April 14, 2014

ಗಾಳಿ ಹಾಗೂ ಸೌರಶಕ್ತಿ ಬಳಸಿ ಚಲಿಸುವ ವಾಹನ : Air-So., ವಾಹನ


ಜನಮಿತ್ರ ಲೇಖನ

ಜನತಾ ಮಾಧ್ಯಮ

ವಾಯುಬಲದಿಂದ ಓಡುವ ವಾಹನ; ಕನ್ನಡಿಗನ ಸಾಧನೆ

ಬೆಂಗಳೂರು(ಏ.14): ವಿಶ್ವದ ತೈಲಮೂಲಗಳು ಕಡಿಮೆಯಾಗುತ್ತಿರುವಂತೆಯೇ ಪೆಟ್ರೋಲ್, ಡೀಸೆಲ್'ಗಳು ದುಬಾರಿಯಾಗುತ್ತಿದೆ. ಪರ್ಯಾಯ ಇಂಧನ ಮತ್ತು ಶಕ್ತಿಮೂಲಗಳ ಶೋಧನೆಗೆ ಪ್ರಯತ್ನಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ, ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ವಾಹನಗಳು ಈಗಾಗಲೇ ಮಾರುಕಟ್ಟೆಗೆ ಕಾಲಿಟ್ಟಿವೆ. ಜೊತೆಗೆ ನೀರು, ಗಾಳಿ, ಸೌರಶಕ್ತಿಗಳ ಬಳಕೆಯೂ ನಡೆಯುತ್ತಿದೆ. 

ಈಗ, ಕರ್ನಾಟಕದ ಯುವಕನೊಬ್ಬ ಗಾಳಿಯ ಶಕ್ತಿಯಿಂದ ಓಡುವ ವಾಹನವೊಂದನ್ನ ತಯಾರಿಸಿದ್ದಾರೆ. ಹಾಸನದ ದ್ಯಾವನೂರ್ ಮಂಜುನಾಥ್ ಮತ್ತಾತನ ಸಂಗಡಿಗರು ತಮ್ಮ ವಿಶಿಷ್ಟ ವಾಯುಶಕ್ತಿಯ ಸೈಕಲ್'ಗೆ ಏರ್-ಸೋ ಎಂದು ನಾಮಕರಣ ಮಾಡಿದ್ದಾರೆ. ಈ ವಾಹನ ಹೊಗೆಯುಗುಳುವ ಮಾತೇ ಇಲ್ಲ, ಇದೊಂದು ನೂರು ಪ್ರತಿಶತ ಮಾಲಿನ್ಯರಹಿತ ವಾಹನ ಎಂದು ಮಂಜುನಾಥ್ ತಮ್ಮ ಬ್ಲಾಗ್'ನಲ್ಲಿ ಬರೆದುಕೊಂಡಿದ್ದಾರೆ.

ದ್ಯಾವನೂರು ಮಂಜುನಾಥ್ ನಿರ್ಮಿಸಿರುವ ಈ ವಾಹನ ಇನ್ನೂ ಪ್ರಯೋಗದ ಹಂತದಲ್ಲಿದ್ದು, ಇದನ್ನ ಇನ್ನಷ್ಟು ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಸರ್ಕಾರ ಇಂಥ ಪ್ರತಿಭೆಗಳನ್ನ ಗುರುತಿಸಿ ಸೂಕ್ತ ನೆರವು ಒದಗಿಸಿ ಉತ್ತೇಜನ ಒದಗಿಸಿದರೆ ಭಾರತದ ಭವಿಷ್ಯ ಉಜ್ವಲವಾದೀತು.

ಈ ಯುವಕನ ಬ್ಲಾಗ್ ಲಿಂಕ್ ಇಲ್ಲಿದೆ: Project Bolg

 Suvarnanews article

  Vehicle raiding video  Facebook Link Page

1 comment:

  1. ವಾಯುಬಲದಿಂದ ಓಡುವ ವಾಹನ; ಕನ್ನಡಿಗನ ಸಾಧನೆ - ತುಂಬ ಉಪಯುಕ್ತ ಲೇಖನ.

    ReplyDelete