August 7, 2014

ವೈವಿಧ್ಯಪೂರ್ಣ ವಿಷಯಗಳ ಹೂರಣ- ‘ವಚನ ದುಂದುಭಿ’

     ಶತಮಾನದ ವಚನಕಾರರ ವಚನಗಳನ್ನು ಓದಿ ಅವುಗಳಿಂದ ಪ್ರಚೋದನೆಗೊಂಡು ಅವುಗಳಂತಹ ಸಾಲುಗಳನ್ನು ಕಟ್ಟಿ ಬರೆಯಲು ಪ್ರಾರಂಭಿಸಿದರು. ಹೀಗೆ ಕೊಟ್ರೇಶ್‍ರವರು ತಮ್ಮವಚನಗಳ ಮೂಲಕ ಸಾಹಿತ್ಯ ಲೋಕಕ್ಕೆ ಪ್ರವೇಶವನ್ನು ಪಡೆದರು. “ಗುರು ಕೊಟ್ಟೂರೇಶ” ಎಂಬ ಅಂಕಿತ ನಾಮದಿಂದ ತಮ್ಮ ವಚನಗಳನ್ನು ಪ್ರಾರಂಬಿಸಿದರು. ಇವರು “ವಚನ ದುಂದುಭಿ” ಎಂಬ ಕೃತಿಯು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದ ಅಖಿಲ ಕರ್ನಾಟಕ ಸಾಹಿತ್ಯ ಸಮ್ಮೇಳನದಲ್ಲಿ ಪ್ರಕಟಣೆಯಾಯಿತು
.
     “ವಚನ ದುಂದುಭಿ”  ವಚನ ಸಂಕಲನ ಹಸ್ತ ಪ್ರತಿ ರೂಪದಲ್ಲಿರುವಾಗಲೇ ರಾಜ್ಯಮಟ್ಟದ “ಸಿದ್ಧಯ್ಯ ಪುರಾಣಿಕ” ಪ್ರಶಸ್ತಿ ಲಭಿಸಿತ್ತು. ವಚನೋಲ್ಲಾಸದಲ್ಲಿ ಮಿಂದು ಸೃಜನಶೀಲ ಸಾಹಿತ್ಯದಲ್ಲಿ ಸಾಕ್ಷಾತ್ಕಾರಗೊಂಡು ಆಧುನಿಕ ವಚನಕಾರರಾಗಿ ‘ವಚನ ದುಂದುಭಿ’ ಎಂಬ ಕೃತಿಯ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಪ್ರವೇಶವನ್ನು ಮಾಡಿದ ಶ್ರೀಯುತರ ವಚನಗಳು ಪ್ರಸ್ತುತÀ ಸಾಮಾಜಿಕ ಮೇಲಿನ ಭಕ್ತಿ,ಜಾತಿಮತದ ಖಂಡನೆ, ಪರಿಸರ ಪ್ರಜ್ಞೆ ಹೀಗೆ ವೈವಿಧ್ಯಪೂರ್ಣ ವಿಷಯಗಳ ಸುತ್ತ ಹೆಣೆದವುಗಳಾಗಿವೆ.

 “ಮುದವ ನೀಡುವ ಹೆಣ್ಣು ಬೇಕೆನ್ನುವರಯ್ಯ 
 ಸದನದೀ ವದನ ತೋರೋ    ಸ್ತ್ರೀ ಬೇಕೆನ್ನುವರಯ್ಯ 
 ಉದರದಿರೋ ಅದೇ ಜೀವನ ಚಿವುಟುವರು ಕಾಣಯ್ಯ
 ಪ್ರಧಾನ ಭ್ರೂಣ ತನ್ನದೇ ಬೇಕೆನ್ನುವರಯ್ಯ 
 ಆದರದಿ ಪೇಳ ನಿನ್ನ ಪೊರೆದವಳು ಹೆಣ್ಣು”

     ಈ ಒಂದು ವಚನದಲ್ಲಿ ಪ್ರಸ್ತುತವಾದ ಈ ದಿನದಲ್ಲಿ ನೆಡೆಯುತ್ತಿರುವ ಹೆಣ್ಣು ಮಕ್ಕಳ ಭ್ರೂಣ ಹತ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಂದಿನ ಸಮಾಜದ ಮನಸ್ಥಿತಿಯನ್ನು ತಮ್ಮ ವಚನದಲ್ಲಿ ಚಿತ್ರಿಸಿದ್ದಾರೆ. ಶ್ರೀಯುತರು ಆಧ್ಯಾತ್ಮದ ಕಡೆಗೆ ಬಾಗಿ ತಮ್ಮಲ್ಲಿನ ಒಳಸತ್ವ ಒಳಿತನ್ನು ತಮ್ಮ ವಚನದಲ್ಲಿ ಹೀಗೆ ಹೇಳಿದ್ದಾರೆ.

