ರೈತರ ಬದುಕು ಮೂರಾಬಟ್ಟೆ ಅಕಾಲಿಕ ಮಳೆ ರೈತರ ಬದುಕನ್ನು ಮುಳುಗಿಸಿದೆ

ರಾಜ್ಯಾದ್ಯಂತ ಸುರಿಯುತ್ತಿರುವ ಅಕಾಲಿಕ ಮಳೆ, ನೇರವಾಗಿ ಹೊಡೆತ ಕೊಡುತ್ತಿರುವುದು ರೈತಾಪಿ ವರ್ಗಕ್ಕೆ. ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಮಳೆಯ ಕಾರಣದಿಂದ ಸ್ವಲ್ಪ ಬೆಳೆ ಕೊಯ್ಲು ಮಾಡಿ ಕಟಾವು ಆದ ಬೆಳೆಗಳನ್ನು ಒಣಗಿಸಲೂ ಆಗದೆ, ಸಂಸ್ಕರಿಸಲು ಆಗದೆ, ಇತ್ತ ಹೊಲದಲ್ಲೂ ಬೆಳೆಯನ್ನು ಬಿಡಲೂ ಆಗದೆ ಹಾಳಾಗುವ ಪರಿಸ್ಥಿತಿ ರೈತನದ್ದಾಗಿದೆ. ರಾಜ್ಯದಲ್ಲಿ ಅಕಾಲಿಕ ಮಳೆ ರೈತರನ್ನು ಹೈರಾಣಾಗಿಸಿದೆ, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತೆ ಕಟಾವಿಗೆ ಬಂದ ಬೆಳೆಯನ್ನು ಮಳೆ ನುಂಗಿ ಹಾಕಿದೆ.ಈ ಸಾಲಿನಲ್ಲಿ ಭತ್ತ,ಜೋಳ, ಬಾಳೆ, ಅಡಿಕೆ, ರಾಗಿ, ಬೇಳೆ-ಕಾಳುಗಳು, ಈರುಳ್ಳಿ, ತರಕಾರಿ, ಸೊಪ್ಪು ಇನ್ನಿತರ ಬೆಳೆಗಳು ಸೇರಿವೆ. 
ರೈತರ ಕಷ್ಟ ಒಂದಾ ಎರೆಡಾ ಮೊದಲೇ ರೈತ ಬೆಳೆದ ಬೆಳೆಗೆ ಸರಿಯಾದ ಬೆಲೆ ಇಲ್ಲಾ, ಫಸಲು ಬಂದು ಕಟಾವಿಗೆ ಬಂದಿದ್ದ ಬೆಳೆಗಳನ್ನು ಮಳೆ ನುಂಗಿದೆ, ರೈತರು ಬೆಳೆದ ಬೆಳೆ ನೀರು ಪಾಲಾಗಿದೆ. ರೈತರ ಬದುಕು ಈ ಮೊದಲೇ ಡಿಸೇಲ್, ಪೆಟ್ರೋಲ್ ಬೆಲೆಯಲ್ಲಿ ಹೆಚ್ಚಳವಾಗಿ ಪರಿಣಾಮವಾಗಿ ಸಾಗಣಿಕೆಯ ವೆಚ್ಚ ಹೆಚ್ಚಾಗಿ ಈ ಹೊರೆಯನ್ನು ರೈತರು, ಜನಸಾಮಾನ್ಯರು ಭರಿಸುವಂತಾಗಿದೆ. ಈ ನಡುವೆ ಮಳೆಯಿಂದ  ರೈತರ ಬದುಕು ಹೇಳತೀರದಾಗಿದೆ ವರ್ಷ ಪೂರ್ತಿ ದುಡಿದು ಕೈಗೆ ಬಂದ ತುತ್ತು ಬಾಯಿಗೆ ಸೇರುವಾಗ ಈ ರೀತಿ ಆದರೆ ರೈತ ಸಾಯದೆ ವಿಧಿಯಿಲ್ಲ ಹಾಗೂ ರೈತನ ಬದುಕು ಮಳೆಯೊಂದಿಗೆ ಆಡುವ  ಜೂಜಾಟವಾಗಿದೆ.
ಈ ಕೂಡಲೇ ಬೆಳೆ ಹಾನಿ ಸಮೀಕ್ಷೆ ನಡೆಸಿ ಆಯಾ ತಾಲೂಕಿನ ಪ್ರತಿಯೊಂದು ಹೋಬಳಿ ಮಟ್ಟದಲ್ಲೂ ಸಮೀಕ್ಷೆ ನಡೆಸಿ ಕೂಡಲೇ ರೈತರಿಗೆ ಪರಿಹಾರ ನೀಡಿ, ರಾಜ್ಯ ಸರ್ಕಾರ ಸಂಕಷ್ಟದಲ್ಲಿರುವ ರೈತರ ಪರವಾಗಿ ನಿಲ್ಲಬೇಕು ರೈತ ಬೆಳೆದ  ಬೆಳೆಗೆ ಸರಿಯಾದ ಬೆಲೆ ಹಾಗೂ ಸೂಕ್ತ ಪರಿಹಾರ ಬೇಗ ಕೊಡಬೇಕು...
- ದ್ಯಾವನೂರು ಮಂಜುನಾಥ್

No comments:

Post a Comment