May 13, 2023

           ಹಾಸನ ಜಿಲ್ಲೆಯೂ ರಾಜಕೀಯವಾಗಿ ನಾಡಿನ ಗಮವನ್ನು ಸೆಳೆಯುತ್ತಿದೆ. ಆಲೂರು, ಅರಕಲಗೂಡು, ಅರಸೀಕೆರೆ, ಬೇಲೂರು, ಚನ್ನರಾಯಪಟ್ಟಣ, ಹೊಳೆನರಸೀಪುರ , ಹಾಸನ ಹಾಗೂ ಸಕಲೇಶಪುರ ಎಂಟು ತಾಲ್ಲೂಕುಗಳು 7 ವಿಧಾನಸಭಾ ಕ್ಷೇತ್ರಗಳಲ್ಲಿ 2008ರ ಚುನಾವಣೆಯಿಂದ ಸಕಲೇಶಪುರ ಮೀಸಲು ಕ್ಷೇತ್ರವಾಗಿದೆ. ಇನ್ನೂಲಿದ 6 ಕ್ಷೇತ್ರಗಳಲ್ಲಿ ಸಾಮಾನ್ಯ ರ‍್ಗದವರು ಸ್ರ‍್ಧಿಸಬಹುದು. ಆದರೆ 1952 ರಿಂದ 1962 ರವರೆಗೆ ಬೇಲೂರು ದ್ವಿಸದಸ್ಯ ಮೀಸಲು ಕ್ಷೇತ್ರವಾಗಿತ್ತು. ಆದ್ದರಿಂದ ಒಬ್ಬರು 1962 ರವರೆಗೆ ಸಾಮಾನ್ಯ ರ‍್ಗದವರು ಒಬ್ಬರು ಪರಿಶಿಷ್ಠ ಜಾತಿಯವರು ಶಾಸಕರಾಗಿ ಆಯ್ಕೆಯಾಗಲು ಅವಕಾಶವಿತ್ತು. ಅನಂತರ ಪ್ರಜಾ ಪ್ರತಿನಿಧಿ ಕಾಯ್ದೆಯ ಪ್ರಕಾರ ಮೀಸಲು ಕ್ಷೇತ್ರದಲ್ಲಿ ಪರಿಶಿಷ್ಠ ಜಾತಿಗೆ ಸೇರಿದವರು ಸ್ರ‍್ಧಿಸುವುದನ್ನು ರದ್ದು ಪಡಿಸಲಾಯಿತು.

