August 14, 2018

ಸ್ವಾತಂತ್ರಕ್ಕಾಗಿ ಹಾಸನ ಸೀಮೆಯವರ ಕೊಡುಗೆ.



-ದ್ಯಾವನೂರು ಮಂಜುನಾಥ್ 
     1920ರ ಆಗಸ್ಟ್ 1 ರಂದು ತಿಳಕರು ತೀರಿಕೊಂಡಾಗ ಹಾಸನದ ಹೈಸ್ಕೂಲು ವಿದ್ಯಾರ್ಥಿಗಳೆಲ್ಲರೂ ಪಾಠಶಾಲೆಯಿಂದ ಹೊರಬಿದ್ದು ತಿಳಕ, ಗಾಂಧೀಜಿ ಮತ್ತು ಭಾರತ ಮಾತೆಯ ಭಾವಚಿತ್ರದೊಂದಿಗೆ ಊರಿನಲ್ಲೆಲ್ಲ ಮೆರವಣಿಗೆ ಹೊರಟರು. ಉದ್ದಕ್ಕೂ ಪರದೇಶೀವಸ್ತ್ರ ಸಂಗ್ರಹಿಸುವುದೇ ಅವರ ಕಾರ್ಯವಾಯಿತು. ಹೊರಲಾರದ ಪರದೇಶೀ ವಸ್ತ್ರಗಳ ಮೂಟೆಗಳೊಂದಿಗೆ ಜ್ಯೂಬಿಲಿ ಮೈದಾನವನ್ನು ಸೇರಿ. ಬರಿ ವಿದ್ಯಾರ್ಥಿಗಳೇ ಇದ್ದ ಮೆರವಣಿಗೆಗೆ ದಾರಿಯಲ್ಲಿ ಅನೇಕ ಪುರ ಪ್ರಮುಖರು ಕೂಲಿಗಳು, ರೈತರು, ಹರಿಜನರು, ಮಹಿಳೆಯರು ಇವರೆಲ್ಲ ಕೂಡಿ ದೊಡ್ಡ ಸಮೂಹವೇ ಆಯಿತು. ಆಗ ಖಾದಿ ಬಟ್ಟೆ ಎಲ್ಲ ಕಡೆ ಸಿಕ್ಕುತ್ತಿರಲಿಲ್ಲ. ವಿದ್ಯಾರ್ಥಿಗಳು ಪರದೇಶೀವಸ್ತ್ರ ಸುಡಲು ಕೇಳುವಾಗ “ಇದನ್ನು ಕೊಟ್ಟು ನಾವು ಏನನ್ನು ಧರಿಸುವುದು?” ಎಂದು ಸೇತುರಾಮಯ್ಯಂಗಾರ್ಯರು ಕೇಳಿದಾಗ ಎಲ್ಲಾ ವಿದ್ಯಾರ್ಥಿಗಳು ಅಂತರಿಕ್ಷವನೇ ನೋಡಿದರು. ಅಂದಿನ ಹಸಹಕಾರ್ಯಕ್ಕೆ ಅತ್ಯಂತ ಹೆಚ್ಚಾದ ಪರದೇಶಿವಸ್ತ್ರ (ತಮ್ಮ ಬಳ್ಳೆಯ ಜರಿ ಬಟ್ಟೆ) ಕೊಟ್ಟವರೆಂದರೆ ಇದೇ ಸೇತು ರಾಮಯ್ಯಂಗಾರ್ಯರೇ ಎಸ್.ಎಸ್.ನಂಜುಂಡಯ್ಯ ಒಂದು ಜರಿಯರುಮಾಲನ್ನೇ ಕೊಟ್ಟರು. ವಿದ್ಯಾರ್ಥಿಗಳು ಒತ್ತಾಯಮಾಡಿ ತೊಟ್ಟ ಕೋಟನ್ನೂ ಇಸಿದು ಕೊಂqರು. ಅಡ್ಮೊಕೇಟ್ ವೆಂಕಟೇಶಯ್ಯನವರು ಬಹಳ ವಾದಿಸಿದನಂತರ ತಮ್ಮ ನೆಕ್ ಟೈ ಮಾತ್ರ ಕೊಟ್ಟರು. (ಅದರೆ 1927ರಲ್ಲಿ ಗಾಂಧೀಜಿ ಹಾಸನಕ್ಕೆ ಬಂದಾಗ ಇದೇ ವೆಂಕಟೇಶಯ್ಯನವರೇ ಸ್ವಾಗತ ಸಮಿತಿಯಲ್ಲಿ ಪ್ರಮುಖ ಪಾತ್ರವಹಿಸಿದ್ದರು). ಅಂದಿನ ಸರ್ಕಾರಿ ಬಾಲಕರ ಶಾಲೆಯ ಹೆಡ್ಮಾಸ್ಟರು ಆರ್.ವಿ.ಕೃಷ್ಣಸ್ವಾಮಿ ಅಯ್ಯರ್ ಜರಿವಸ್ತ್ರವೊಂದನ್ನು ಕೊಟ್ಟರು. ಗಾಂಧೀಜೀಕಿ ಜೈ. ಭಾರತ ಮಾರಾಕೀ ಜೈ ಫೋಷಣೆಗಳೊಂದಿಗೆ ಈ ಅಗಾಧ ವಸ್ತ್ರದ ರಾಶಿಗೆ ಬೆಂಕಿಯನ್ನು ಂದು ವಿದ್ಯಾರ್ಥಿ ಸಮೂಹ ತಗುಲಿಸಿದರು.

