August 7, 2014

ಅಂತರಿಕ ದಹನ ಮತ್ತು ಬಾಹ್ಯ ದಹನ ಯಂತ್ರ ಮುಖ್ಯ ಘಟಕಗಳು

     ನಾವು ನೋಡುವ ಯಾವುದೇ ಒಂದು ಯಂತ್ರದ ಮುಖ್ಯ ಘಟಕ ಅಥವಾ ಮೋಟರಿನ ಮುಖ್ಯ ಕೆಲಸವೆಂದರೆ ವಾಹನವನ್ನು ಮುಂದಕ್ಕೆ ಚಲಿಸುವಂತೆ ಮಾಡುವುದು. ಇದರಲ್ಲಿ ಯಂತ್ರದ ಮುಖ್ಯ ಘಟಕವು ಉಷ್ಣತ ಶಕ್ತಿಯಿಂದ ಯಾಂತ್ರಿಕ ಶಕ್ತಿಯಾಗಿ ಪರಿರ್ವತಿಸುವಂತೆ ವಿನ್ಯಾಸವನ್ನು ಮಾಡಲಾಗಿರುತ್ತದೆ, ಇದೇ ರೀತಿಯಲ್ಲಿ ಮೋಟರನ್ನು ಸಹ ವಿನ್ಯಾಸವನ್ನು ಮಾಡಿರುತ್ತಾರೆ. 
     ಅಂತರಿಕ ದಹನ ಯಂತ್ರದ ಮುಖ್ಯ ಘಟಕದಲ್ಲಿ ಇಂಧನವು ಮುಖ್ಯ ಘಟಕದ ಒಳಗಡೆ ಅಂದರೆ ದಹನದ ಜಾಗದಲ್ಲಿ ಇಂಧನ ಮತ್ತು ಗಾಳಿ ಎರಡು ಮಿಶ್ರಣವಾಗಿ ಅಧಿಕ ಉಷ್ಣತೆಯಿಂದ ಉರಿದು ಯಾಂತ್ರಿಕ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ. ಇದೇ ರೀತಿಯಲ್ಲಿ ಯಂತ್ರದ ಮುಖ್ಯ ಘಟಕದ ಹೊರಗಡೆ ಇಂಧನ ಉರಿಯುವಂತಹ ಯಂತ್ರಗಳನ್ನು ಬಾಹ್ಯ ದಹನ ಯಂತ್ರದ ಮುಖ್ಯ ಘಟಕ ಎನ್ನಲಾಗುತ್ತದೆ. ಈ ಒಂದು ಯಂತ್ರದ ಮುಖ್ಯ ಘಟಕವನ್ನು ಉಗಿ ಯಂತ್ರದ ಮುಖ್ಯ ಘಟಕ ಎಂದು ಸಹ ಕರೆಯುತ್ತಾರೆ. ಈ ಎರಡು ರೀತಿಯ ಯಂತ್ರ ಘಟಕಳನ್ನು ಮತ್ತೆ ಎರಡು ರೀತಿಯಲ್ಲಿ ವಿಂಗಡಣೆ ಮಾಡಬಹುದಾಗಿದೆ. ಬಾಹ್ಯ ದಹನದ ಯಂತ್ರ ಮುಖ್ಯ ಘಟಕವನ್ನು ಉಗಿ ಯಂತ್ರ ಘಟಕ ಮತ್ತು ಚಕ್ರ ತಿರುಗುವ ಭಾಂಡಿ (ಟರ್ಬಾಯಿನ್) ಎಂದು  ಕರೆಯುತ್ತಾರೆ. ಜೊತೆಗೆ ಅಂತರಿಕ ದಹನದ ಯಂತ್ರದ ಮುಖ್ಯ ಘಟಕವನ್ನು ಕಿಡಿ ಯಂತ್ರ ಘಟಕ ಮತ್ತು ಒತ್ತಡದ ಯಂತ್ರ ಘಟಕ ಎಂದು ವಿಂಗಡಣೆ ಮಾಡಬಹುದಾಗಿದೆ. ಇವನ್ನು ಮತ್ತೆ ಎರಡು ಒಡೆತದ ಯಂತ್ರ ಘಟಕ ಮತ್ತು ನಾಲ್ಕು ಒಡೆತದ ಯಂತ್ರ ಘಟಕವಾಗಿ ಎಂದು ವಿಭಾಗಿಸಬಹುದು ಜೋತೆಗೆ ವೆನ್ಕಲ್ ಯಂತ್ರ ಘಟಕ ಮತ್ತುಅನಿಲ ಚಕ್ರ ತಿರುಗುವ ಬಂಡಿ (ಗ್ಯಾಸ್ ಟೊರ್ಬಿನ್) ಎಂದು ವಿಂಗಡಣೆಯನ್ನು ಮಾಡಬಹುದಾಗಿದೆ.