           ಹಾಸನ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ನಡೆದ 1952 ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ಆಗ ತಾನೇ ಸ್ವಾತಂತ್ರ‍್ಯವನ್ನು ಗಳಿಸಿದ್ಧ ನಮ್ಮ ದೇಶದಲ್ಲಿ ಭಾರತೀಯ ಕಾಂಗ್ರೆಸ್ ಪ್ರಮುಖವಾದ ಪಾತ್ರವನ್ನು ವಹಿಸಿತ್ತು ಅದ್ದರಿಂದ ಪ್ರತಿಯೊಬ್ಬ ಪ್ರಜೆಯೂ ಕಾಂಗ್ರೆಸ್ ಪಕ್ಷದ ಪರವಾಗಿ ಇತ್ತು. 1952ರಲ್ಲಿ ಹಾಸನ ಜಿಲ್ಲೆಯಲ್ಲಿ ಬೇಲೂರು, ಅರಸೀಕೆರೆ, ಗಂಡಸಿ, ಶ್ರವಣಬೆಳಗೊಳ,ಹೊಳೆನರಸೀಪುರ. ಅರಕಲಗೂಡು, ಹಾಸನ 7 ವಿಧಾನ ಸಭಾ ಕ್ಷೇತ್ರಗಳಿದ್ದು ಸಕಲೇಶಪುರವನ್ನು ಮುಡುಗೆರೆ ಕ್ಷೇತ್ರದ ಜೊತೆಯಲ್ಲಿ ಸೇರಿಸಲಾಗಿತ್ತು. 1956ರ ಸಂಸತ್ ಮತ್ತು ವಿಧಾನಸಭಾ ಕ್ಷೇತ್ರಗಳ ವಿಂಗಡಣಾ ಕಾಯಿದೆ ಪ್ರಕಾರ ಬೇಲೂರು ದ್ವಿಸದಸ್ಯ ಕ್ಷೇತ್ರವಾಗಿತ್ತು. ಇದರಲ್ಲಿ ಒಬ್ಬರು ಪರಿಶಿಷ್ಠ ಜಾತಿಗೆ ಸೇರಿದವರು ಮತ್ತೊಬ್ಬರು ಸಾಮಾನ್ಯ ರ‍್ಗಕ್ಕೆ ಸೇರಿದವರು ಒಟ್ಟು 02 ಮಂದಿ ಸದಸ್ಯರು ಆಯ್ಕೆಯಾಗಲು ಅವಕಾಶವಿತ್ತು. ಆದರೆ 1956 ಸಂಸತ್ ಮತ್ತು ವಿಧಾನಸಭಾ ಕ್ಷೇತ್ರಗಳ ಮರು ವಿಂಗಡಣಾ ಕಾಯಿದೆ ಪ್ರಕಾರ 1961ರಲ್ಲಿ ಬೇಲೂರಿನ ದ್ವಿಸದಸ್ಯ ಕ್ಷೇತ್ರವನ್ನು ರದ್ದುಪಡಿಸಿ ಏಕ ಸದಸ್ಯ ಕ್ಷೇತ್ರವನ್ನು ಜಾರಿಗೆ ತರಲಾಯಿತು. ಆದಕಾರಣ ಇದರಲ್ಲಿ ಪರಿಶಿಷ್ಠ ಜಾತಿಯವರಿಗೆ ಸೇರಿದ ಒಬ್ಬರು ಮಾತ್ರ ವಿಧಾನಸಭೆಗೆ ಆಯ್ಕೆಯಾಗಲು ಅವಕಶವಾಯಿತು. ಅಲ್ಲದೆ 1962ರಲ್ಲಿ ಸಕಲೇಶಪುರ(ಮುಂಜ್ರಬಾದ್ ತಾಲ್ಲೂಕು ಅಂದಿನ ಹೆಸರು) ವಿಧಾನಸಭಾ ಕ್ಷೇತ್ರವನ್ನು ಜಾರಿಗೆ ತರಲಾಯಿತು. ಆದ ಕಾರಣ ಒಟ್ಟು ಹಾಸನ ಜಿಲ್ಲೆಯಲ್ಲಿ ಇಂದು 7 ವಿಧಾನಸಭಾ ಕ್ಷೇತ್ರವನ್ನು ಒಳಗೊಂಡಿರುತ್ತದೆ.

1957ರ ವಿಧಾನಸಭೆ ಚುನಾವಣೆ


1957ರ ವಿಧಾನಸಭಾ ಕ್ಷೇತ್ರಗಳಲ್ಲಿ ಬೇಲೂರು ದ್ವಿಸದಸ್ಯೆ ಕ್ಷೇತ್ರವಾಗಿದ್ದು ಕಾಂಗ್ರೆಸ್ ಪಕ್ಷ ಒಬ್ಬ ಪರಿಶಿಷ್ಠ ಜಾತಿಗೆ ಸೇರಿದ ಸದಸ್ಯರಿಗೆ ಮತ್ತು ಸಾಮಾನ್ಯ ವರ್ಗಕ್ಕೆ ಸೇರಿದ ಮತ್ತೊಬ್ಬ ಸದಸ್ಯರಿಗೆ ಸ್ಪರ್ಧಿಸಲು ಅವಕಾಶ ನೀಡಿತ್ತು.  ಇದರಂತೆ ಅರಸೀಕೆರೆ ಗಂಡಸಿ ಶ್ರವಣಬೆಳಗೊಳ, ಹೊಳೆನರಸೀಪುರ, ಅರಕಲಗೂಡು ಮತ್ತುಹಾಸನ ವಿಧಾನ ಸಭಾ ಕ್ಷೇತ್ರಗಳಲ್ಲಿ ಪ್ರಜಾಸೋಷಿಯಲಿಸ್ಟ್ ಪಕ್ಷ ಹಾಗೂ ಪಕ್ಕೇತರ ಅಭ್ಯರ್ಥಿಗಳ ನಡುವೆ ಸ್ಪರ್ಧೆಯಿತ್ತು.



No comments:

Post a Comment