May 27, 2016

ಗಜಲ್-1

ಕಡಲೋಡಲ ತಾಪ ಹೆಚ್ಚುತ್ತಿದೆ ನೀ ಜೊತೆಯಲ್ಲಿರಬೇಕಿತ್ತು,
ಕಡಲಲ್ಲಿ ಸುತ್ತುವ ಸಂಭ್ರಮಕ್ಕ ಸಹಪಯಣಿಗ ನೀನಾಗಬೇಕಿತ್ತು.

ಅಪ್ಪಲ್ಲಿ ಸ್ಪರ್ಶವಿಲ್ಲ ತೋಳುಗಳು ಬಂದಿಸಲ್ಲಿ,
ಆದರೂ ನೀನಿರಬೇಕಿತ್ತು ಮುಸ್ಸಂಜೆ ಪಯಣದಲ್ಲಿ.

ಪ್ರತಿ ಅಲೆಯಲ್ಲಿ ಅಚ್ಚರಿಯ ನೆನಪು ತೇಲಿ ಬರುತ್ತಿದೆ,
ಒಮ್ಮೆ ಕಾಲು ಬೆರಳುಗಳ ಸ್ಪರ್ಶಿಸಿ, ಒಮ್ಮೊಮ್ಮೆ ಮೊನಕಾಲಿನವರೆಗೂ ಅವರಿಸಿ.

ಜಲಚರಕಗಳ ಕಣ್ಣೀರು ಎದೆಯಲ್ಲಿ ಬಿಗಿದಿಟ್ಟ ಹುಸಿರು ಕೇಳುಸುತ್ತಿಲ್ಲ,
ಪುಸ್ತಕದ ನಡುವಿಟ್ಟ ನವಿಲು ಗರಿಯ ಭಾವನೆ ಮಾತ್ರ ಜೋತೆಯಾಗಿದೆ.

ಸಾವಿರ ಕನಸುಗಳ ಕನಸಲ್ಲಿಯೇ ಕನವರಿಕೆಯಾಗಿದೆ,
ಬಾಳಲ್ಲಿ ಹೆಜ್ಜೆಗಳ ಗುರುತ್ತಿಲ್ಲ ಹಾದಿಯಲ್ಲಿ ಮರವಿಲ್ಲ ನೀ ಸಹ ಇಲ್ಲ.
-ದ್ಯಾವನೂರು ಮಂಜುನಾಥ್

ನನ್ನ ಈ ಒಂದು ಗಜಲ್ ಅನ್ನು ಓಬಳೇಶಘಟ್ಟಿರವರ ಮಗಳ ಮದುವೆಯಲ್ಲಿ ಮದುವೆಯ ಮದುರ ಕವಿಗೋಷ್ಠಿಯಲ್ಲಿ  ಗಜಲ್ ವಚನ ಮಾಡಿದೆ.


No comments:

Post a Comment