July 22, 2019

ಡಾ. ಶಾಲಿನಿ ವಿ ಎಲ್ ಪರಿಚಯಿಸಿದ ವೃತ್ತಿಪರ ಸ್ನೇಹಿತೆ ಸಹನಾ


ಡಾ. ಶಾಲಿನಿ ವಿ.ಎಲ್‌ರವರ ಪರಿಚಯ ಆಗಿದ್ದು ಅನರ್ಘ್ಯ ರತ್ನಳಿಂದ ಪರಿಚಯವಾದ ದಿನದಿಂದ ಸಹನಾಳನ್ನು ನನಗೆ ಪರಿಚಯ ಮಾಡಿ ಎಂದು ಕೇಳುತ್ತಿದ್ದೆ. ನಂತರ ಸಹನಾ ಬಗ್ಗೆ ತಿಳಿಯ ಬೇಕೆಂದು ಹಲವು ದಿನ ದಿಂದ ಬೇಡಿಕೆಯನ್ನು ಶಾಲಿನಿ ಬಳಿ ಪ್ರಸ್ತಾಪಗಳ ಮೇಲೆ  ಪ್ರಸ್ತಾಪಗಳನ್ನು ನಾನು ಸಿಕ್ಕಾಗಲೆಲ್ಲ ಮಾಡುತ್ತ ಬರುತ್ತಿದ್ದೆ. ಒಮ್ಮೆ ಹಾಸನದ ಹೊಸ ಬಸ್ ನಿಲ್ದಾಣದ ಬಳಿ ಸಿಕ್ಕಿದ ಈ ಸಹನಾ ನಂತರ ನನ್ನ ಬೆಂಗಳೂರು ಬಸ್ ಪ್ರಯಾಣದಲ್ಲಿ ನನ್ನ ಜೊತೆಯಲ್ಲಿ ಸಹ ಪಯಣಿಗಲಾಗಿ ಇದ್ದವಳು ಈ ಸಹನಾ. ಸರಾಗವಾಗಿ ಎಲ್ಲಿಯೂ ಸಹ ಬೇಸರವನ್ನು  ಉಂಟುಮಾಡದೆ ಒಂದೇ ಹಂತದಲ್ಲಿ ನಿರಂತರವಾಗಿ ಪಟ ಪಟನೆ ನಮ್ಮ ಸುತ್ತ ಮುತ್ತ ಬರುವ ಒಂದು ಜೀವನದ ಹಲವು ತಿರುವಿನ ಯಾನವನ್ನು ಅಪರಿಚಿತರಿಗೂ ಸಹ ಪರಿಚಯವನ್ನು ಪರಿಚಯವಾಗುವಷ್ಟರಲ್ಲಿ ನಾನು ನೆಲ ಮಂಗಲ ಟೋಲ್ ತಲುಪಿದೆ. ಹೌದು ಹಾಸನದ ಹಗರೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಸ್ತುತ ಸರ್ಕಾರಿ ವೈದ್ಯಾಧಿಕಾರಿಯಾಗಿರುವ ಶಾಲಿನಿ ಪರಿಚಯವನ್ನು ಮಾಡಿದ ವೃತ್ತಿಪರ ಸ್ನೇಹಿತೆ ಸಹನಾ ಚೆನ್ನೈ ನಗರವನ್ನು ಅರಸಿ ಬರುವ ಚಿಕ್ಕ ವಯಸ್ಸಿನ ಪ್ರಸೂತಿ ತಜ್ಞೆಯಾಗಿದ್ದಲೆ.

