June 21, 2013

ಭರತನಾಟ್ಯ ಕಲಾವಿದ ವಿದ್ವಾನ್ ಶ್ರೀ ಉನ್ನತ್.ಹೆಚ್.ಆರ್



     ನೃತ್ಯ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಕಲಾವಿದರು ಹಲವು ವಿಭಿನ್ನ ಪ್ರಯೋಗಗಳಲ್ಲಿ ಹೊಸತನದ ವಿಶಿಷ್ಟತೆಯನ್ನು ಹೊಂದಲು ತೊಡಗಿದ್ದಾರೆ. ಆದರೆ ಏನೇ ನವೀನತೆಯಿದ್ದರೂ ನೃತ್ಯ ಸಂಪ್ರದಾಯದ ಚೌಕಟ್ಟಿನಲ್ಲಿಯೇ ಇರಬೇಕು.
     ಈ ನಿಟ್ಟಿನಲ್ಲಿ ಭರತ ನಾಟ್ಯ ಕಲಾವಿದ ವಿದ್ವಾನ್ ಉನ್ನತ್.ಹೆಚ್.ಆರ್ರವರು ಹುಟ್ಟಿದ್ದು ಹಾಸನದಲ್ಲಿ. ಇವರ ತಂದೆ ಹೆಚ್.ಬಿ.ರತ್ನರಾಜು ಹಾಗೂ ತಾಯಿ ಟಿ.ಎ.ಜಯಪದ್ಮ ಇವರು ಎಂ.ಎ ಪದವಿದರಾಗಿದ್ದು 16ವರ್ಷಗಳಿಂದ ಅಂಬಾಲೆ ರಾಜೇಶ್ವರಿ ಅವರ ಶಿಷ್ಯರಾಗಿ ಅಭ್ಯಸ ಮಾಡುತ್ತಿದ್ದಾರೆ ಪ್ರಸ್ತುತವಾಗಿ ಉನ್ನತ್ರವರು ನಾಟ್ಯಕಲಾ ನಿವಾಸದ ಪ್ರಾಂಶುಪಾಲರು ಮತ್ತು ನಿದರ್ೆಶಕರಾಗಿದ್ದಾರೆ.
     ಇವರು 3000ಕ್ಕಿಂತಲೂ ಹೆಚ್ಚು ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜನ ಮೆಚ್ಚುಗೆಯನ್ನು ಸಂಪಾದಿಸಿರುವ ಇವರು ಹೊಯ್ಸಳ ಉತ್ಸವ, ಹಂಪಿ ಉತ್ಸವ, ಮೈಸೂರು ದಸರಾ, ಮಡಿಕೇರಿ ದಸರಾ, ಮಂಗಳೂರು ದಸರಾ, ಬೆಂಗಳೂರು ಹಬ್ಬ ಹುಬ್ಬಳ್ಳಿ, ಪುತ್ತಾರು ಹೀಗೆ ಇವರ ಕಲೆಯನ್ನು ಪದಶರ್ಿಸಿ ಜನ ಮೆಚ್ಚುಗೆಯನ್ನುಗಳಿಸಿದ್ದರೆ. ರಾಜ್ಯದಲ್ಲಿಯೇ ಅಲ್ಲದೇ ದೇಶ, ವಿದೇಶಗಳಲ್ಲಿ ಸಹ ನಮ್ಮ ಸಂಸ್ಕೃತಿಯನ್ನು ನಾಟ್ಯದ ಮೂಲಕ ಪರಿಚಯಿಸಿದ್ದಾರೆ. ಇದರಲ್ಲಿ ಏಕಲವ್ಯ ನೃತ್ಯ ಹಬ್ಬ, ದಕ್ಷಿಣ ವಲಯದ ಸಾಂಸ್ಕೃತಿಕ ಹಬ್ಬ, ಹೈದ್ರಾಬಾದ್ ನೃತ್ಯ ಸಂಘ, ಪೂಣೆ ಕಲಾ ಪರಿಷತ್. ತನುಕು ಕಲಾಕೇಂದ್ರ, ಕೋಲ್ಕತ್ತಾ, ಒರಿಸ್ಸಾ, ಮುಂಬೈ, ಡೆಲ್ಲಿ ಇನ್ನು ಹಲವು ಕೆಡೇ ಕಾರ್ಯಕ್ರಮಗಳನ್ನು ಪ್ರದಶರ್ಿದ್ದಾರೆ. ಪ್ರತಿ ಶುಕ್ರವಾರ ಇವರು ಯೂನಿಕಾದಲ್ಲಿ ನೃತ್ಯ ಗೋಷ್ಠಿಯನ್ನು ನಡೆಸುತ್ತಾರೆ. ರಷ್ಯಾ, ಆಸ್ಟ್ರಿಯಾ, ಥಯ್ಲ್ಯಾಂಡ್. ಮಲೇಷಿಯಾ, ಬೆಲಾಪಷಿಯನ್ ಮುಂತಾದ ಕಡೇ ಭಾಗವಹಿಸಿ ನಮ್ಮ ಸಂಸ್ಕೃತಿಯನ್ನು ವಿದೇಶದಲ್ಲೂ ಬಿಂಬಿಸಿದ್ದಾರೆ.
     ಶ್ರೀಯುತ ಉನ್ನತ್ರವರು ಪೌರಣಿಕ ಕಥೆಗಲ್ಲಿ ಬರುವಂತಹ ರಾಮ, ರಾವಣ, ಕೃಷ್ಣ, ಅಜರ್ುನ, ಹನುಮಂತ, ಋಷಭನಾಥಗಳಂತಹ ಹಿರಿಯ ಪಾತ್ರಗಳನ್ನು ತಮ್ಮ ಅದ್ಭುತ ನಾಟ್ಯದ ಮೂಲಕ ಪ್ರದಶರ್ಿಸಿದ್ದಾರೆ. ಇವರ ಭರತನಾಟ್ಯದಲ್ಲಿ ಕೌಶಲ್ಯತೆ ಹಾಗೂ ಚಾತುರ್ಯತೆ ಹೊಂದಿದ್ದ್ದು. ನಾಟ್ಯಶಾಸ್ತ್ರ ಮತ್ತು ಅಭಿನಯ ದರ್ಪಣ ಬಳಸಿಕೊಂಡು ನೃತ್ಯ ಕಲ್ಪಿಸಿರುವ ಇವರು ನೃತ್ಯಕ್ಕೆ ಬೇಕಾದ ಹಾಗೇ ತಮ್ಮ ದೇಹವನ್ನು ಕಾಪಾಡಿಕೊಡ್ಡಿದ್ದಾರೆ.
   
