September 7, 2014

ಕರಾಳ ಕಥಾ ಲೋಕ ಭಾಗ - 2

ಮಾಯಾ ಕನ್ನಡಿ

     ಹರಿಗೆ 2 ವರ್ಷವಿರುವಾಗ ಜಕ್ಕಣ್ಣ ಮತ್ತು ಲೀಲಾ ಇಬ್ಬರು ಆಕಾಲಿಕ ಮರಣಕ್ಕೆ ತುತ್ತಾದರು. ಹರಿಯ ಹೆಸರಿನಲ್ಲಿ ತುಂಬ ಆಸ್ತಿ ಇದೆ, ಎಂಬ ವಿಷಯ ತಿಳಿದಿದ್ದ ಜಕ್ಕಣ್ಣನ ಅಣ್ಣ ರೇವಣ್ಣ ಹೇಗಾದರು ಮಾಡಿ ಹರಿಯ ಹೆಸರಿನಲ್ಲಿರುವ ಆಸ್ತಿಯನ್ನು ಕಬಳಿಸಬೇಕೆಂಬ ದುರಾಲೋಚನೆಯಿಂದ ಜತೆಗೆ ಜಕ್ಕಣ್ಣನ ಆಸ್ತಿಗೆ ಯಾರು ವಾರಸುದಾರರು ಇಲ್ಲದ್ದಿರಿಂದ ಜಕ್ಕಣ್ಣನ ಮನೆಯಲ್ಲಿಯೇ ರೇವಣ್ಣ ಬಿಡಾರ ಹೂಡಿದನು. ಹರಿ ಒಬ್ಬ ಮಾಂತ್ರಿಕ ಎಂದು ರೇವಣ್ಣ ಮತ್ತು ಮೀನಾಳಿಗೆ ಮಾತ್ರ ಗೊತ್ತಿತ್ತು ಆ ವಿಷಯ ಹರಿಗೂ ನನ್ನಲ್ಲಿ ಮಾಂತ್ರಿಕ ಶಕ್ತಿ ಇದೆ ಎಂದು ತಿಳಿದಿರಲಿಲ್ಲ.

     ರೇವಣ್ಣ ಹವ್ಯಾಸಿ ಛಾಯಗ್ರಹಕನಾಗಿದ್ದರಿಂದ ಮೀನಾ ಮನೆಯಲ್ಲೆ ಇದ್ದಳು. ಇವರಿಬ್ಬರ ಮಗುವಿನ ಹೆಸರು ಪ್ರಭು. ಪ್ರಭು ಮತ್ತು ಹರಿ ಇಬ್ಬರೂ ಹಾವು ಮುಗುಸಿಯ ಹಾಗೆ ಇದ್ದರೂ ರೇವಣ್ಣ ಮತ್ತು ಮೀನಾ ಇವರು ಸಹ ಹರಿಯನ್ನು ಮನೆ ಕೆಲಸದವನಿಗಿಂತ ಕೀಳಾಗಿ ನೋಡಿ ಕೊಳ್ಳುತ್ತಿದ್ದರೂ. ಈ ಮೂರು ಜನಕ್ಕೆ ಹರಿಗಿಂತ ಅವನ ಆಸ್ತಿಯೇ ಮುಖ್ಯವಾಗಿತ್ತು. 15 ವರ್ಷಗಳ ನಂತರ ಒಂದು ದಿನ ಹರಿ ರಾತ್ರಿಯೆಲ್ಲ ಓದಿ ನಿದ್ದೆ ಅತಿಯಾಗಿ ಹರಿ ಬೆಳಗ್ಗೆ 9 ಗಂಟೆಯಾದರು ಮಲಗಿದ್ದ. ಅಂದು ಪ್ರಭುವಿನ ಹುಟ್ಟದ ಹಬ್ಬ ಬೇರೆ. ಸಿಟ್ಟಿನಿಂದ ಮೀನ ಹರಿ ರೂಂ ಬಳಿಗೆ ಬಂದು "ಎದ್ದೇಳೋ ಬೆಳಗಾಗಿದೆ ಎದ್ದಳು ....? ದರಿದ್ರೋನೆ" ಎಂದು ಜೋರಾಗಿ ಗುಡುಗಿ ಬಾಗಿಲನ್ನು ಬಡಿದು ಹೋದಳು.

