October 19, 2020

ಹೇಮಾವತಿ ನದಿಯ ದಂಡೆಯಲ್ಲಿ ಲಿಫ್ಟ್ ನೀರಾವರಿ ಯೋಜನೆಗಳ ನಿರ್ಮಾಣ

1970ರ ಏಪ್ರಿಲ್ 17ರಂದು ದೆಹಲಿಯಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಶ್ರೀ.ಎಂ.ಕರುಣಾನಿಧಿ ಹಾಗೂ ಕರ್ನಾಟಕದ ಮುಖ್ಯಮಂತ್ರಿಗಳಾದ ಶ್ರೀ ವಿರೇಂದ್ರ ಪಾಟೀಲರು, ಮೈಸೂರು ಮಹಾರಾಷ್ಟ್ರ ಗಡಿ ಪ್ರಶ್ನೆ ಹಾಗೂ ಕಾವೇರಿ ನದಿ ವಿಚಾರದ ವಿವಾದ ನಡೆಸುವ ವೇಳೆಯೊಳಗೆ ಮೈಸೂರಿನ ಹಿತ ರಕ್ಷಣೆಗಾಗಿ ‘ರಾಜ್ಯದ ಸರ್ವ ಪಕ್ಷಗಳ ಉನ್ನತ ನಿಯೋಗ’ವೊಂದು ದೆಹಲಿಗೆ ಹೋಗಿ ಸ್ವಲ್ಪ ಕಾಲ ಅಲ್ಲೇ ಬಿಡಾರ ಮಾಡುವುದು ಅಗತ್ಯ.ಈ ವಿಷಯವನ್ನು ಸರ್ವ ಪಕ್ಷಗಳ ಜೊತೆÀ ಚರ್ಚಿಸಿಸುತ್ತೆವೆ ಎಂದು ಶಾಸನ ಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಶ್ರೀ.ಎಸ್.ಶಿವಪ್ಪನವರು ಶಾಸನಸಭಾಧ್ಯಕ್ಷರೊಡನೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಬಿನಿ ಜಲಾಶಯದಿಂದ ಕೇರಳದ ಪ್ರದೇಶವು ಮುಳಗಡೆಯಾಗುವುದೆಂಬ ಕೇರಳದ ವಿರೋದವನ್ನು ಪ್ರಸ್ತಾಪಿಸಿ ಇಂತಹ ಕ್ಲಿಷ್ಟ ಸಮಸ್ಯೆಯಲ್ಲಿ ಉಭಯ ರಾಜ್ಯಗಳ ನಡುವೆ ಪರಸ್ಪರ ಸಮಾಲೋಚನೆ ನಡೆಸಿ ಇದನ್ನು ನಾವು ಇತ್ಯರ್ಥಪಡಿಸಿಕೊಳ್ಳತ್ತೇವೆ ಎಂದು ಶಿವಪ್ಪನವರು ತಿಳಿಸುತ್ತಾರೆ.

1924ರ ಒಪ್ಪಂದ ಬದ್ಧವೇ?

        ಸಾಮಾನ್ಯ ರೈತರಲ್ಲಿ ತಮ್ಮ ಜಮೀನಿಗೆ ನೀರಿನ ದಾಹ ಹೆಚ್ಚಾಗತೊಡಗಿತು. ಆದರೆ  ‘1924ರ ಕಾವೇರಿ ಒಪ್ಪಂದ’ ಒಂದು ರೀತಿಯಲ್ಲಿ ವಿರೋಧಭಾಸದಿಂದ ಕೂಡಿತ್ತು. ಈ ಒಪ್ಪಂದದಲ್ಲಿರುವಂತೆ, ಒಂದೆಡೆ ಮೈಸೂರು ರಾಜ್ಯವು 45ದಶ ಲಕ್ಷ ಟಿ.ಎಂ.ಸಿ ನೀರನ್ನು ನೀರಾವರಿಗಾಗಿ ಸಂಗ್ರಹಿಸುವ ಅವಕಾಶ ಜೊತೆಗೆ ಮತ್ತೊಂದೆಡೆ ಕೃಷ್ಣರಾಜ ಸಾಗರದಿಂದ ನಿರ್ಧಿಷ್ಟಪ್ರಮಾಣದ ನೀರನ್ನು ಬಿಡುಗಡೆ ಮಾಡಬೇಕೆಂದು ಹೇಳಲಾಗಿತ್ತು. ಆದರೆ ಇದು ಹೇಗೆ ಸಾಧ್ಯವೆಂದು ತಮಿಳುನಾಡು ಸರ್ಕಾರ ತನ್ನ ಮೊಂಡು ವಾದವನ್ನೇ ಹಿಡಿದರೇ, ಮೈಸೂರು ಸರ್ಕಾರವು ಸಹ ‘1924ರ ಒಪ್ಪಂದ’ವನ್ನೇ ಅಕ್ರಮವೆಂದು ಹೇಳಬಹುದಾಗಿತ್ತು.