        ಅಂತರಿಕ ದಹನ ಮತ್ತು ಬಾಹ್ಯ ದಹನ ಯಂತ್ರ ಮುಖ್ಯ ಘಟಕಗಳೆರಡು ಸಹ ಮೂಲವಾಗಿ ಉಷ್ಣತ ಯಂತ್ರದ ಮುಖ್ಯ ಘಟಕಗಳಾಗಿದ್ದು ಇವು ಉಷ್ಣತ ಶಕ್ತಿಯನ್ನು ಯಾಂತ್ರಿಕ ಶಕ್ತಿಯಾಗಿ ಪರಿವರ್ತಣೆಯನ್ನು ಮಾಡುತ್ತದೆ, ಈ ಎರಡರ ನಡುವೆ ನಾವು  ಅನೇಕ ರೀತಿಯ ವ್ಯಾತ್ಯಾಸಗಳನ್ನು ನೋಡಬಹುದಾಗಿದೆ.
        ಅಂತರಿಕ ದಹನದಲ್ಲಿ ಯಂತ್ರದ ಮುಖ್ಯ ಘಟಕದೊಳಗೆ ಅಂದರೆ ದಹನದ ಜಾಗದಲ್ಲಿ ಇಂದನವು ಯಂತ್ರಿಕ ಶಕ್ತಿಯಾಗಿ ಪರಿಮಾರ್ತಿಸುತ್ತದೆ ಹಾಗೆ ಬಾಹ್ಯ ದಹನ ಯಂತ್ರದಲ್ಲಿ ದಹನದ ಹೊರಗಡೆ ಇಂದನವು ಯಂತ್ರಿಕ ಶಕ್ತಿಯಾಗಿ ಪರಿಮಾರ್ತಿಸುತ್ತದೆ. ಅಂತರಿಕ ದಹನದಲ್ಲಿ ತಾಪಮಾನ ಮತ್ತು ಒತ್ತಡ ಜಾಸ್ತಿರುತ್ತದೆ. ಜೋತೆಗೆ ಇದರಲ್ಲಿ ಉರುಳಿನಾಕಾರದ ಹೊರಳುನ್ನು ಬೆಣೆಯ ಜೋತೆಗೆ ನೇರವಾಗಿ ಸೇರಿಸಿರುತ್ತಾರೆ. ಉಗಿ ಅಥಾವ ಬಾಹ್ಯ ದಹನ ಯಂತ್ರದಲ್ಲಿ ನೀರನ್ನು ಕುದಿಸಲು ಜಾಸ್ತಿ ಜಾಗ ಬೇಕಾಗಿದ್ದು ಅಂತರಿಕ ದಹನದಲ್ಲಿ ಕೇವಲ ಸ್ವಲ್ಪ ಜಾಗದಲ್ಲಿ ಇಂದನವನ್ನು ಶೇಖರಣೆಯನ್ನು ಮಾಡಬಹುದಾಗಿದೆ. ಅಂತರಿಕ ದಹನದಲ್ಲಿನ ದಕ್ಷತೆ ಹೆಚ್ಚಿದ್ದು ಇದನ್ನು ವೇಗವಾಗಿ ಕಾರ್ಯಾರಂಭಿಸಲು ಮತ್ತು ಕಾರ್ಯಾನಿಲ್ಲಿಸಬಹುದಾಗಿದೆ. ಜೋತೆಗೆ ಉಗಿ ಯಂತ್ರಕ್ಕೆ ಹೋಲಿಸಿದರೆ ಇದರ ಬೆಲೆ ಸಹ ಕಡಿಮೆಯಾಗಿದೆ.
        ಇಂದಿನ ದಿನದಲ್ಲಿ ನಾವುಗಳು ಹೆಚ್ಚಾಗಿ ಅಂತರಿಕ ದಹನ ಯಂತ್ರಗಳನ್ನೆ ನೋಡ ಬಹುದಾಗಿದೆ. ಅದರಲ್ಲಿ ವಿವಿಧ ರೀತಿಯ ವಿನ್ಯಾಸಕರು ವಿನ್ಯಾಸಗಳನ್ನು ಮಾಡಿದ್ದು ಇಂದಿನ ಮಾರುಕಟ್ಟೆಯಲ್ಲಿ ತನ್ನದೆಯಾದ ಒಂದು ರೂಪವನ್ನು ಪಡೆದುಕೊಂಡಿದೆ. 


No comments:

Post a Comment