 “ಮೇಘದಲ್ಲಿರೋ ಮಿಂಚಿನಂತೆ 
 ಸಮಯದಲ್ಲಿರೋ ಕಂಪಿನಂತೆ 
 ಹೊಂಗೆಯಲ್ಲಿರೋ ತಂಪಿನಂತೆ
 ನೀ ತುಂಬಿ ತುಳುಕೋ ಆತ್ಮದೊಡಲ 
 ಶಾಂತಿರಸ ಮೀಯುವೆ ಜಗದೊಡಲ
 ಚೆನ್ನಾಗಿ ನಿಲ್ಲು ಚನ್ನ ಸತ್ವ ಸೂಸೋವರೆಗೆ
 ಪೊರೆ ಎನ್ನ ಗುರು ಕೊಟ್ಟೂರೇಶ

    ಹುಟ್ಟು ಉಚಿತ ಸಾವು ಖಚಿತವಾದ ಈ ಜೀವನÀದಲ್ಲಿ ಹುಟ್ಟುವ ಪ್ರತಿಯೊಬ್ಬರು ಎನಾದರೂ ಸಾಧಿಸಿ ಹೋಗಬೇಕು. ಇಲ್ಲದಿದ್ದರೆ ಹುಟ್ಟಿಗೆ ಯಾವುದೇ ರೀತಿಯ ಅರ್ಥವಿರುವುದಿಲ್ಲ. ಎಂಬ ವಿಷಯವನ್ನು ಕೊಟ್ರೇಶ್‍ರವರು ತಮ್ಮ ವಚನದಲ್ಲಿ ಹೀಗೆ ಹೇಳೀದ್ದಾರೆ.

 “ಹುಟ್ಟಿಗೆ ತಾಯ ಉದರ ತೋರಿದೆ ನೀನು
 ಸಾವಿಗೆ ಭೂಮಿಯ ಒಡಲ ಸಾರಿದೆ ನೀನು
 ಹಸಿರ ಜೀವಕ್ಕೆ ಉಸಿರ £ೀಡಿದೆ ನೀನು
 ಭೂಮಿಯ ಸೊಂಡರ ತೊಡರಲು ನಾನು
 ಉಸಿರಿಗೆ ಊರುಗೋಲಾಗಿ ನಿಲ್ಲು ನೀನು”

      ಯಾವುದೇ ಕೆಲಸವನ್ನು ಮಾಡುವುದಕ್ಕೆ ಮುಂದೆ ಗುರಿ ಹಾಗೂ ಹಿಂದೆ ಗುರುವಿನ ಶಕ್ತಿ ಅತೀ ಮುಖ್ಯವಾಗಿದೆ ಅಂತಹÀ ಗುರುವಿನ ಸ್ಥಾನದಲ್ಲಿ ನೀನು ನಿಲ್ಲು ಎಂದು ಕೇಳಿಕೊಳ್ಳುತ್ತಿದ್ದಾರೆ. ನಮ್ಮ ಸ್ನೇಹದ ಬಳಗ ಹೇಗಿರಬೇಕು ಎಂಬ ವಿಷಯವನ್ನು ಒಂದು ವಚನದಲ್ಲಿ ಹೀಗೆ ಚಿತ್ರಿಸಿದ್ದಾರೆ.


 “ದುರ್ಜನನೊಡನೆ ಕಾದಾಡು 
  ಸಜ್ಜನನೊಡನೆ ಮೋದಾಡು 
 ಹೆಜ್ಜೇನು ಹುಳದಂತೆ ಹಾರಾಡು 
 ಬಿಜ್ಜೆಯ ಸೂಸುತ ತೇಲಾಡು 
 ಮಜ್ಜಿಗೆ ತುಪ್ಪದಿ ಮಿಂದಾಡು 

    ಹೀಗೆ ಸಮಾಜದ ಜ್ವಲಂತ ಸಮಸ್ಯೆಗಳ ಬಗ್ಗೆಯೂ ಚಿಂತೆನೆಯ ದೃಷ್ಠಿ ಹರಿಸಿ ವಾಸ್ತವ ಅಂಶವನ್ನು ಚಿತ್ರಿಸಿದ್ದಾರೆ. 12ನೆಯ ಶತಮಾನದ ಶರಣರ ವಚನಗಳಿಗೆ ಮಾರು ಹೋಗಿ ಆಧ್ಯಾತ್ಮದ ಕಡೆ ಚಿಂತಿಸುವ ಪ್ರಯತ್ನ ಮಾಡಿದ್ದಾರೆ. ಇವರ ಒಂದು ವಚನದಲ್ಲಿ ಭಕ್ತನಿಗೆ ಇರಬೇಕಾದ ಗುಣಗಳ ಬಗ್ಗೆ ಅವರ ವೈಚಾರಿಕತೆ ಹರಿದಪರಿಯನ್ನು ಚಿತ್ರಿಸಿದ್ದಾರೆ.