ಕಾವೇರಿಯು ಕೊಡಗಿನಲ್ಲಿ ಹುಟ್ಟಿ ಹರಿದು ಮೈಸೂರು ರಾಜ್ಯವನ್ನು ಪ್ರವೇಶಿಸಿದೆ ಮತ್ತು  ಈ ಒಪ್ಪಂದವಾದಾಗ ಕೊಡಗು ಪ್ರತ್ಯೇಕ ರಾಜ್ಯವಾಗಿ ಚೀಫ್ ಕಮೀಷನರರ ಆಡಳಿತಕ್ಕೊಳಪಟ್ಟಿತ್ತೆಂಬುದನ್ನೂ ಎತ್ತಿ ತೋರಿಸಿ ವಿರೋಧ ಪಕ್ಷದ ನಾಯಕರು ಈ ಒಪ್ಪಂದಕ್ಕೆ ಕೊಡಗು ಸರ್ಕಾರ ಸಹಿ ಹಾಕಿರಲಿಲ್ಲ. ಆದ್ದರಿಂದ ಈ ಒಪ್ಪಂದವು ಕಾನೂನು ಬದ್ಧವಾಗುವುದೇ ಎಂಬುದನ್ನು ಕಾನೂನು ಪರಿಣತರು ಅಧ್ಯಯನ ನಡೆಯಬೇಕಾಗಿದೆ ಎಂಬ ಮಾತುಗಳು ಕೇಳ ಬರುತ್ತಿತ್ತು.

        ಆದರೆ ಅಷ್ಟರಲ್ಲಿ ಕಾವೇರಿ ನದಿಯ ನೀರಿನ ಹಂಚಿಕೆ ಬಗೆಗೆ ತಮಿಳುನಾಡು ಸರ್ಕಾರವು ಸೂಚಿಸಿದ್ದ ಪ್ರತಿಭಟನೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಬರೆದಿದ್ದ ಪತ್ರ ಇದಾವುದೂ ಹೇಮಾವತಿ ಜಲಾಶಯಕ್ಕೆ ಆಡ್ಡಿಯುಂಟು ಮಾಡದೆಂದೂ ರಾಜ್ಯ ಸರ್ಕಾರವು ಹೇಮಾವತಿ ನಿರ್ಮಾಣವನ್ನು ತೀವ್ರಗತಿಯಿಂದ ಮುಗಿಸಲು ತೆಗೆದುಕೊಂಡಿತ್ತು.

ಲಿಫ್ಟ್ ನೀರಾವರಿಗಳಿಂದಾಗಿ ಹಣ ಪೋಲಾಗುತ್ತಿತ್ತು

        ರಾಜ್ಯ ಸರ್ಕಾರದ  ಹೊಳೇನರಸಿಪುರ ತಾಲ್ಲೂಕಿನ ಹೇಮಾವತಿ ನದಿಯ ದಂಡೆಯಲ್ಲಿ ಹಲವಾರು ಲಿಫ್ಟ್ ನೀರಾವರಿ ಯೋಜನೆಗಳ ನಿರ್ಮಾಣ ಮಾಡುವ ಬಗ್ಗೆ ಪ್ರಸ್ತಾಪಿಸಿತ್ತು. ಆದರೆ ವಿರೋಧ ಪಕ್ಷದ ನಾಯಕರು, ಹೊಳೆನರಸೀಪುರ ತಾಲ್ಲೂಕಿನಲ್ಲಿ ಹೇಮಾವತಿ ನಾಲೆಯು ಮೊದಲ ಹಂತದಲ್ಲೇ ಬರುವುದರಿಂದ ಜಲಾಶಯದ ನಿರ್ಮಾಣದೊಡನೆಯೇ ನಾಲೆಗಳ ಮೂಲಕ ನೀರಿನ ಬಿಡುಗಡೆಯೂ ಆಗುವುದು. ಹಾಗಾಗೀ ನಾಲೆಬರುವ ಪ್ರದೇಶಗಳಲ್ಲೇ ಈ ಲಿಫ್ಟ್ ನೀರಾವರಿ ಯೋಜನೆಗಳು ನಿರುಪಯುಕ್ತ ಜೊತೆಗೆ ಈ ಯೋಜನೆಯು ಅಂದಿನ ರಾಜ್ಯದ ಆರ್ಥಿಕ ಪರಿಸ್ಥಿತಿಯ ಮೇಲೆ ತೀರ ಹಣವನ್ನು ಹೊಡುಕೆ ಮಾಡಿ ವ್ಯರ್ಥ ಮಾಡುತ್ತಿದೆ ಎಂದು ಆರೋಪಿಸಿದರು.

        ಜಿಲ್ಲೆಯಲ್ಲಿನ ಅಭಾವ ಪೀಡಿತ ಪ್ರದೇಶಗಳಿಗೆ ಅಗತ್ಯವಾದ ನೀರಾವರಿ ಸೌಲಭ್ಯವಿಲ್ಲದಿರುವುದರಿಂದ ತೊಂದರೆಯು ಅಧಿಕವಾಗಿದ್ದು ಈ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಿಕೊಡಬೇಕಾದರೆ, ಭೂಮಿಯೊಳಗೆ ಹರಿದು ನಿರುಪಯುಕ್ತವಾಗಿ ಸಮುದ್ರ ಸೇರುತ್ತಿರುವ ಆಪಾರ ನೀರನ್ನು ಮೇಲಕ್ಕೆತ್ತುವುದೊಂದೇ ಮಾರ್ಗ, ಸೂಕ್ತವಾಗಿತ್ತು.

- ದ್ಯಾವನೂರು ಮಂಜುನಾಥ್

No comments:

Post a Comment