ಅಂಬೆಗಾಲನಿಕ್ಕಿ ವಸಲನ್ನು ದಾಟಿದೆ
ಅಪ್ಪ ಕೊಡಿಸಿದ ನಮ್ಮೂರ ಜಾತ್ರೆಯ
ಕಾರು ತರಲು
ಮೆಟ್ಟಿಲು ಜಾರಿ ಬಿದ್ದೆ
ಜಗತ್ತಿಯ ಹಿಡಿದು ಮೇಲೆದ್ದು ಇಟ್ಟೆ
ನಾ ಮೊದಲ ಹೆಜ್ಜೆ
ಕಲಿತೆ ಬಾಳಿನ ಮೊದಲ ಹೆಜ್ಜೆಯ
ಅಪ್ಪನ ನೋಡುತ್ತ
ಅಜ್ಜ ಮಾಡಿದ ತೆಂಗಿನ ಗರಿಯ
ಕಿರಗಟ್ಟಲೆ ಹಿಡಿದು ಓಡುವಾಗ
ಬಿದ್ದೊಡನೆ ಅಮ್ಮೇಂದು ನಾ ಆಳುವಾಗ
ಓಡೋಡಿ ಬಂದಳು ನನ್ನಮ್ಮ
ಹೆಬ್ಬೆರಳ ರಕ್ತಕ್ಕೆ ಅರಿಸಿನ ಅಚ್ಚಿ
ಸೀರೆಯ ಅಂಚ ಕಟ್ಟುವಾಗ
ಬಾಚಿ ತಬ್ಬಿನಿಂತೆ ನನ್ನಮ್ಮನ
ಒಂದರ ಮುಂದೆ ಒಂದು
ಪಕ್ಕಕ್ಕೆ ಮತ್ತೊಂದು
ಹೂ ಕಟ್ಟಿ ಎರಡರ ಮಗ್ಗಿ ಹೇಳಿಕೊಟ್ಟಿದ್ದು
ನನ್ನಜ್ಜಿ
ಸಂಸಾರದ ಸಂಬಂಧಗಳ ಕಟ್ಟುತ್ತ
ಹೀಗೆ ಕಳಿತ್ತಿದ್ದು ನನ್ನ ಮೊದಲ ಹೆಜ್ಜೆ
ಓಡುತ ಓಡುತ ಸಾಗಿತ್ತು ಬಾಲ್ಯ
ಯೌವನ ಮೈಮನಸನ್ನು ಆವರಿಸಿತ್ತು
ಬಂದೆ ನೀನು ನನ್ನ ಬಾಳಿನಲ್ಲಿ
ಬಾಲ್ಯದ ಕಲಿಕೆ ಮರಳಿ ಬಂದಿದೆ
ನಿನ್ನ ಕೈ ಹಿಡಿದು ನಡೆದ
ಆ ನನ್ನ ಮೊದಲ ಹೆಜ್ಜೆ
ಅಪ್ಪ ಕೊಡಿಸಿದ ನಮ್ಮೂರ ಜಾತ್ರೆಯ
ಕಾರು ತರಲು

ಜಗತ್ತಿಯ ಹಿಡಿದು ಮೇಲೆದ್ದು ಇಟ್ಟೆ
ನಾ ಮೊದಲ ಹೆಜ್ಜೆ
ಕಲಿತೆ ಬಾಳಿನ ಮೊದಲ ಹೆಜ್ಜೆಯ
ಅಪ್ಪನ ನೋಡುತ್ತ
ಅಜ್ಜ ಮಾಡಿದ ತೆಂಗಿನ ಗರಿಯ
ಕಿರಗಟ್ಟಲೆ ಹಿಡಿದು ಓಡುವಾಗ
ಬಿದ್ದೊಡನೆ ಅಮ್ಮೇಂದು ನಾ ಆಳುವಾಗ
ಓಡೋಡಿ ಬಂದಳು ನನ್ನಮ್ಮ
ಹೆಬ್ಬೆರಳ ರಕ್ತಕ್ಕೆ ಅರಿಸಿನ ಅಚ್ಚಿ
ಸೀರೆಯ ಅಂಚ ಕಟ್ಟುವಾಗ
ಬಾಚಿ ತಬ್ಬಿನಿಂತೆ ನನ್ನಮ್ಮನ
ಒಂದರ ಮುಂದೆ ಒಂದು
ಪಕ್ಕಕ್ಕೆ ಮತ್ತೊಂದು
ಹೂ ಕಟ್ಟಿ ಎರಡರ ಮಗ್ಗಿ ಹೇಳಿಕೊಟ್ಟಿದ್ದು
ನನ್ನಜ್ಜಿ
ಸಂಸಾರದ ಸಂಬಂಧಗಳ ಕಟ್ಟುತ್ತ
ಹೀಗೆ ಕಳಿತ್ತಿದ್ದು ನನ್ನ ಮೊದಲ ಹೆಜ್ಜೆ
ಓಡುತ ಓಡುತ ಸಾಗಿತ್ತು ಬಾಲ್ಯ
ಯೌವನ ಮೈಮನಸನ್ನು ಆವರಿಸಿತ್ತು
ಬಂದೆ ನೀನು ನನ್ನ ಬಾಳಿನಲ್ಲಿ
ಬಾಲ್ಯದ ಕಲಿಕೆ ಮರಳಿ ಬಂದಿದೆ
ನಿನ್ನ ಕೈ ಹಿಡಿದು ನಡೆದ
ಆ ನನ್ನ ಮೊದಲ ಹೆಜ್ಜೆ
No comments:
Post a Comment