     ಹರಿ ಪಕ್ಕದಲ್ಲಿದ್ದ ತನ್ನ ಅಲಾರಾಂ ಗಡಿಯಾರವನ್ನು ನೋಡಿ ಜೊತೆಗೆ ತನ್ನು ಕನ್ನಡವನ್ನು ಧರಿಸಿ ಕುಳಿತುಕೊಂಡು ಹೊರಕ್ಕೆ ಬರುತ್ತಿದ್ದ. ಹರಿಗೂ ಮತ್ತು ಪ್ರಭು ಇಬ್ಬರಿಗೂ ಹೊಂದುತ್ತಿರಲಿಲ್ಲ. ಹರಿ ಕಂಡರೇ ಪ್ರಭುವಿಗೆ ಹೊಟ್ಟೆ ಕಿಚ್ಚು.  ಪ್ರಭು ಓಡಿ ಹರಿಯ ರೂಂ ಕಡೆಗೆ ಬಂದ. ಅದೇ ಸಮಯಕ್ಕೆ ಮುಖವನ್ನು ಉಜ್ಜುತ್ತ ಹರಿ ಸಹ ಬರುತ್ತಿದ್ದನ್ನು ನೋಡಿ ಮತ್ತೆ ರೂಂಗೆ ದೂಕಿ ಕಾಲಿನಿಂದ ಬಾಗಿಲನ್ನು ಒದ್ದು ಅಮ್ಮ ಮೀನಾಳ ಹತ್ತಿರಕ್ಕೆ ಓಡಿ ಬಂದ. ರೇವಣ್ಣ ಕಾಲ ಮೇಲೆ ಕಾಲನ್ನು ಹಾಕಿ ಪೇಪರ್ ಓದುತ್ತಿದ್ದ. ಹರಿಯೂ ಸಹ ಅಲ್ಲಿಗೆ ಬಂದ.

     ಮೀನಾ "ಅಪ್ಪನಿಗೆ ತಿಂಡಿ ಬಡಿಸು...?" ಎಂದೇಳಿ ಪ್ರಭುವಿನ ಕಣ್ಣು ಮುಚ್ಚಿಕೊಂಡು ತನ್ನ ರೂಂ ಬಳಿಗೆ ಕರೆದು ಕೊಂಡು ಬಂದಳು.

     ಮೀನಾ "ಏನು ಇರಬಹುದು ಹೇಳು? ಪ್ರಭು ಚಿನ್ನ..." ಎಂದು ಕೇಳಿದಳು

     ಅದಕ್ಕೆ ಪ್ರಭಯ "ನನಗೆ ಗೋತ್ತಿಲ್ಲಮ್ಮ?" ಎಂದನು ಅವನ ಕಣ್ಣುಗಳನ್ನು ನಿಧಾನವಾಗಿ ತೆರೆದಾಗ ಆವನ ಕಣ್ಣುಗಳ ಮುಂದೆ ತನ್ನ ಹುಟ್ಟು ಹಬ್ಬಕ್ಕೆಂದು ತಂದಿದ್ದ ಉಡುಗರೆಗಳ ರಾಶಿಯನ್ನು ಪ್ರಭು ತುಂಬ ಸಿಟ್ಟಿನಿಂದ ನೋಡುತ್ತ.
"ನನಗೆ ಈ ಉಡುಗಾರೆಗಳು ಬೇಡ ನನ್ನ ಬನ್ನಿರುಘಟ್ಟ ಮೃಗಾಲಯಕ್ಕೆ ಕರೆದು ಕೊಂಡು ಹೋಗಿ..?" ಎಂದು ಕೂಗಾಡಿದ. ಅದಕ್ಕೆ ಅವನ ತಂದೆ ತಾಯಿ "ಸರಿ... ಕೂಗಾಡಬೇಡ ಕರೆದು ಕೊಂಡು ಹೋಗುತ್ತಿವಿ" ಎಂದು ಸಮಾದಾನ ಮಾಡಿದರು. ಹರಿ ಕಿರುಗಣ್ಣಿನಲ್ಲೆ ಆವರನ್ನು ನೋಡುತ್ತಿದ್ದ.

