November 14, 2018

ವಚನ - 15

ತುಂಬು ಗರ್ಭಿಣಿಯ ಕಾಡಿಗೆ ಕಳುಹಿಸುವ ನಿರ್ಧಾರ
ಸೀತೆಯ ಶೀಲದ ಮೇಲೆ ಸಂಶಯ ಇದು ರಾಮ ರಾಜ್ಯ ರಾಮ ರಾಜ್ಯ
ರಾಮರಾಜ್ಯ ಎಂಬುದು ಕ್ರೂರ ರಾಜ್ಯ
ಮಹಿಳಾ ಸಂವೇದನೆಯ ಕಾಡಿಗಟ್ಟಿದ
ಪತ್ನಿಯ ಸ್ವಾರ್ಥಕ್ಕೆ ಮಣಿದ ರಾಜೋದ್ದಾರಕ ಹೇಗಯ್ಯ
ತಂದೆಯ ಮೂರ್ಖ ನಿರ್ಧಾರ ಪ್ರಶ್ನಿಸದ ಮಗ ಇವನು
ಎದೆಗಾರಿಕೆ ತೋರದೆ ಸುಮ್ಮನೆ ಕಾಡಿಗೆ ಹೋದನಯ್ಯ
ಅಭಾಸದ ರಾಜ್ಯಾಡಳಿತವ ಆದರ್ಶ ರಾಜ್ಯವೆಂಬುವ
ಮೂರ್ಖ ಜನ ನೋಡಯ್ಯ ಕರಸ್ಥಳದೇವ

- ದ್ಯಾವನೂರು ಮಂಜುನಾಥ್

No comments:

Post a Comment