ಇತಂಹ ಇವರ ಅಪಾರ ಸಾಧನೆಗೆ ಅನೇಕ ಪ್ರಶಸ್ತಿಗಳು ಲಭಿಸಿವೆ. 2009ರಲ್ಲಿ ಲಾಸ್ಯ ಕಲಾ ಅಂತರ ರಾಷ್ಟ್ರಿಯ ಓಡಿಸ್ಸಿ ಸೆಂಟರ್ ಭುವನೇಶ್ವರದಿಂದ ಏಕಲವ್ಯ ಪ್ರಶಸ್ತಿ. ಆಂಧ್ರಪ್ರದೇಶ ಎಲ್ಲೂರು ನಗರದಲ್ಲಿ ಡಿಸೆಂಬರ್ 2009ರಲ್ಲಿ ಅಭಿನಯ ನೃತ್ಯ ಭಾರತಿ ವತಿಯಿಂದ  ಅಭಿನಯ ನೃತ್ಯ ಕೌಮುದಿ ಆಂಧ್ರ ಪ್ರದೇಶ ತುಣುಕ ನಗರದ ಶೃತಿಲಯ ಅಕಾಡೆಮಿ ವತಿಯಿಂದ ನೃತ್ಯ ಕೌಸ್ತುಭ ದೂರ ದರ್ಶನದಲ್ಲಿ ಬಿ ಗ್ರೇಡ್ ಅಟರ್ಿಸ್ಟ್ ಆಗಿ 2008ರಲ್ಲಿ ಆಯ್ಕೆ. ಪದ್ನಿ ಕ್ಯಾಸೆಟ್ಸ್ನಲ್ಲಿ ಸತತವಾಗಿ ಕಲಾ ಮುಖ್ಯ ನೃತ್ಯಗಾರ ಹಾಗೂ ಕೋರಿಯೋ ಗ್ರಾಫಿಕ್ ಆಗಿದ್ದಾರೆ. ಇವರಿಗೆ 2010ರಲ್ಲಿ ನಟರಾಜ್ ಗೋಪಿ ಕೃಷ್ಣ ಪ್ರಶಸ್ತಿಯು ಅಭಿಸಿದೆ. ಇರವ ಇನ್ನೋಂದು ಸಾಧನೆಯೆಂದರೆ ಉತ್ತರಾಯಣ ಎಂಬ ನೃತ್ಯವು ಪ್ರಾರಂಭವಾಗಿದ್ದು ನಾಟ್ಯಕಲಾ ನಿವಾಸದಲ್ಲಿ ಇದು 2010ರಲ್ಲಿ ಡೆಲ್ಲಿ, ಕೋಲ್ಕತ್ತಾ ಮತ್ತು ಐಐಟಿ ಕೋರಗೌಪುರಿಯಲ್ಲಿ ಯಶಸ್ಸಿಯಾಗಿ ಪ್ರದರ್ಶನಕೋಂಡಿದೆ. ತನ್ನೂರಿನ ಕಲಾಸಕ್ತರಿಗೆ ಕಲೆಯನ್ನು ಕಲಿಸಲೇಂದೆ 2009ರಲ್ಲಿ ರತ್ನಕಲಾ ಪದ್ಮ ಕುಟೀರ ಟ್ರಸ್ಟ್ ಪ್ರಾರಂಭಿಸಿದ್ದಾರೆ. ಇಲ್ಲಿ ಎಲ್ಲರಿಗೂ ಮುಕ್ತ ಅವಕಾಶವಿದೆ. ಬಡ ಮಕ್ಕಳಿಗೆ ಉಚಿತವಾಗಿ ಹೇಳಿಕೊಡುತ್ತಾರೆ. ಇವರು ನೃತ್ಯಗಳಲ್ಲಿ ಯೋಗಾಭ್ಯಸದ ವಿವಿಧ ಆಸನಗಳಾದ ಧನುರಾಸನ, ವಿಷ್ಣು ಶಯನಾಸನ ಮತ್ತು ಏಕಪಾದಾಸನಗಳಲ್ಲಲಿ ಮೈಕೈಗಳನ್ನು ಬಾಗಿಸುತ್ತಾ ತಲೆಯ ಮೇಲಿನ ಕಲಶ, ದೀಪಗಳ ಸಮತೋಲನವನ್ನು ಕಾಪಾಡುವ ಈ ಯುವಕನ ಪ್ರತಿಭೆ ಒಂದು ಸೋಜಿಗವೇ ಸರಿ. ಹೀಗೆ ಭರತನಾಟ್ಯದಲ್ಲಿ ಹೊಸ ಸಾಧನೆಗಳನ್ನು ಮಾಡುತ್ತ ನೂತನ ಮೈಲುಗಲ್ಲು ಸ್ಥಾಪಿಸಿದ್ದಾರೆ.


No comments:

Post a Comment