     1927ರ ಆಗಸ್ಟ್‍ನಲ್ಲಿ ಮಹಾತ್ಮರು ಹಾಸನಕ್ಕೆ ಬಂದಿಗ ರೈಲು ನಿಲ್ದಾಣಕ್ಕೆ ಹತ್ತಿರವಿರುವ ಜಿ|| ಬೋ|| ಮುಸಾಫಿರ್ ಖಾನೆಯಲ್ಲಿ ಬಿಡಾರದ ವ್ಯವಸ್ಥೆಯನು ಮಾಡಲಾಯಿತು. ಬಿ.ಎಂ.ಮಂಜಪ್ಪಗೌಡ ಮತ್ತು ದುದ್ದ ಶ್ಯಾನುಭೋಗ ಸುಬ್ಬರಾಯರು ಕಸ್ತೂರಿ ಬಾ ಅವರಿಗೆ ಒಂದು ಚಿಪ್ಪು ಬಾಳೆ ಹಣ್ಣು ಕೊಟ್ಟುರು ಇದು ಮಹಾತ್ಮರ ಗಮನವಿತ್ತು. ಕಾರೂನೇಶನ್ ಭವನದ ಮುಂದಿನ ವಿಶಾಲ ಮೈದಾನದಲ್ಲಿ ಮಹಾತ್ಮರನ್ನು ಸ್ವಾಗತಿಸುವದಕ್ಕೂ ನಿಧಿಯ ಅರ್ಪಣೆಗೂ ವ್ಯವಸ್ಥೆ ಆಗಿತ್ತು. ಹಾಸನದಲ್ಲಿ ಅಷ್ಟು ದೊಡ್ಡ ಸಭೆ ಹಿಂದೆ ಸೇರಿದುದಿಲ್ಲ. ಗಾಂಧೀಜಿಯ ಭಾಷಣವನ್ನು ಗಂಗಾಂಧರರಾವ್ ದೇಶಪಾಂಡೆಯವರು ಕನ್ನಡಕ್ಕೆ ಅನುವಾದಮಾಡಿದರು. ಗಾಂಧೀಜಿ ಎಷ್ಟು ಶಾಂತರಾಗಿ ಮಾತನಾಡತ್ತಿದ್ದರೋ ಅಷ್ಟು ರಭಸದಿಂದ ಗಂಗಾಧರಾಯರು ಮಾತನಾಡುತ್ತಿದ್ದರು. ಮಹಾತ್ಮರು ಒಂದು ಮಾತಿನಲ್ಲಿ ಹೇಲಿದುದನ್ನು ಗಂಗಾಧರರಾಯರು ನೂರು ಮಾತುಗಳಲ್ಲಿ ವಿವರಿಸುತ್ತಿದ್ದರು. ಭಾರತಕ್ಕೆ ಆಂಗ್ಲೇಯರಿಂದಾದ ಕಷ್ಟನಷ್ಟ ನೈತಿಕ ಅವನತಿಗಳನ್ನು ವಿವರಿಸುವಾಗ ಅವರ ಮುಖ ಕೆಂಪಾಗಿ ಆ ವೇಳೆಯಲ್ಲಿ ಅವರ ಮೀಸೆಯ ತುದಿಗೆ ಬೆಂಕಿ ಕಡ್ಡಿ ಹಿಡಿದರೆ, ಅದು ಹತ್ತಿಕೊಳ್ಳುತ್ತದೊ ಎಂಬತೆ ತೋರುತ್ತಿದ್ದಿತು. ಜನರು ಗಾಂಧಿಯವರ ದರ್ಶನವನ್ನು ಹೇಗೆ ಮರೆಯುವುದಿಲ್ಲವೋ ಹಾಗೆಯೇ ಗಂಗಾಧರರಾಯರ ಭಾಷಣ ದರ್ಶನಗಳನ್ನೂ  ಅಂದಿನ ಜನ ಮರೆಯುವುದಿಲ್ಲ.
     ಆ ಸಂಜೆ ಮತ್ತೆ ಅದೇ ಸ್ಥಳದಲ್ಲಿ ರಾಜಗೋಪಾಲಾಚಾರಿಯವರ ಭಾಷಣವಾಗಿ ಅವರ ಭಾಷಣದ ವಿಷಯವೂ ಹರಿಜನೋದ್ಧಾರವೇ. ಮರುದಿನ ಮೋಟಾರಿನಲ್ಲಿ ಗಾಂಧೀಜಿ ಹೊಳೆನರಸೀಪುರಕ್ಕೆ ಹೋದರು. ಕಾರೋನೇಶನ್ ಕಟ್ಟಡದ ಎದುರಿಗಿರುವ ಭಾರಿ ಮೈದಾನದಲ್ಲಿ ಸೊಗಸಾದ ಚಪ್ಪರ ವೇದಿಕೆಗಳನ್ನು ಏರ್ಪಡಿಸಿದ್ದರು.
