March 29, 2014

ಚುಂಬಕ ಪ್ರೀತಿ


ಪುಸ್ತಕವ ತಿರುತಿರುಚಿಟ್ಟೆ
ಮನದಲ್ಲಿ ಸಂಗಾತಿಯ ಸಂಸ್ಪರ್ಶವಿತ್ತು
ಆ ಕಡೇಗೆ ಆ ಕಾವ್ಯ,  ಕಡೇಗೆ ಈ ಕಾವ್ಯ
ಅಗಣಿತ ಪಾಠದಲ್ಲೂ ಪ್ರೀತಿಯ ನೋಟ
ಇದೆಂತ ಚಿತ್ರ ವಿಚಿತ್ರ

ಭೂ ತಾಯ ಮಜ್ಜನಕ್ಕೆ ಮುಂಗಾರಿನಾಭೀಷೆಕ
ಪೈರಿತ್ತು ನೆಲದಲ್ಲಿ ಹಸಿರಿತ್ತು ಹೊಲದಲ್ಲಿ
ಅದರ ರಂಗೇನು ಕಂಪೇನು
ಕನಸಿತ್ತು ನನ್ನ ಕಾವ್ಯದ ಕಣ್ಣಲ್ಲಿ….

ತತ್ತರಿಸಿ ಹೋದೆ ಕುಡಿ ನೋಟಕ್ಕೆ
ಮಿಲಮಿಲನೆ ಹೋದಾಡಿದೆ ಪ್ರೀತಿಯ ಬಲೆಗೆ
ಆ ನೆನಪು ರಸನಿಮಿಷ ಸವಿಜೇನು
ಉಕ್ಕಿತ್ತು ಭಾವ ಜನ ಹೃದಯದಲ್ಲಿ

ನೆನ್ನೆ ಮೋನ್ನೆ ನಾ ಯೊರೋ ನೀ ಯಾರೊ
ಆದರೂ ಕೂಡಿದೆವು ಬಾಳಿನೊಳಗೆ
ನಮ್ಮ ಬಾಳು ಅಮೃತದ ಹೋನಲು
ಒಮ್ಮೆ ನೀಡು ಚುಂಬಕ ಪ್ರೀತಿ

1 comment:

  1. ಅತ್ತ ಪ್ರಕೃತಿ ಇತ್ತ ಸ್ವಕೃತಿ - ಮೂಡಿ ಬಂದಿದೆ ಈ ಚುಂಬಕ ಪ್ರೀತಿ.

    ReplyDelete