ಕೊರೆಯುವ ಹಿಮದಲ್ಲಿ
ಎದೆಯ ಗುಂಡಿಗೆಗೆ
ಚಿಮ್ಮಿದ ಬಿಸಿ ರಕ್ತ
ಇದೋ ನೋಡು ತಾಯಿ
ನಿನಗೆ ನಾ ಇಟ್ಟ ಅಭಿಷೇಕ
ಮತ್ತೆ ಮತ್ತೆ ಹುಟ್ಟಿ
ರತ್ನ ಕಂಬಳಿ ಹೊದಿಸಿ
ದೇಶ ಕಾಯುವೆ.
ಸಜ್ಜನೆಯಾಗಿ ಮಜ್ಜನಕ್ಕೆರೆದು
ಶಾಂತಿಗಾಗಿ ಪ್ರಾಣ ನೀಡುವೆ
ಅದೆಷ್ಟೇ ಸಾರಿ.,
ಬರಲಿ ಆ ಉಗ್ರ ಪಾಪಿಗಳು
ಉಗ್ರನರಸಿಂಹನಾಗಿ
ನಾ ಬರುವೆ
ಕೊರೆಯುವ ಹಿಮದ
ಒಡಲಿನಲ್ಲಿ.
No comments:
Post a Comment