     ನಂತರ ಗಾಂಧೀಜಿಯವರು ಜಿ.ಎಸ್.ಸಂಪತ್ತಯ್ಯಂಗಾರ್ ರವರ ಹೈಸ್ಕೂಲಿಗೆ ಬೇಟಿ ನೀಡಿದಾಗ “ವಿದೇಶೀ ಟೊಪ್ಪಿಗಳನ್ನೆಲ್ಲಾ ಬೆಂಕಿಗೆ ಹಾಕಿ” ಎಂದು ಹೇಳಿದರು. ಎಲ್ಲರೂ ಸಹ ಟೊಪ್ಪಿಗಳನ್ನು ಗುಡ್ಡದಂತೆ ಹಾಕಿ ಭಸ್ಮಮಾಡಿದರು. ನಂತರದ ದಿನದಕ್ಕಿ ಸಂಪತ್ತಯ್ಯಂಗಾರ್ ಗಾಂಧೀಜಿಯವರ ಪ್ರಭಾವ ಮತ್ತು ಗೊರೂರು ರಾಮಸ್ವಾಮಿ ಆಯ್ಯಂಗರ್ ರವರ ಮಾರ್ಗದರ್ಶದಲ್ಲಿ ಸ್ವಗ್ರಮದಲ್ಲಿ ಸಣ್ಣ ಕೈಗಾರಿಕೆಗಳನ್ನು ಉತ್ತಮಪಡಿಸಲು ಪ್ರಯತ್ನಿಸಿದರು. ಇದಕ್ಕೂ ಮುಂಚೆ ಗೂರೂರಿನಲ್ಲಿ ಇವರ ಅಣ್ಣಂದಿರಾದ ಜಿ.ಎಸ್.ಐಯ್ಯಂಗಾರ್ ರವರು ಖಾದಿ ಅಭಿವೃದ್ಧಿ  ಪಡಿಸುವುದರಲ್ಲಿ ಬಹಳ ಆಸಕ್ತಿಯನ್ನು ತೆಗೆದು ಕೊಂಡಿದ್ದರು.
     1930ರಲ್ಲಿ ಉಪ್ಪಿನ ಸತ್ಯಾಗ್ರಹ ಕಾಲಕ್ಕೂ ಜಿಲ್ಲೆಯಲ್ಲಿ ಚಳವಳಿ ಉಲ್ಬಣವಾಯಿತು. ಪರದೇಶಿವಸ್ತ್ರ ಬಹಿಷ್ಠಾರ ಆಗಿನ ಮುಖ್ಯ ಕಾರ್ಯವಾಗಿದ್ದರೂ ಹಾಸನವೇ ಮುಂತಾದ ಅನೇಕ ಸ್ಥಳಗಳಲ್ಲಿ ಪರದೇಶೀವಸ್ತ್ರ ಬಹಿಷ್ಕಾರ ಪಾನನಿರೋಧ ಹಿಂದೂ ಮುಸ್ಲಿಂ ಐಕ್ಯ ಅಸ್ಪøಶ್ಯತಾನಿವಾರಣೆ ಈ ಎಲ್ಲ ಕಾರ್ಯಗಳು ಭರದಿಂದ ಸಾಗಿದವು. 1939ರಲ್ಲಿ ಅರಸೀಕೆರೆಯಲ್ಲಿ ಅರಣ್ಯ ಸತ್ಯಾಗ್ರಹ ತುಂಬ ಉಗ್ರರೂಪ ತಾಳಿತು. ಅರ್ಕಲಗೂಡಿನ ಎ.ವೆಂಕಟರಾಯ್ಯ ವೇದಾರಣ್ಯ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿ ಸೆರೆಮನೆ ಸೇರಿದರು. ಬ್ರಿಟಿಷ್ ಕರ್ನಾಟಕದ ವೈಯಕ್ತಿಕ ಸತ್ಯಾಗ್ರದಲ್ಲಿ ಗೊರೂರು ಸಂಪತ್ತಯ್ಯಂಗಾರ್ಯರು ಭಾಗವಹಿಸಿ ಸೆರೆ ಕಂಡರು.
ಬೇಲೂರಿನ ಎಸ್.ಬಸವೇಗೌಡರು ಸಾಣೇನಹಳ್ಳಿಯಲ್ಲಿ ಓದುತ್ತಿದ್ದಾಗ 1934ರಲ್ಲಿ ಪ್ರಜಾಪ್ರತಿನಿಧಿ ಸಭೆಯ ಚುನಾವಣೆಯಲ್ಲಿ ಬೋರಣ್ಣಗೌಡರು ಪ್ರಚಾರಕ್ಕೆ ಬಂದಾಗ ಇವರ ಸಂಪರ್ಕವಾಗಿ ಇವರೆ ಸೂಚನೆಯಂತೆ ಜಾವಗಲ್, ಹಳೇಬೀಡು, ಸಂತೆಗಳಿಗೆ ಹಿಂದಿನ ರಾತ್ರಿ ಹೋಗಿ ಸಂತೆಯಲ್ಲಿ ಸುಂಕ ಕೊಡದಂತೆ ಪ್ರಚಾರ, ಹರಿಜನ ಕಾಲೋನಿಗಳಲ್ಲಿ ಹೆಂಡ ಹೋಗಿ ಸಂತೆಯಲ್ಲಿ ಸುಂಕ ಕೊಡದಂತೆ ಪ್ರಚಾರ, ಹರಿಜನ ಕಾಲೋನಿಗಳ್ಲಿ ಹೆಂಡ ಕುಡಿಯದಂತೆ ಪ್ರಚಾರ ಮರಗಳಿಗೆ ಕಟ್ಟದ ಹೆಂಡದ ಗಡಿಗೆ ಬಡೆಯುವುದು, ಮುಂತಾದ ಚಟುವಟಿಕೆ ನಡೆಸುತ್ತಿದ್ದಾರು.
