ಅವಿರಾಮ್ ಕಂಠೀರವ ಈತ ಉದಯೋನ್ಮಖ ಚಲನಚಿತ್ರ ನಿರ್ದೇಶಕ, ಓದಿದ್ದು, B.Sc. in Microbiology ಆದರೆ ಕಲೆಯಲ್ಲಿ ಆಸಕ್ತಿ ಹೊಂದಿರುವ ಈತನು ಕನ್ನಡ ಚಲನಚಿತ್ರರಂಗದಲ್ಲಿ ಸತತ 8 ರಿಂದ 10 ವರ್ಷಗಳಿಂದ ಸಹಾಯಕ ಹಾಗೂ ಸಹ ನಿರ್ದೇಶಕನಾಗಿ ದುಡಿದ ಅನುಭವವಿದೆ. ಹಲವಾರು ನಿದೇಶಕರ ಹತ್ತಿರ ಕೆಲಸ ಮಾಡಿದ ಈತನು 2010ರಲ್ಲಿ ‘ನೂರಾರು ಕನಸು’ ಎಂಬ ಮಕ್ಕಳ ಚಲನಚಿತ್ರ ನಿರ್ದೇಶಕ ಮಾಡಿದ್ದಾನೆ.

‘ಅನ್ನದಾತಂ ಶರಣಂ’ ಎನ್ನುವ ಅನ್ನದಾತನ ಗುಣಗಾನ ಮಾಡುವ ಈ ರೈತಗೀತೆಯ ಸಾರಥಿ ಅವಿರಾಮ್ ಕಂಠೀರವ. ಈತ ಈ ರೈತಗೀತೆಯ ಸಾಹಿತ್ಯ ಹಾಗೂ ನಿರ್ದೇಶನದ ಪೂರ್ಣ ಜವಬ್ದಾರಿ ಹೊತ್ತಿದ್ದಾನೆ. ಬಹಳ ಶ್ರಮಬಿದ್ದು ಆರ್ಥಿಕವಾಗಿ ಯಾರ ಬೆಂಬಲವಿಲ್ಲದೇ ಈ ರೈತಗೀತೆ ಅನ್ನದಾತಂ ಶರಣಂ’ ನನ್ನು ತಯಾರಿಸಿ ಕನ್ನಡ ನಾಡಿಗೆ ರೈತರಿಗೆ ಕೊಡುಗೆ ನೀಡುತ್ತಿದ್ದಾನೆ.
ಆ ಹಾಡಿನ ವಿಶೇಷತೆಗಳೆಂದರೆ : -
ಒಟ್ಟು 8 ಗಾಯಕರು ಒಂದೇ ಗೀತೆಯನ್ನು ಹಾಡಿದ್ದಾರೆ. ಅದರಲ್ಲೂ ಕನ್ನಡದ ಹೆಸರಾಂತ ಗಾಯಕರಿಂದ ಹಾಡಿಸಿರುವ ಹೆಗ್ಗಳಿಗೆ ಈ ಅನ್ನದಾತಂ ಶರಣಂ ಹಾಡಿಗಿದೆ. ಅದರಲ್ಲಿ ರಾಜೇಶ್ ಕೃಷ್ಣನ್, ಸಂಗೀತ ಕಟ್ಟಿ, ಶಶಿಧರ್‍ಕೋಟೆ, ರಮೇಶ್ ಚಂದ್ರ, ಅಜಯ್ ವಾರಿಯರ್, ಸುರೇಖ, ಅನುರಾಧ ಭm
ಈ 8 ಗಾಯಕರು ಹಾಡಿಗೆ ತಮ್ಮ ಕಂಠಸಿರಿಯನ್ನು ಅನ್ನದಾತನ ಗುಣಗಾನ ಮಾಡಲು ಯಶಸ್ವಿಯಾಗಿದ್ದಾರೆ ಮತ್ತು ಈ ಹಾಡಿನಲ್ಲಿ ನಮ್ಮ ಕರ್ನಾಟಕ ರಾಜ್ಯದ ಎಲ್ಲಾ ಕ್ಷೇತ್ರದ ಅನೇಕ ಗಣ್ಯವ್ಯಕ್ತಿಗಳು ರೈತರಿಗೆ ನಮಸ್ಕರಿಸಿ ಗೌರವ ಸೂಚಿಸುವ ದೃಶ್ಯಗಳನ್ನು ಒಳಗೊಂಡಿದೆ, ಮಹಾನ್ ಗಣ್ಯರು ಅನ್ನದಾತನಿಗೆ ತಮ್ಮ ತುಂಬು ಹೃದಯದಿಂದ ನಮಸ್ಕರಿಸಿ ಗೌರವ ಸೂಚಿಸಿದ್ದಾರೆ. ಅದರಲ್ಲಿ ಧರ್ಮಸ್ಥಳದ ಡಾ|| ವೀರೇಂದ್ರ ಹೆಗ್ಗಡೆಯವರು, ಜ್ಞಾನಪೀಠ ಪ್ರಶಸ್ತಿ ಪುರಸೃತರಾದ ಡಾ|| ಚಂದ್ರಶೇಖರ್ ಕಂಬಾರ, ಸ್ವಾತಂತ್ರ ್ಯ ಹೋರಾಟಗಾರರಾದ ಹೆಚ್.