ಪ್ರತಿಯೊಬ್ಬರಿಗೂ ಸಹ ತನ್ನದೆಯಾದ ಆದರ್ಶಗಳು ಇರುತ್ತವೆ. ಭ್ರೂಣ ಹತ್ಯಕ್ಕೆ ಕೈ ಹಾಕುವ ವೈದ್ಯ ಮುಂದಿನ ದಿನದಲ್ಲಿ ಅವರಿಗೆ  ಭ್ರೂಣ ಹತ್ಯದ ಸವಲು ಮುಂದೆ ಬಂದರೆ ಅವರ ಪರಿಸ್ಥಿತಿ ಹೇಗೆ ಇರುತ್ತದೆಂದು ಹಾಗೂ ನಾವು ಮಾಡುವಂತಹ ಕೆಲಸಗಳು ಒಳ್ಳೆಯ ಉದ್ದೇಶಗಳು ಇದ್ದಾರೆ ಅದಕ್ಕೆ ಎಷ್ಟೆ ಅಡಚಣೆಗಳು ಬಂದರು ಸಹ ಅಂತಿಮದಲ್ಲಿ ಒಳ್ಳೆಯ ಪ್ರತಿ ಫಲ ಬರುತ್ತದೆ ಎನ್ನುವ ಅಂಶಗಳ ಹಾದಿಯಲ್ಲಿ ಕಥೆಯಾಗಿ ಆದರ್ಶದ ಹೆಣ್ಣಿನ ಶುದ್ಧ ಮನಸ್ಸಿನ ವ್ಯಕ್ತಿತ್ವಗಳ ಕಥೆ ಇದಾಗಿದೆ. ಇಡಿ ಕಥೆಯಲ್ಲಿ ಮುಖ್ಯ ನಾಯಕಿ ಪಾತ್ರದಲ್ಲಿರುವ ಸಹನಾಲಿಗೆ ತುಂಬಾ ಸಹನೆ ಇದೆ. ಪ್ರತಿಯೊಂದು ಹಂತದಲ್ಲಿ ಬರುವ ಎಲ್ಲಾ ರೀತಿಯ ಸವಾಲುಗಳನ್ನು ತುಂಬಾ ತಾಳ್ಮೆಯಿಂದ ಎದುರಿಸುವಂತ ಶಕ್ತಿಯ ಜೊತೆಯಲ್ಲಿ ಸಮಾಜದಲ್ಲಿ ತನ್ನದೇ ಯಾದ ಪ್ರೀಸ್ಸಿಪಲ್ ಆಗಿ ಬದುಕನ್ನು ಕಟ್ಟಿ ಕೊಳ್ಳುವ ಹೆಣ್ಣು ಮಗುವಿನ ಕಥೆ ಸಹನಾ ಆದರ್ಶಗಳೊಂದಿಗೆ ಜೀವನ.

ಕಥೆಯಲ್ಲಿ ಬರುವಂತಹ ಮುನಿಯಮ್ಮ ಮಾತೃ ಹೃದಯ ಹೇಗಿರುತ್ತದೆ ಎನ್ನುವುದು ಈ ಪಾತ್ರ ನಮಗೆ ಪರಿಚಯ ಮಾಡುತ್ತದೆ. ತಾಯಿತನ ಸಿಗಲಿಲ್ಲ ಎಂದರು ಸಹ ಇನ್ನೊಬ್ಬರ ಮಕ್ಕಳನ್ನು ನೋಡಿ ಅವರಲ್ಲಿ ತನ್ನ ಮಕ್ಕಳ ಪ್ರೀತಿಯನ್ನು ಕಾಣುವ ಮುನಿಯಮ್ಮ ನಮಗೆ ಪರಿಚಯವಾಗುತ್ತಳೆ. ಸಹನಾಳ ಪ್ರತಿ ಹಂತದಲ್ಲಿ ಪಕ್ಕದಲ್ಲಿದ್ದು  ಬೆನ್ನಾಗಿ ನಿಲ್ಲುತ್ತಾಳೆ. ಮಕ್ಕಳು ಇಲ್ಲದ ತಾಯಿಗೆ ಸಹನಾ ಮಗಳಾಗಿ, ಜೊತೆಗೆ ತಂದೆ ತಾಯಿಂದ ದೂರವಾದ ಸಹನಾಳಿಗೆ ತಾಯಿಯಾಗಿ ನಿಲ್ಲುವ ಮುನಿಯಮ್ಮ ಪ್ರೀತಿ ಮತ್ತು ಭಂದವ್ಯವನ್ನು ಎತ್ತಿ ಹಿಡಿಯುವ ಪಾತ್ರ ಇದಾಗಿದೆ.