     ಮೊದಲಿನಿಂದಲೂ ಸಹ ರಾಷ್ಟ್ರೀಯ ಚಟುವಟಿಕೆಯಲ್ಲಿ ಹೆಸರಾದ ಅರಸೀಕೆರೆ ತಾಲ್ಲೂಕಿನ ಹಾರನಹಳ್ಳಿ ಗ್ರಾಮ 1937ರಲ್ಲಿ ಹಾಸನಕ್ಕೆ ಮಹದೇವ ದೇಸಾಯಿ ಬಂದಿದ್ದಾಗ ಹಾರನಗಳ್ಳಿಯಿಂದ ಹೆಂಗಸರು ಗಂಡಸರು ಆದಿಯಾಗಿ ಎರಡುನೂರು ಜನ ಬಂಡು ಸಭೆ ಮೆರವಣಿಗೆಯಲ್ಲಿ ಭಾಗವಹಿಸಿ ಮಹದೇವಭಾಯಿಯವರ ಮೆಚ್ಚುಗೆಗಳಿಸದರು. ಈ ಜವಾಬ್ದಾರಿಯನ್ನು ಹಾರನಹಳ್ಳಿ ರಾಮಸ್ವಾಮಿಯವರು ವಹಿಸಿದ್ದಾರು. ಹಾರನಹಳ್ಳಿ ಗ್ರಾಮದ ಮುನಿಸಿಪಾಲಿಟಿಯಲ್ಲಿ ಸ್ವಾತಂತ್ರ್ಯ ಘೋಷಣೆ ನಿರ್ಣಯ ಮಾಡಿದ್ದರಿಂದ ಸರ್ಕಾರದವರು ಪುರಸಭೆಯನ್ನು ಕಿತ್ತುಹಾಕಿದರು.
     ಹಾರನಹಳ್ಳಿಯ ಪ್ರಮುಖ ಹಿರಿಯರಾದ ರಾಮಸ್ವಾಮಿಯವರ ಸೋದರಮಾವ ಶಾನುಭೋಗ ಸೀತಾರಾಮಯ್ಯನವರು ತಮ್ಮ ದಫ್ತರವನ್ನು ಸರ್ಕಾರಕ್ಕೆ ವಾಪಸು ಮಾಡಿ ನೌಕರಿ ತ್ಯಜಿಸಿದರು ಪ್ರತಿ ಚಳವಳಿಯಲ್ಲೂ (1930ರಿಂದ1947ರ ವರೆಗೆ) ಇವರೇ ಪ್ರಮುಖರಾಗಿ ಗ್ರಾಮದ ನೂರಾರು ಜನ ಭಾಗವಹಿಸಿದರು ಸೇಂದಿ ಅಂಗಡಿ ಪಿಕೆಟಿಂಗ್, ಈಚಲು ಮರ ಕಡಿದು ಹಾಕುವುದು, ಅರಣ್ಯ ಸತ್ಯಾಗ್ರಹ ಇತ್ಯಾದಿ ಕಾರ್ಯಕ್ರಮಗಳು ನಡೆದವು. ಗ್ರಾಮದ ಇತರ ಕಾರ್ಯಕರ್ತರೆಂದರೆ ಎಚ್.ರಾಮಯ್ಯ, ವೆಂಕಟರಾಮಯ್ಯ, ಮುದ್ದುರಂಗನಾಯ್ಕ, ಎಚ್.ಎನ್.ಕೃಷ್ಣಪ್ಪ, ಮಾಯಾಚಾರ್, ಬೋರಪ್ಪ ಮುಂತದವರು.
ಎಚ್.ಎನ್.ವೆಂಕಟಪ್ಪರವರು ಮೈಸೂರಿಂದ ಹಾಸನಕ್ಕೆ 1938ರಲ್ಲಿ ಬಂದು ಇಲ್ಲಿಯ ಚಟುವಟಿಕೆಗಳಲ್ಲಿ ಪಾಲುಗೊಳ್ಳುತ್ತಿದ್ದರು. ಇವರು ಮೈಲಾರಿ ದೇವಸ್ಥಾನದ ಬಳಿ ತಿಂಗಳಿಗೆ ಒಂದು ರೂಪಾಯಿ ಬಾಡಿಗೆಗೆ ಚಿಕ್ಕ ರೂಮಲ್ಲಿ ಟೈಲರಿಂಗ್ ಮಾಡಿಕೊಂಡು ಅಲ್ಲಿಗೆ ವಿದ್ಯಾರ್ಥಿಗಳನ್ನು ಬರಮಾಡಿ ಟೆಲಿಪೋನ್ ವೈರ್ ಕತ್ತರಿಸುವುದು, ಸೇಂದಿ ಗುಡಿಸಲಿಗೆ ಬೆಂಕಿಹಾಕುವುದು ಕಟ್ಟಿದ ಗಡಿಗೆಗಳನ್ನು ಒಡೆಯುವುದು, ಈಚಲಮರ ಕಡಿಯುವುದು ಹೀಗೆಲ್ಲ ಕೆಲಸಗಳನ್ನು ಮಾಡುತ್ತಿದ್ದ ಇವರು ನ್ಯಾಷಿನಲ್ ಪ್ರೇಸ್ ಮಹಡಿಯ ಮೇಲೆ ಗುಪ್ತಸಭೆಗಳನ್ನು ನಡೆಸುತ್ತಿದ್ದಾರು.
