ್ರಧಾನಿಗಳು ತಮ್ಮ ಬೇಡಿಕೆಗೆ ಮನ್ನಣೆ ಕೊಡುವುದರಲ್ಲಿ ಸಂಶಯವಿಲ್ಲ' ಎಂದು ಹೇಳಿದರು.ಇದು ರೇಡಿಯೋ  ಮತ್ತು  ೧೯೭೦ ಫೆಬ್ರವರಿ ೧೮ ರಂದು ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು.
ಜಲಾಶಯ ನಿರ್ಮಾಣಕ್ಕೆ ತಡೆಯಾಜ್ಞೆಗೆ ಒತ್ತಾಯ:
ಈ ವಿಷಯದ ಹಿನ್ನೆಲೆಯಲ್ಲಿ ಕಾವೇರಿ ವಿವಾದವನ್ನು ಹಲವು ತಿಂಗಳುಗಳಿಂದ ಪ್ರಜಾಸತ್ತಾತ್ಮಕ ರೀತಿಯಲ್ಲಿ ಅಂತಿಮವಾಗಿ ತೀರ್ಮಾನಕ್ಕೆ ಬರಲು ಮೈಸೂರು ಮತ್ತು ತಮಿಳು ನಾಡುಗಳ ತಾಂತ್ರಿಕ ಪರಿಣತರ ಸಭೆ ನಡೆಯುತ್ತಿತ್ತು. ನಂತರ ಈ ಎರಡು ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಕಾಮಗಾರಿ ಮಂತ್ರಿಗಳ ಸಭೆ ನಡೆದು, ಅಂದಿನ ಕೇಂದ್ರ ಸಚಿವರಾಗಿದ್ದ  ಡಾ||ರಾವ್ ಮಾಡಿದ ಸಲಹೆಗಳ ಪರಿಶೀಲನೆ ನಡೆಸುತ್ತಿದ್ದರು. ಆದರೆ ಕರುಣಾನಿಧಿಯವರು ಜಲಾಶಯ ನಿರ್ಮಾಣಕ್ಕೆ ತಡೆಯಾಜ್ಞೆ ಮಾಡಲು ಒತ್ತಾಯಿಸುತ್ತಿದ್ದರು. 

ರಾಜ್ಯದ ರೈತರಿಗೆ ಇದು ಯಾವ ರೀತಿ ಪರಿಹಾರ ಮಾರ್ಗವೆಂಬ ಪ್ರಶ್ನೆ ಹುಟ್ಟಿತ್ತು. ಆದರೆ ಪ್ರಧಾನಿಗಳು ನೀಡಿರುವ ಭರವಸೆಯ ಹೇಳಿಕೆ ಯಾವುದೇ ರೀತಿಯಲ್ಲಿ ನ್ಯಾಯಾಬಾಹಿರವಾಗಿರಲಿಲ್ಲ. ಈ ಹೇಳಿಕೆ ಅಂದಿನಾ ಮೈತ್ರಿಯುತ ಸಂಬಂಧದ ದುರುಪಯೋಗದ ಸಂಕೇತವಾಗಿತ್ತು.

೧೯೨೪ರಲ್ಲಿ ಕಾವೇರಿ ಒಪ್ಪಂದದಲ್ಲಿ  ಮೈಸೂರು - ಮದರಾಸುಗಳ ನಡುವೆ ಮಾಡಿದ ಕಾವೇರಿ ಹಾಗೂ ಅದರ ಉಪನದಿಗಳ ಜಲಾಶಯಗಳ ನಿರ್ಮಾಣ ಮಾಡಕೂಡದು ಎಂಬ ಅಂಶ ಎಲ್ಲೂ ಇರಲಿಲ್ಲಾ. ಒಪ್ಪಂದದಂತೆ ೧೯೭೪ರ ಮೇಳೆಗೆ ಹೇಮಾವತಿ ಅಣೆಕಟ್ಟಿನ ಜೊತೆ ಇತರೆ ಜಲಾಶಯಗಳ ನಿರ್ಮಿಣವಾಗಬೇಕು. ಇಲ್ಲದಿದ್ದರೆ ಮೈಸೂರು ಕಾವೇರಿ ನೀರಿನ ತನ್ನ ಎಲ್ಲಾ ಹಕ್ಕುಗಳನ್ನು ಕಳೆದುಕೊಳ್ಳುತ್ತದೆ ಎಂಬ ಭೀತಿಯಿಂದ, ರಾಜ್ಯ ಸರ್ಕಾರ ಹಾಗೂ ಜನತೆ ಇದಕ್ಕಾಗಿ ಜಲಾಶಯ ನಿರ್ಮಾಣ ಕಾರ್ಯಕ್ಕೆ ಒತ್ತಾಯ ಪಡಿಸುತ್ತಿದ್ದರು. ಜಲ ವಿದ್ಯುತ್ ಮಂಡಳಿಗಳ ಅನುಮತಿ ಸಹ ಇತ್ತು. ಆದರೆ ಕೇಂದ್ರ ಸರ್ಕಾರ ತನ್ನ ಹಣದ ಕೊರತೆಯನ್ನು ಮುಂದೊಡ್ಡಿ ಕಳೆದ ೩ ಯೋಜನೆಗಳಿಂದಲೂ ಜಲಾಶಯ ನಿರ್ಮಾಣಕ್ಕೆ ತಾಂತ್ರಿಕ  ಅನುಮತಿ ನೀಡದೆ ರಾಜ್ಯದ ಜನತೆಗೆ ತುಂಬಲಾರದ ಅನ್ಯಾಯ ಮಾಡಿತ್ತು. ನಂತದಲ್ಲಿ ನಡೆದ ಅನೇಕ ಚರ್ಚೆಗಳ ಪರಿಣಾಮವಾಗಿ ಜಲಾಶಯ ನಿರ್ಮಾಣ ಕಾರ್ಯದ ಬಿಕ್ಕಟ್ಟು ಸುಗಮವಾಗಿ ಬಗೆಹರಿದು ಇದಕ್ಕೆ ಕೇಂದ್ರದ ಆರ್ಥಿಕ ನೆರವು ದೊರಕುವುದೆಂದು ರಾಜ್ಯದ ಜನತೆ ಭರವಸೆಯಿಂದಿದ್ದರು. ಆದರೆ, ತಮಿಳು ನಾಡಿನ ಮುಖ್ಯಮಂತ್ರಿಗಳ ಕೈವಾಡ ಪ್ರಾರಂಭವಾಗಿತ್ತು.

- ದ್ಯಾವನೂರು ಮಂಜುನಾಥ್

No comments:

Post a Comment