May 2, 2016

ವಿಶ್ವ ಸುಂದರಿ

ಕಾಡು ಬಂಡೆಯಾಗಿದ್ದ ನನಗೆ
ಸೆಳೆತವ ನೀಡಿದೆ
ನಾನೀಗ ನಗ್ನ ವಿಶ್ವ ಸುಂದರಿ
ಎದೆಯಲ್ಲಿ ಕಾಸಿನ ಸರ
ಸೊಟ್ಟಕ್ಕೆ ಸೊಟ್ಟದ ಪಟ್ಟಿ
ಮೂಗಿಗೆ ಮೂಗಬ್ಬತ್ತಿ
ಕಾಲಿಗೆ ಕಾಲು ಗೆಜ್ಜೆ
ಕೊರಳಿಗೆ ನಕಲಿಸು
ದುಂಡು ದುಂಡಾದ ಮೈ ಕಟ್ಟು ನಡುಸಣ್ಣ
ಹೊರೆ ನೋಟಕ್ಕೆ ಶರಣಾದ ಅದೆಷ್ಟು ಜನ
ಹಿಂದಿನಿಂದ ಸವಿ ಸವಿದವರು
ಮುಂದಿನಿಂದ ಮೈ ಮರೆತವರು
ಪಕ್ಕಕ್ಕೆ ನಿಂತು ಸೊಟ್ಟಕ್ಕೆ ಕೈ ಹಾಕಿ
ಹುಸು ನಗುವಲ್ಲಿ ಪೋಜ್ ಕೊಟ್ಟವರು ನೀವೆಲ್ಲ
ಹುಡುಕುತಿರುವೆ ಮುಂದಿನ ಭಂಗಿಯ
ಮಂದಹಾಸುತ್ತ

No comments:

Post a Comment