     1938ರಲ್ಲಿ ತಿಪಟೂರಿನಲ್ಲಿ ಸಭೆ ಮೆರಣಿಗೆಯಲ್ಲಿ ಹಾರನಹಳ್ಲಿ ರಾಮಸ್ವಾಮಿ ಭಾಗಹಿಸಿದಿನಿಂದಲೆ ಖಾದಿ ಮತ್ತು ಸ್ವದೇಶಿ ವ್ರತಗಳ ಸತತವಾದ ಪರಿಪಾಲನೆಯನ್ನು ಮಾಡುತ್ತ ಬಂದರು. 1942ರಲ್ಲಿ ಹಾಸನ ಜಿಲ್ಲೆಯಲ್ಲಂತೂ ಚಳವಳಿ ಅತ್ಯಂತ ವ್ಯಾಪಕವಾದ ರೀತಿಯಲ್ಲಿ ಬೆಳೆಯಿತು. ಹಾಸನ ಜ್ಯೂಬಿಲಿ ಮೈದಾನದಲ್ಲಿ ಪ್ರತಿ ಸಂಜೆಯೂ ಬಹಿರಂಗ ಸಭೆ ನಡೆಯುತ್ತಿದ್ದಿತು. ಪಾನನಿರೋಧ ಮತ್ತು ಸಂತೆಸುಂಕ ಪ್ರತಿಭಟನೆ ಇವು ಈ ಜಿಲ್ಲೆಯ ಅತಿಮುಖ್ಯವಾದ ಮತ್ತು ಅತಿವ್ಯಾಪಕವಾದ ಚಟುವಟಿಕೆಗಳಾದವು. ಪ್ರತಿಯೊಂದು ಸಂತೆಯಲ್ಲಿ ಜನ ಸುಂಕವನ್ನು ಕೊಡಲು ನಿರಕರಿಸಿದರು. ಎರಡೇ ವಾರದೊಳಗೆ ಹಳ್ಳಿಗೆಲ್ಲ ಹರಡಿ ಮೂರನೆಯ ವಾರ ಇಡೀ ಜಿಲ್ಲೆಯ ಯಾವ ಸಂತೆಯಲ್ಲಿಯೂ ಜನ ಸುಂಕವನ್ನೇ ಕೊಡಲಿಲ್ಲ. ಬುದ್ದಿಕೆಟ್ಟ ಅಧಿಕಾರಿಗಳು ಪ್ರತಿ ಸಂತೆಯಲ್ಲೂ ಲಾಠೀ ಚಾರ್ಜು ಮಾಡಿ ತಾಲ್ಲೂಕು ಲಾಕಪ್ ಹಿಡಿಸುವಷ್ಟು ಜನರನ್ನು ತಂದು ಕೂಡಿಹಾಕಿ ಒಂದೆರಡು ದಿನ ಬಡಿದು ಬಿಡುತ್ತಿದ್ದರು. ಹೆಚ್ಚಿಗೆ ಆದ ‘ಅಪರಾಧಿ’ಗಳನ್ನು ಸಾವಿರಾರು ಸಂಖ್ಯೆಯಲ್ಲಿ ಹಾಸನದ ಸೆರೆಮನೆಗೆ ಹಿಡಿದು ತಂದು ಸೇರಿಸುತ್ತಿದ್ದರು ಅನೇಕ ತಿಂಗಳು ಯಾವ ಸಂತೆಯಲ್ಲಿಯೂ ಸರ್ಕಾರಕ್ಕೆ ಸುಂಕವೇ ವಸೂಲಾಗಲಿಲ್ಲ. ಈ ಜಿಲ್ಲೆ ಇದರ ಜೊತೆ ಮತ್ತೊಂದು ಅಂಶದಲ್ಲಿಯೂ ಇಡೀ ದೇಶಕ್ಕೆ ಮಾರ್ಗದರ್ಶನ ಮಾಡಿತು.  ಪ್ರಥಮವಾಗಿ ಈ ಜಿಲ್ಲೆಯಲ್ಲಿ ಸಾಮೂಹಿಕವಾಗಿ ಅನೇಕ ಪಟೇಲರು ತಮ್ಮ ಉದ್ಯೋಗಕ್ಕೆ ರಾಜೀನಾಮೆ ಕೊಟ್ಟರು. ಹಳ್ಲಿಗಳಿಗೆ ಹೆಂಡದ ಲಾರಿ ಹೋಗುವುದನ್ನು ತಡೆದು ನಿಲ್ಲಿಸಿ ವಾರಗಟ್ಲೆ ಹೆಂಡ ಊರೊಳಗೆ ಪ್ರವೇಶಿಸದಂತೆ ಊರ ಜನ ಮಾಡಿದರು. ದಾಸರಕೊಪ್ಪಲಿನಲ್ಲಿ ನಡೆದ ಹೆಂಡದಂಗಡಿ ಪಿಕೆಟಿಂಗ್‍ನಲ್ಲಿ  ಎಸ್.ಕೆ.ಸತ್ಯನಾರಾಯಣ ಪಾಲುಗೊಂಡಿದ್ದಾರು. ಇವರು ಹೆಂಡವನ್ನೆಲ್ಲ ಸುರಿದು ಅಂಗಡಿ ಸುಟ್ಟದ್ದರಿಂದ ಲಾಠೀಚಾಜ್ ಆಯಿತು. ಮುಂದೆ ಈಚಲುಮರ ಕಡಿಯುವಾಗ ಗೋಳೀಬಾರ್ ಆಗಿ ಬಂಧ ಆಗಿ (ಸೆಪ್ಟೆಂಬರ್) ಮೂರು ತಿಂಗಳು ಸಜ ಆಯಿತು ಇವರ ಜೊತೆಯಲ್ಲಿ ಎಚ್.ಸಿ.ದಾಸಪ್ಪ, ತಾಳಕೆರೆ, ರಂಗರಾವ್, ಬಿ.ಎನ್.ಬೋರಣ್ಣಗೌಡ ಇವರೆಲ್ಲ ಇದ್ದರು.
