ಹಾಸನದ ಎನ್.ಸಿ.ಸಿ ಕಚೇರಿಗೆ ಹೊಂದಿಕೊಂಡಂತಿರುವ ಇರಾಸಿ
ಬಂಗಲೆಯಿಂದ ಜಿಲ್ಲಾ ಪಂಚಾಯಿತಿ ವೃತ್ತದವರೆಗೆ ವಿಶಾಲವಾದ, ಅಂಕು, ಡೊಂಕು ರಹಿತವಾಗಿರುವ ರಸ್ತೆ ಈ
ಆರ್.ಸಿ ರಸ್ತೆ.
ಎಸ್.ಸಿ.ಸಿ ಕಚೇರಿ ಬಳಿ ಯುರೋಪಿಯನ್ನರು ಇರಾಸಿವಾಸಿಗಳು
ನೆಲೆಸಿದ್ದರು ಈ ಕಾರಣದಿಂದ ಇರಾಸಿ ವಾಸಿಗಳು ನೆಲೆಸಿದ್ದರು ಈ ಕಾರಣದಿಂದ ಇರಾಸಿ ಬಂಗಲೆ ಪ್ರಸಿದ್ಧಿ
ಪಡೆದಿತ್ತು. ಇಂದಿಗೂ ಕೂಡ ಇರಾಸಿ ಬಂಗಲೆ ಎಂಬ ಹೆಸರು ಹಿರಿಯರಿಗೆ ಚಿರಪರಿತವಾಗಿದೆ.
ಆಗಿನ ಕಾಲದ ವೈಭವಯುತ ಕಟ್ಟಡ ಕುದುರೆ ಲಾಳದ ಸಪ್ಪಳ ಎಲ್ಲವೂ
ಆರ್.ಸಿ ರಸ್ತೆಗೆ ಮೆರುಗು ನೀಡುತ್ತಿತ್ತು. ನೇರ ರಸ್ತೆ ಇದ್ದುದರಿಂದ ಕುದುರೆ ಸ್ಪರ್ಧೆಗೆ ಜನತೆ ಮುಗಿಬಿದ್ದು
ನೋಡುತ್ತಿದ್ದರು. ಅಷ್ಟೇ ಅಲ್ಲ ಇರಾನಿಯರು, ಯುರೋಪಿಯನ್ನರ ಜನತೆಗೆ ಸ್ಥಳೀಯವಾಗಿ ಒಂದಿಷ್ಟು ಜನ ಜಟಕಾ
ಬಂಡಿ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ರು.
ಯುರೋಪ್ ಖಂಡದಿಂದ ಬಂದು ಮಲೆನಾಡಿನ ಸಂಪರ್ಕವನ್ನು ಹೊಂದಿದ್ದವರು
ಹಾಸನದಲ್ಲಿ ನೆಲೆಸಿದ್ದರು ಅವರುಗಳು ಕುದುರೆಯ ಸವಾರಿ, ಕುದುರೆ ಸ್ಪರ್ಧೆಯನ್ನುಏರ್ಪಡಿಸುತ್ತಿದದುದರಿಂದ
ಈ ಒಂದು ರಸ್ತೆಗೆ ರೇಸ್ ಕೋರ್ಸ್ (ಆರ್.ಸಿ) ರಸ್ತೆ ಎಂಬ ಹೆಸರು ಬಂದಿದೆ ಎಂದು ಹಿರಿಯರು ಹೇಳುತ್ತಾರೆ.
No comments:
Post a Comment