 “ಹಸಿದ ಹೊಟ್ಟಿಯ ಮೇಲೆ ಅಮೃತ 
 ಸೂಸಿದರೆ ಹಸಿವು ತಣಿಸುವುದೇ 
 ರಾಶಿ ರುದ್ರಾಕ್ಷಿಯ ಮೈ ತುಂಬ 
 ಬೆಸದೆಡೆ ಕಡು ಭಕ್ತನಾಗಬಲ್ಲನೆ?
 ಆಸೆಯ ದೂರಿರಿಸಿ ತನುಮನ ಧನವನರ್ಪಿಸಿ
 ಅಂತರದೀ ನಿನ್ನ ಕಾಣುವನು 
 ಭಕ್ತನಲ್ಲವೇ ಶ್ರೀ ಗುರು ಕೊಟ್ಟೂರೇಶ

    ಹಗರಣಗಳು ಯುಗ ಯುಗದಿಂದ ನಡೆಯುತ್ತ ಬಂದಿದೆ

 “ತ್ರೇತದಿ ತೋರಿದ ಸೀತಾಪಹರಣ 
 ದ್ವಾಪರದಿ ತೋರಿದ ವಸ್ತ್ರಾಪಹರಣ 
 ಕಲಿಯುಗದಿ ತೋರಿದ ನೀಚ ಹಗರಣ
 ಮುಂದೆನಿತು ತೋರೋ ಕೊಟ್ಟೂರೇಶ

      ಆಸೆ ಅಟ್ಟಕ್ಕೆ ಏರಿಸಿದ್ದಾರೆ ದುರಾಸೆ ಅಲ್ಲಿಂದ ದಬ್ಬುತ್ತದೆ. ಎಂಬ ಕವಿವಾಣಿಯಂತೆ. ಮನುಷ್ಯನಿಗೆ ಆಸೆ ಇರಬೇಕು ಅಂದರೆ ಅತೀ ಆಸೆ ಇರಬಾರದು. ಹೆಣ್ಣು, ಹೊನ್ನು, ಮಣ್ಣು ಇವುಗಳ ಬಗ್ಗೆ ಅತಿ ಆಸೆ ಪಡಬಾರದು. ಅತಿ ಆಸೆ ಪಟ್ಟರೆ ಮಹಾಪಾಪ ಬರುತ್ತದೆ ಎಂಬ ವಿಷಯವನ್ನು ಕೊಟ್ರೇಶ್ ಹೀಗೆ ಹೇಳುತ್ತಾರೆ.

 ಅನ್ಯ ಧನಕೆ ಆಸೆಗೈಯುವುದು ಪಾಪ 
 ಅನ್ಯ ಸ್ತ್ರೀಗೆ ಆಸೆಪಡುವುದು ಪಾಪ
 ಅನ್ಯ ನೆಲಕೆ ಆಸೆಪಡುವುದು ಪಾಪ
 ಅನ್ಯರ ನಿಂದೆ ಮಾಡುವುದು ಪಾಪ 
 ಅನ್ಯ ಜಾತಿಯೆಂದು ಜರಿಯುವನು ಮಹಾಪಾಪಿ
 ಎಂದನಯ್ಯ ನಮ್ಮ ಶ್ರೀ ಗುರು ಕೊಟ್ಟೂರೇಶ.

     ಹೀಗೆ ಕೊಟ್ರೇಶ್‍ರವರು ಸಮಾಜದ ಆಗು ಹೋಗುಗಳ ಬಗ್ಗೆ ಸೂಕ್ಷ್ಮವಾಗಿ ಚಿಂತಿಸಿ ತಮ್ಮ ಅನುಭವಗಳ ಪಕ್ವತೆಯಿಂದ ಸರಳ ಭಾಷೆಯಿಂದ ತಮ್ಮ ವಚನಗಳನ್ನು ಬರೆದಿದ್ದಾರೆ. ಹಾಸನ ಜಿಲ್ಲೆಯ ಸಾಲಗಾಮೆಯಿಂದ ಎಸ್.ವಿ.ರಂಗಣ್ಣನವರು ಆಧುನಿಕ ವಚನಗಾರರಲ್ಲಿ ಪ್ರಮುಖರು. ಇವರ ನಂತgದಹ ಸ್ಥಾನದಲ್ಲಿರುವ ಹಾಸನದವರೆಂದರೆ ಕೊಟ್ರೇಶ್ ಎಸ್ ಉಪ್ಪಾರ್‍ರವರು.

No comments:

Post a Comment