ಎಸ್. ದೊರೆಸ್ವಾಮಿ, ಖ್ಯಾತ ಕವಿಗಳಾದ ಪ್ರೋ||. ಕೆ.ಎಸ್. ನಿಸ್ಸಾರ್ ಅಹಮದ್, ಗಿರೀಶ್ ಕಾಸರವಳ್ಳಿ ಅಂತರಾಷ್ರಿ ್ಟೀಯ ಕಲಾತ್ಮಕ ಚಲನಚಿತ್ರ ನಿರ್ದೇಶಕರು, ಅನಿಲ್‍ಕುಂಬ್ಳೆ ಮಾಜಿ ವಿಶ್ವಖ್ಯಾತಿ ಕ್ರಿಕೆಟ್ ಪಟು, ಜಾವಗಲ್ ಶ್ರೀನಾಥ್ ಮಾಜಿ ವಿಶ್ವಖ್ಯಾತಿ ಕ್ರಿಕೆಟ್ ಪಟು, ಡಾ|| ವಿಜಯಲಕ್ಷಿ ್ಮ ಬಾಳೆಕುಂದ್ರಿ, ಮಕ್ಕಳ ಹೃದಯ ತಜ್ಞರು, ಸುರೇಶ್ ಹೆಬ್ಳಿಕರ್, ಪರಿಸರವಾದಿಗಳು ಹಾಗು ಚಲನಚಿತ್ರ ನಿರ್ದೇಶಕರು, ಮಾ|| ಹಿರಣ್ಯಯ್ಯನವರು, ಹೆಸರಾಂತ ರಂಗಭೂಮಿ ಕಲಾವಿದರು, ಸಿ.ಎನ್. ಮಂಜುನಾಥ್, ಖ್ಯಾತ ಹೃದ್ರೋಗ ವೈದ್ಯರು, ಅರುಂಧತಿನಾಗ್, ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದರು, ಭಾರತಿ ವಿಷ್ಣುವರ್ಧನ್, ಚಲನಚಿತ್ರ ಕಲಾವಿದರು, ಸಂತೋಷ್ ಹೆಗ್ಡೆ, ಮಾಜಿ ಲೋಕಾಯುಕ್ತರು ಹಾಗೂ ನ್ಯಾಯಮೂರ್ತಿಗಳು, ಬಿ.ಸರೋಜಾ ದೇವಿ, ಹಿರಿಯ ಚಲನಚಿತ್ರ ಕಲಾವಿದರು, ಬಿ. ಜಯಶ್ರೀ, ರಂಗಭೂಮಿ ಮತ್ತುಚಲನಚಿತ್ರ ಕಲಾವಿದರು ಹಾಗೂ ಹಂಸಲೇಖ, ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕರು. ಹೆಸರಾಂತ ಮಹಾನ್ ಗಣ್ಯರಿಂದ ರೈತರಿಗೆ ನಮಸ್ಕರಿಸುವ ತುಣುಕುಗಳನ್ನು ಚಿತ್ರೀಕರಿಸಲು ಮುಖ್ಯಕಾರಣವೆಂದರೆ ನಾವೆಲ್ಲರೂ ನಿಮ್ಮ ಜೊತೆಯಲ್ಲಿದ್ದೇವೆ, ನಿಮಗೆ ಈ ಸತ್ಯಾಂಶದಲ್ಲಿ ಉನ್ನತ ಸ್ಥಾನವಿದೆ, ನೀವು ‘ಅನ್ನದಾತರೇ ನೀವು ಶ್ರೇಷ್ಠ’ ಎಂದು ಸಾರುವ ಸಂದೇಶ ರವಾನಿಸಲು ನಿರ್ದೇಶಕ ಅವಿರಾಂ ಗಣ್ಯಾತಿಗಣ್ಯರಿಂದ ರೈತರಿಗೆ ನಮಸ್ಕಾರ ಸಲ್ಲಿಸಿದ್ದಾರೆ.
ಒಳ್ಳೆಯ ಪ್ರಯತ್ನ, ಮುಂದುವರೆಸಿ
ReplyDeleteಗವಿಸಿದ್ಧ ಹೊಸಮನಿ, ಧಾರವಾಡ