    ಎಲ್ಲರೂ ಬನ್ನಿರುಘಟ್ಟಕ್ಕೆಂದು ಮನೆ ಮುಂದೆ ನಿಂತಿದ್ದ ಬೆಂಜ್ ಕಾರಲ್ಲಿ ಕೂರುತ್ತಾರೆ.  ಹರಿ ಸಹ ಕಾರಿನಲ್ಲಿ ಕೂರುವುದಕ್ಕೆ ಬಂದಾಗ ರೇವಣ್ಣ ಅವನನ್ನು ತಡೆದು ಕೈ ತೋರಿಸುತ್ತಾ "ಹರಿ ನೀನು ಅಲ್ಲಿ ಏನಾದರು ಕೀಟ್ಲೆಮಾಡಿದರೆ ಜೊತೆಗೆ ಏನಾದರು ಮಾತಾಡಿದರೇ ಅಲ್ಲೆ ಹೊಡೇಯುತ್ತೆನೆ" ಎಂದು ಹೆದರಿಸಿ ಕಾರಿನಲ್ಲಿ ಕುರಿಸಿದ ಎಲ್ಲರೂ ಕಾರಲ್ಲಿ ಬನ್ನೀರುಘಟ್ಟಕ್ಕೆ ಹೋಗುತ್ತಾರೆ.
ಎಲ್ಲರು ಬನ್ನಿರುಘಟ್ಟಕ್ಕೆಲ್ಲ ಬಂದಿಳಿದು ಮೃಗಾಲಯದ ವಲಕ್ಕೆ ಹೋಗುತ್ತಾರೆ. ವಿದೇಶಿ ಹಕ್ಕಿಗಳು ಡಿಸ್ಕಾವಾರಿ ಚಾನಲ್ ನಲ್ಲಿ ತೋರಿಸುವತಹ ಪ್ರಣಿಗಳನ್ನು ನೋಡುತ್ತ ಮುಂದೆ ಸಾಗಿದರು. ಆ ಸಮಯದಲ್ಲಿ ಮೊಸಳೆಯನ್ನು ಒಂದು ಬೋನಿಗೆ ಹಾಕಿರುವುದನ್ನು ನೋಡುತ್ತಿರುತ್ತಾರೆ.

     ರೇವಣ್ಣ ಆ ಮೊಸಲಳೆಯ ಬೋನ್ ಮುಂದೆ ಹಾಕಿದಂತಹ ಗ್ಲಾಜನ್ನು ಕುಟ್ಟಿ "ಹೋ.." ಎಂದು ಕೂಗಿದನು. ಅಪ್ಪನಂತೆ ಮಗ ಪ್ರಭು ಸಹ ಜೊರಾಗಿ ಗ್ಲಾಜನ್ನು ಬಡಿದು:-

     "ಎ.. ಎದ್ದೆಳು ಈ ಕಡೇ ಬಾ..." ಎಂದು ತನ್ನ ಕಪಿ ಚೇಷ್ಟೆಯನ್ನು ಮಾಡಲು ಮುಂದಾದನು.

     ಹರಿ "ಅದು ಮಲಗಿದೆ. ಅದಕ್ಕೆ ತೊದರೆಯನ್ನು ಕೊಡಬೇಡ" ಎಂದು ಮೃದುವಾಗಿ ಹೇಳಿದ.

     ಪ್ರಭು "ಹೋ... ನಾನೇನು ಡ್ಯಾನ್ಸ್ ಮಾಡುತ್ತಿದೆ ಅಂತ ಹೇಳಿದನ್ನ?" ಎಂದು ಉರಿದುಕೊಂಡು ಎಲ್ಲಾ ಬೇರೆ ಬೇರೆ ಪ್ರಾಣಿಗಳನ್ನು ನೋಡಲು ಹೋದರು ಹರಿ ಮಾತ್ರ ಆ ಮೊಸಳೆಯನ್ನೆ ನೋಡುತ್ತ ನಿಂತ. ಇವರಿಗೆ ಇದು ನಮ್ಮ ಹಾಗೇ ಒಂದು ಜೀವ ಅಂತ ಯಾಕೆ ತಿಳಿಯಲ್ಲ. ಹೋ... ಮೊಸಳೆ ಎದ್ದು ಬಂದಿತ್ತು ಅದರ ಕಣ್ಣು ಎಷ್ಟು ಚಿಕ್ಕ ಇದೆ. ಅದರ ಬಾಯಿಗೆ ಎಷ್ಟು ದೊಡ್ಡದಾಗಿ ತೆರೆಯುತ್ತಿದ್ದೆ ಎಂದು ವನಸಿನಲ್ಲೆ ಹೇಳಿಕೊಳ್ಳುತ್ತಿಂದತೆಯೇ ಮೊಸಳೆ ಮೆಲ್ಲಗೆ ಮೇಲೆರಿತು. ಅದನ್ನು ಪ್ರಭು ನೋಡಿ "ಅಮ್ಮ ಮೊಸಳೆ ಎದ್ದಿದೆ ಎಂದು ಖುಷಿಯಿಂದ ಹರಿಯನ್ನು ಕೆಳಕ್ಕೆ ಬಿಳಿಸಿ ಎರಡು ಕೈಯನ್ನು ಮೊಸಳೆಯ ಮುಂದೆ ಹಾಕಿದ ಗ್ಲಾಜಿನ ಮೇಲೆ ಕೈ ಇಟ್ಟು ಕುತೂಹಲದಿಂದ ನೋಡುತ್ತಿದ್ದನು.

