April 17, 2016

ನನ್ನ ಒಲವಿನ ಹಾದಿಲಿ ಮೀಟಿದೆ

ನನ್ನ ಒಲವಿನ ಹಾದಿಲಿ ಮೀಟಿದೆ
ಅನುರಾಗದ ನವ ಪಲ್ಲವಿ

ಮೊದಲನೆ ನೋಟಕ್ಕೆ
ಸಂಭ್ರಮದ ಕುಣಿತವ
ಕಂಡೆವು ನಮ್ಮಲ್ಲಿ

ರವಿಯ ಕಿರಣಕ್ಕೆ ಮಂಜಿನ ಹನಿ ಕರಗುತ್ತಿದೆ
ನಿನ್ನ ಚೆಲುವ ಮೊಗಕ್ಕೆ ಇದೆ ನನ್ನೆದೆ ಹಾಡು

ಸಹ್ಯಾದ್ರಿ ಸಾಲುಗೆ ಮೋಡಗಳ ಚುಂಬಿಸಿದಂತೆ
ನಿನ್ನೆದೆಯ ಹೂವಿಗಿಂದು ನಾ ದುಂಬಿಯಾಗಿ ಬಂದು
ನಿನ್ನ ತುಟಿಗಳ ಮೇಲೆ ನನ್ನ ಹೆಸರ ಬರೆವೆ

ಆಕಾಶದಲ್ಲೀಗ ನೀ ಒಂದು ಕಾಮನ ಬಿಲ್ಲು
ಮೊದಲನೆ ಬಿಸಿಲ್ಮಳೆಗೆ ಪ್ರೇಮದ ಕಲರವ
ಕೇಳೋಣ ಬಾ ಪ್ರೇಮವೃಕ್ಷದಡಿ ಕುಳಿತು

ಒಲವಿನ ಉಸಿರಿನಲ್ಲಿ
ಮೈ ಮನವ ಮರೆತು ಹಾಡುವ
 ನಮ್ಮ ಒಲವಿನಗೀತೆ ಇಂದು

ಮಾವಿನ ತೋಟದಲ್ಲಿ ಕೋಗಿಲೆ ಸ್ವರವ
ಮಲ್ಲಿಗೆ ವನದ ಪರಿಮಳವ
ನಮ್ಮ ಒಲವಿನ  ಹಿತವ
ಹಿಡಿದಿಡಲು  ಸಾಧ್ಯವೇ
ನೀ.. ಚಿಂತಿಸದಿರು

No comments:

Post a Comment