April 20, 2016

ನೆನಪು

ಆ ನಿನ್ನ ಕಿರುಬೆರಳ ಸ್ಪರ್ಶವು
ನನ್ನ ಭುಜದಲ್ಲಿ ನಿನ್ನ ತಲೆಯು
ಒಲವಲ್ಲಿ ಹುಟ್ಟಿದ ಆ ನೆನಪುಗಳ
ನಾ ಹೇಗೆ ಮರೆಯಲ್ಲಿ
ಆ ಒಂದು ಮದುರ ಕ್ಷಣಗಳ
ನೀ ಒಮ್ಮೆ ಕಳುಹಿಸಿ ಹೋಗು ಬಾ
ತಿರುಗೊ ಭೂಮಿಲಿ ಈ ಕನಸುಗಳ
ಮನಸ್ಸಲ್ಲಿ ಹುಟ್ಟುವ ಈ ಪ್ರೀತಿಗೆ
ಉಸಿರೇ ಇಲ್ಲದೆ ನಾ ಹೇಗೆ ಬದುಕಲಿ
ಒಂದೇ ಸೂರಲ್ಲಿ ಬದುಕುವ ಆಸೆಗೆ
ಎಳ್ಳು ನೀರು ಬಿಟ್ಟಿ ನೀ ಹೋದೆಯ
ಬಾಳಲ್ಲಿ ನೂರಾರು ನೆನಪುಗಳ
ಸಸಿಯಂತೆ ನೆಟ್ಟು ನೀ ದೂರವಾದೆಯ
ಇರುಳಲ್ಲಿ ಸೂರ್ಯ ಹಗಲಲ್ಲಿ ಶಶಿಯ
ಹುಡುಕುವ ಹಾಗಾಗಿದೆ ಈ ಜೀವಕ್ಕೆ
ಚೂರಾದ ಹೃದಯ
ಹಾಡೊಂದ ಹಾಡು ಹಾಡುತ್ತಿದೆ
ಈ ಬಾಳಲ್ಲಿ

No comments:

Post a Comment