ಬೇಲೂರಿನಲ್ಲಿ 16-.9-1942ರಲ್ಲಿ ಬೃಹತ್ ಪ್ರದರ್ಶನ ಆರಂಭಿಸಬೇಕೆಂದು 05-09-1942ರಲ್ಲಿ ಎಸ್ ಬಸವೇಗೌಡರು ಗುಪ್ತಸಭೆಯನ್ನು ಮಾಡಿ ತೀರ್ಮಾನ ಮಾಡಿ. ಅಂದು ಬೇಲೂರಿನ ಟೌನ್ ಹಾಲ್ ಬಳಿ ಮೈದಾನದಲ್ಲಿ ಸಾವಿರಾರು ಜನ ಪ್ರದರ್ಶನಕ್ಕಾಗಿ ನೆರೆದರು. ಬಿ.ಎಸ್.ಚಿದಂಬರಶೆಟ್ಟಿ, ಬಿ.ಸಿ.ಗುಂಡಶೆಟ್ಟಿ ಇತ್ಯಾದಿ ಮುಖಂಡರನ್ನು ಬಂಧಿಸಿದರು. ಆಗ ಚನ್ನರಾಯಪಟ್ಟಣದಲ್ಲಿ ತೀರ ಗಲಭೆಗಳಾಗಿ ಹೆಚ್ಚಿನ ಪೋಲಿಸರು ಅಲ್ಲಿಗೆ ಹೋಗಿದ್ದಾರಿಂದ ಬಸವೇಗೌಡರು ತಪ್ಪಿಸಿಕೊಂಡು ಜಾವಗಲ್, ಹಳೇಬೀಡು ಸಂತೆಗಳಲ್ಲಿ ಹೆಂಡದಂಗಡಿ ಲೂಟಿಮಾಡಿದಲ್ಲದೆ ಸಂತೆ ಕಂಟ್ರಾಕ್ಟ್ ದಾರನು ಸುಂಕ ವಸೂಲುಮಾಡದಂತೆ ತಡೆದರು. ಅಕ್ಟೋಬರ್ ಕೊನೆಯ ವಾರದಲ್ಲಿ ಹಳೇಬೀಡು, ಜಾವಗಲ್ ಸಂತೆಗಳಲ್ಲಿ ಹೆಂಡದಂಗಡಿ ಒಡೆದು ಹಾಕಿದ್ದು ವಿಕೋಪಕ್ಕೆ ಹೋಗಿ ರೈತರು ದಂಗೆ ಏಳುವಂಥ ಪರಿಸ್ಥಿತಿ ಸರಕಾರಕ್ಕ ಗೋಚರವಾಯಿತು.
29-10-1942ರಂದು ಮ್ಯಾಜಿಸ್ಟ್ರೇಟರೂ ಅಮಲ್ದಾರರೂ 200 ರಿಜರ್ವ್ ಪೋಲಿಸರು ಬೆಳಗ್ಗೆ ನಾಲ್ಕು ಗಂಟೆಗೆ ಎಸ್ ಬಸವೇಗೌಡರ ಮನೆಗೆ ಮುತ್ತಿದರು. ಬೇಕಾದವರನ್ನು ತಂದು ಒಪ್ಪಿಸದಲ್ಲಿ ಊರನ್ನು ನಾಶಮಾಡಲಾಗುವುದು ಎಂದು ಊರ ಮುಖಂಡರನ್ನು ಬೆದರಿಸಿದರು. ಆಗ ನನ್ನಿಂದ ಊರಿಗೆ ತೊಂದರೆ ಬೇಡವೆಂದು ಎಸ್ ಬಸವೇಗೌಡರೆ ಪೋಲಿಸರಿಗೆ ವಶವಾದರು. 7-5-1973ರಂದು ಇವರುನ್ನು ಬಿಡುಗಡೆ ಮಾಡಲಾಯಿತು.
ಎಚ್.ವೀರಬಸಪ್ಪರವರು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಗಾಂಧೀಜಿಯವರ ಭಾಷಣ ಕೇಳಿ ಕಪ್ಪು ಟೋಪಿಯನ್ನು ಬೆಂಕಿಗೆ ಹಾಕಿ ಖಾದಿ ಟೋಪಿಯನ್ನು ಧರಿಸಿ ಶಾಲೆಗೆ ಹೋಗಲಾರಂಭಿಸಿದ ಇವರು ಸರರ್ಕಾರಿ ಕಟ್ಟಡಗಳ ಮೇಲೆ ಧ್ವಜಾರೋಹಣ ಹಾಗೂ ಸುತ್ತಲ ಹಳ್ಳಿಗಳಲ್ಲಿ ನಡೆಯುತ್ತಿದ್ದ ಪ್ರಚಾರ ವಿಧ್ವಂಸಕ ಕೃತ್ಯಗಳಲ್ಲಿ ಪಾಲುಗೊಂಡು 1942ರಲ್ಲಿ ಹಾಸನದಲ್ಲಿ ಆಂಡರ್ ಟ್ರಾಯಲ್ ಆಗಿ ಬೆಂಗಳೂರು ಜೈಲಿನಲ್ಲಿ ಮೂರೂವರೆ ತಿಂಗಳ ಶಿಕ್ಷೆ ಅನುಭವಿಸಿದರಿಂದ ಜನನಿಂದೆಗೂ ಗುರಿಯಾಗಿ 1947ರಲ್ಲಿ ಒಂದು ವಾರ ಲಾಕಪ್‍ನಲ್ಲಿದ್ದರು.