ಶ್ರೀಮಂತರ ಮಗನಾಗಿದ್ದ ಅಮಿತ್ ಪಾತ್ರ ಬೇರೆ ರಾಜ್ಯದಲ್ಲಿ ಇದ್ದರು ಸಹ ತನ್ನಲಿರುವ ಕನ್ನಡ ಪ್ರೇಮ ಕನ್ನಡಿಗರಿಗಾಗಿ ಮಿಡಿಯುವ ಮನಸ್ಸು ಕನ್ನಡ ಅಭಿನವನ್ನು ಪರಿಚಯ ಮಾಡುತ್ತದೆ. ಸಹನಾಳಿಗೆ ಒಬ್ಬ ಒಳ್ಳೆಯ ಸ್ನೇಹಿತನಾಗಿ ಪರಿಚಯವಾದ ದಿನದಿಂದ ಕೊನೆಯವರೆಗೂ ಸಹ ಎಲ್ಲಾ ರೀತಿಯ ಕಷ್ಟ ಸುಖಕ್ಕೆ ಸ್ಪಂದಿಸುವ ಅಮಿತ್ ನಿಜವಾಗಿ ಸಹ ಒಬ್ಬ ಮಾದರಿ ನಿಲ್ಲುತ್ತಾನೆ. ಮುಖ್ಯವಾಗಿ ಕಥೆಯಲ್ಲಿರುವ ನಾಯಕ ಜೊತೆಗೆ ವಿಲನಾಗಿ ಇರುವ ಸಂಜಯ್ ಗರ್ವವೇ ಅವನ ಹೆಮ್ಮೆ ಎನ್ನುವ ಆವಲಿನಲ್ಲಿ ಚಟವಾಗಿದ್ದ ಇವನಿಗೆ ತನಗೆ ಅರಿವಿಲ್ಲದೆ ತಪ್ಪುಗಳ ಮೇಲೆ ತಪ್ಪುಗಳನ್ನು ಮಾಡುತ್ತಿದ್ದ ಸಂಜಯ್ ಮಿಕ್ ನೆಸ್ ಸಹನಾ ಬಳಿನಲ್ಲಿ ತುಂಬಾ ದೊಡ್ಡ ಹೊಡೆತವನ್ನು ಉಟ್ಟು ಮಾಡುತ್ತದೆ. ಕೊನೆಯಲ್ಲಿ ಸಂಜಯ್ ಅಣ್ಣ ಮದುವೆಯಾಗ ಬೇಕಾಗಿದ್ದು ಸಹನಾ ಎಂದು ಸಂಜಯ್ ತಿಳಿಯುತ್ತದೆ ಆಗ ತನ್ನ ತಪ್ಪಿನ ಬಗ್ಗೆ ಅರಿವುವಾಗುತ್ತದೆ. ಆಗ ಅವನಲ್ಲಿದ್ದ ಗರ್ವದ ಬಗ್ಗೆ ತನ್ನ ವಿಕನೆಸ್ಸ್ ಅರ್ಥವಾಗುತ್ತದೆ. ಮುಂದೆ ಸಂಜಯ್ ಸಹನಾ ಬಳಿನಲ್ಲಿ ನಾಯಕನಾಗಿ ಬರುತ್ತನೆ. ಹೀಗೆ ಹತ್ತು ಹಲವು ಪ್ರಮುಖ ಪತ್ರಗಳು ಎಂದರೆ ಅಮಿತ್ ತಾಯಿ, ಸಹನಾ ತಂದೆ ತಾಯಿ ಸಂಜಯ್ ಅಣ್ಣ ಪಾತ್ರದಲ್ಲಿ ಸಂತೋಷ್ ಮುಖ್ಯವಾಗಿ ಸಹನಾ ಮಕ್ಕಳಾಗಿ ತರುಣ್ಯ ಮತ್ತು ಕರುಣ್ಯ ಹೀಗೆ ಇವರ ಸುತ್ತಮುತ್ತೆಲ್ಲಾ ವಿಹಸಿದಂತಾಗುವ ಕಥೆಯ ಗಟ್ಟಿತನಕ್ಕೆ ಸಾಕ್ಷಿ ಕಥೆಯ ಜೀವಂತಿಕೆಯನ್ನು ಬಳಗೊಂಡಿದೆ.

-ದ್ಯಾವನೂರು ಮಂಜುನಾಥ್

1 comment:

  1. ಮೂಲ ಕಥೆ ನನಗೆ ಎಲ್ಲಿ ಸಿಗುತ್ತದೆ?

    ReplyDelete