     ಹಾಸನ ತಾಲ್ಲೂಕು ಸೂಪ್ಪಿನಹಳ್ಳಿ ಗ್ರಾಮದ ಸುತ್ತಮುತ್ತ 30 ರಿಂದ 40 ಹಳ್ಳಿಗಳಲ್ಲಿ ಪ್ರಜಾರಾಜ್ಯ ಘೋಷಿಸಲಾಯಿತು. ಆ ಪ್ರದೇಶಕ್ಕೆ ಪೋಲಿಸರು ಪ್ರವೇಶಿಸುವಂತೆಯೇ ಇರಲಿಲ್ಲ. ಗಂಗೂರು ಗ್ರಾಮಕ್ಕೆ ಪೋಲಿಸರ ಪ್ರವೇಶವಾಗಿ ಘರ್ಷಣೆಯಲ್ಲಿ ಗೋಲಿಬಾರ್ ನಡೆದು ಒಬ್ಬನ ಸಾವಾಯಿತು. ಎರಡು ತಿಂಗಳುಗಳ ಕಾಲ ಭೂಗತವಾಗಿದ್ದು ಹಾಸನ ಜಿಲ್ಲೆಯನ್ನೆಲ್ಲ ವ್ಯಾಪಿಸಿ ತೀವ್ರವಾದ ಚಳವಳಿ ನಡೆಯಿತು.
     1943-44ರಲ್ಲಿ ಕಮ್ಯುನಿಸ್ಟರ ಕೈಗೊಂಬೆಯಾಗಿದ್ದ ರಾಜ್ಯದ ವಿದ್ಯಾರ್ಥಿ ಫೆಡರೇಶನ್‍ಅನ್ನು ಭಿನ್ನಮಾರಿ ಮೈಸೂರು ಸಂಸ್ಥಾನದ ವಿದ್ಯಾರ್ಥಿ ಕಾಂಗ್ರೆಸ್ ಸ್ಥಾಪಿಸಿನೆ ಮಾಡಲಾಯಿತು. ಅದರಲ್ಲಿ ವಿ.ಎಸ್.ಕೃಷ್ಣಯ್ಯರ್, ಮೈಸೂರು ಶ್ರೀಕಂಠಪ್ಪ, ಸೋಗಾಲ್ ನಾಗಭೂಷಣ ಮುಂತಾದ ಪ್ರಮುಖರಿದ್ದರು ಇದರಲ್ಲಿ ಹಾರನಹಳ್ಳಿ ರಾಮಸ್ವಾಮಿಯವರು ಅಧ್ಯಕ್ಷರಾದರು.
ಗೊರೂರು ರಾಮಸ್ವಾಮಿ ಆಯ್ಯಾಂಗರ್ ರವರು ಮೈಸೂರು ಕಾಂಗ್ರೆಸ್ಸಿನ ಗ್ರಾಮೋದ್ಯೋಗ ವಿಭಾಗದ ಹೊಣೆಗಾರಿಕೆಯನ್ನು ನಿರ್ವಹಿಸುತ್ತಿದ್ದಾಗ ಎಲ್ಲಾ ಕಾಂಗ್ರೇಸ್ ಪ್ರದರ್ಶನಗಳಲ್ಲಿಯೂ ಗ್ರಾಮೋದ್ಯೋಗ ಭಾಗದ ಪ್ರಯೋಗ ಪ್ರದರ್ಶನ ನಡೆಸುತ್ತಿದ್ದರು. 1942ರಲ್ಲಿ ಬಂಧಿತನಾಗಿ 15 ತಿಂಗಳು ಪೂರ್ತಿ ಕಾರಾಗೃಹವಾಸವನ್ನು ಅನುಭವಿಸಿ ಬಿಡುಗಡೆಯನಂತರ ಗೊರೂರಿಗೆ ಮರಳಿ ಗ್ರಾಮಪುನರುಜ್ಜೀವನದ ಕಾರ್ಯದಲ್ಲಿ ತೊಡಗಿದರು. 1947ರಲ್ಲಿ “ಪ್ರಾಲೇಸ್ ಚಲೋ” ಚಳವಳಿಯಲ್ಲಿ ಸೇರಿ ಸೆಪ್ಟೆಂಬರ್‍ನಲ್ಲಿ ಸೆರೆಮನೆ ಕಂಡರು. ಗೂರೂರು ರಾಮಸ್ವಾಮಿರವರ ಮಗ ರಾಮಚಂದ್ರ ಸ್ವಾತಂತ್ರ್ಯ ಹೋರಾಟದಲ್ಲಿ ತುಮಕೂರಿನಲ್ಲಿ ಪೋಲಿಸರ ಗುಂಡಿನೇಟಿಗೆ ಬಲಿಯಾದಾಗ ಗಾಂಧೀಜಿಯರ ಜೊತೆಯಲ್ಲಿ ದಕ್ಷಿಣ ಭಾರತ ಪ್ರವಾಸದಲ್ಲಿ ಇದ್ದಾರು ಆಗ ಗಾಂಧೀಜಿಯವರು “Your son has become a martyr. He will be remembered as long as the glorious freedom fight history will be remembered”” ಎಂದು ಗೊರೂರುವರಿಗೆ ಬರೆದರು.
     1947ರಲ್ಲಿ ಮೈಸೂರು ರಾಜ್ಯದಲ್ಲಿ ಜವಾಬ್ದಾರಿ ಸರ್ಕಾರ ಚಳವಳಿ ಪ್ರಾರಂಭಾದಗ ಹಾರನಹಳ್ಳಿ ರಾಮಸ್ವಾಮಿಯವರು ಹುಬ್ಬಳ್ಳಿಯಲ್ಲಿದ್ದರು ಅಲ್ಲಿದ ಹಾಸನಕ್ಕೆ ಬಂದು ಅದನ್ನೇ ಕೇಂದ್ರವಾಗಿಟ್ಟುಕೊಂಡು ತೀವ್ರವಾಗಿ ಚಳವಳಿಯನ್ನು ನಡೆಸಿದರು. ಒಂದು ತಿಂಗಳ ಕಾಲ ಸಭೆ ಮೆರವಣಿಗೆ ನಡೆಸಿ ವಿದ್ಯಾರ್ಥಿಗಳು ಶಾಲಾಕಾಲೇಜುಗಳನ್ನು ತ್ಯಜಿಸಿದರು. ನಂತರ ರಾಮಸ್ವಾಮಿಯನ್ನು ಅರಸೀಕೆಯಲ್ಲಿ ದಸ್ತಗಿರಿ ಮಾಡಿ ಎರಡು ತಿಂಗಳು ಹಾಸನದ ತುರಂಗದಲ್ಲಿ ಇಟ್ಟಿದ್ದರು.
ಟಿ.ಎನ್.ದೇಶಿಕನ್, ಬಿ.ಕೆ.ಕೃಷ್ಣಯ್ಯ, ಟಿ.ರಾಮಾನುಜ ಪುಟ್ಟೇಗೌಡ ಮತು ಎನ್.ರಂಗನಾಥನ್ ರವರು ಹಾಸನದಿಂದ “ಮೈಸೂರು ಚಲೋ”ಗೆ ಕಾಲುನಡಿಗೆಯಲ್ಲಿ ಹೊರಟು ಮುಂದೆ ಹಾರನಹಳ್ಳಿಯ ಹಲವು ಜನ ಸಿಕ್ಕಿ 85ಕ್ಕೆ ಏರಿತು ಆಗ ಎಡತೊರೆ ಸಮಿಪಿಸಿದಂತೆ ಕೆಲವರು ಸಿ.ಐ.ಡಿಗಳು ಇವರ ಜೋತೆಗೆ ಸೇರಿ ಎಲ್ಲಾವರು ಛತ್ರದಲ್ಲಿ ಊಟದ ಮಾಡುವಾಗ ಸರಿಯಾಗಿ ಊಟ ಮಾಡುವುದಕ್ಕೂ ಬಿಡದೇ ಗಾಳಿಯಲ್ಲಿ ಗುಂಡು ಹಾರಿಸಿ  ಬೆದರಿಸಿ “ನೀವೆಲ್ಲ ಹಿಂದಕ್ಕೆ ಹೋಗಿ” ಎಂದಾಗ “ಪ್ರಾಣ ಹೋದರೂ ಸರಿ, ಹಿಂದಕ್ಕೆ ಹೋಗಲಾರೆವು” ಎಂದು ಮರುದಿನ ಕನ್ನಂಬಾಡಿ ಮಾರ್ಗವಾಗಿ ಮೈಸೂರು ಸೇರಿದರು.
1947ರಲ್ಲಿ ಸ್ವರಾಜ್ಯ ದೊರಕಿತು. ಆದರೆ ಇಜ್ಜೋಡು  ಗುಲಾಮಗಿರಿಯನ್ನು ಅನುಭವಿಸುತ್ತಿದ್ದ ದೇಶಿಯ ಸಂಸ್ಥಾನಗಳಲ್ಲಿ ಜವಾಬ್ದಾರೀ ಸರಕಾರ ದೊರೆಯಲಿಲ್ಲ. “ಕುದುರೆಗಿಂತ ಲದ್ದಿ ಬಿರುಸು” ಎಂಬಂತೆ ಬ್ರಿಟಿಷರ ಆಳ್ವಿಕೆ ಹೋದರೂ ನಮ್ಮ ರಾಜರು ನಮ್ಮ ಮೇಲಿನ ಉಕ್ಕಿನ ಹಿಮ್ಮಡಿಯನ್ನು ಸಡಲಿಸಲಿಲ್ಲ. ಮತ್ತೊಂದು ಚಳವಳಿ ಸಹ ಅನಿವಾರ್ಯವಾಯಿತು. ಬ್ರಿಟಿಷ್ ಸರಕಾರದ ದಬ್ಬಾಳಿಕೆಯ ಇನ್ನೂ ಹೆಚ್ಚು ಕ್ರೂರ ಪುನರವತರಣ ಆಗ ಆಯಿತು. ಈ ಜಿಲ್ಲೆಯ ಇಬ್ಬರು ಬಾಲಕರು ರಾಮಚಂದ್ರ ಮತ್ತು ರಾಮಸ್ವಾಮಿ ಪೋಲಿಸರ ಗೋಳಿಬಾರಿಗೆ ಸಿಕ್ಕಿ ಮಡಿದು ಹುತಾತ್ಮರಾದರು.

No comments:

Post a Comment