     ಹರಿಗೆ ಸಿಟ್ಟು ಬಂದು ಗ್ಲಾಜ್ ನ್ನು ದಿಟ್ಟಿಸಿ ನೋಡಿದ ಇದಕ್ಕಿಂದತೆ ಆ ಗ್ಲಾಜ್ ಮಾಯ ವಾಯಿತು ಪ್ರಭು ಆ ಮೊಸಳೆಯನ್ನು ಕೂಡಿ ಹಾಕಿದ್ದ ಬೋನಿನೊಳಕ್ಕೆ ಬಿದ್ದನು. ಮೊಸಳೆ ಬೋನಿಂದ ಹೊರಕ್ಕೆ ಬಂದು ಪ್ರಭುವಿನ ಮುಂದೆ ತಲೆಯನ್ನು ಎತ್ತಿ ನೋಡ ತೊಡಗಿತ್ತು. ನಂತರ ಮೊಸಳೆ ಗಾಬರಿಯಿಂದ ಹೊರಕ್ಕೆ ಓಡಿತು. ಜನರೆಲ್ಲರೂ ಭಯಪಟ್ಟು ಚಲ್ಲಾ ಪಿಲ್ಲಿಯಾಗ ತೊಡಗಿದರು.  ಭೋನಿನೊಳಕ್ಕೆ ಬಿದ್ದಿದ್ದ ಪ್ರಭು ನಿಧಾನವಾಗಿ ಎದ್ದು ಬೋನಿಂದ ಹೊರಕ್ಕೆ ಬರಲು ಕೈ ಮುಂದೆ ಮಾಡಿದ. ಆದರೆ ಮತ್ತೆ ಅಲ್ಲಿ ಗ್ಲಾಜಿತ್ತು. ಗಾಭರಿಯಿಂದ "ಅಮ್ಮ ಅಮ್ಮ" ಎಂದು ಕೂಗಾಡ ತೊಡಗಿದ. ಅಲ್ಲಿಗೆ ಅಮ್ಮ ಮೀನಾ ಬಂದು ಅವಳು ಗಾಭರಿಯಿಂದ            "ಹೇ.. ಪ್ರಭು" ಎಂದು ಕಿರುಚಾಡಿದಲು. ಪ್ರಭು ಸಹ "ಅಮ್ಮ ಅಮ್ಮ" ಎಂದು ಕಿರುಚಿದ.

     ಕೆಳಗ್ಗೆ ಬಿದ್ದಿದ್ದ ಹರಿ ಇವರ ಗೋಳನ್ನು ನೋಡಿ ನಗುತ್ತಿದ್ದ. ಹರಿಯನ್ನು ಕಿರುಗಣ್ಣಲ್ಲಿ ರೇವಣ್ಣ ನೋಡಿದಾಗ ಹರಿ ಒಂದೇ ಸಾರಿ ತನ್ನ ನಗುವನ್ನು ತನ್ನಲ್ಲೆ ನುಂಗಿಕೊಂಡ.

     ಅರಣ್ಯ ಇಲಾಖೆಯವರನ್ನು ಕರೆದು ಕೊಂಡುಬಂದ್ದು ಪ್ರಭುವನ್ನು ವರಕ್ಕೆ ತೆಗೆದು ಮನೆಗೆ ಕರೆದು ಕೊಂಡು ಬಂದರು.  ಅಷ್ಟೋತ್ತಿಗೆ ಪ್ರಭು ಚಳಿಜ್ವರದಿಂದ ನಡುಗುತ್ತಿದ್ದ. ಮೀನಾ ಪ್ರಭುವನ್ನು ಕಂಬಳಿಂದ ಮುಚ್ಚಿಕೊಂಡು ರೂಂಲ್ಲಿ ಮಲಗಿಸಿದಳು. ಹರಿಯನ್ನು ರೇವಣ್ಣ ಮನೆಯ ಒಳಕ್ಕೆ ತಳ್ಳಿ ಬಾಗಿಲನ್ನು ಹಾಕಿ ಹಲ್ಲು ಕಡಿದು ಹರಿಯ ಜುಟ್ಟಿಡಿದುಕೊಂಡು ಸಿಟ್ಟಿನಿಂದ "ಏನ್ ಮಾಡಿದೆ?" ಎಂದು ಹೊಡೆಯುತ್ತ ಕೇಳಿದನು. ಅದಕ್ಕೆ ಹರಿ "ನಾನು ಏನು ಮಾಡಿಲ್ಲ ನನಗೂ ಆ ಮ್ಯಾಜಿಕ್ಕೂ ನಡೇದಿದಕ್ಕೂ ಯಾವುದೇ ರೀತಿಯ ಸಂಭದವಿಲ್ಲ" ಎಂದನು. ರೇವಣ್ಣನ ಸಿಟ್ಟು ನತ್ತಿಗೇರಿ ಹರಿಯನ್ನು ರೂಂ ವಲಕ್ಕೆ ದೂಕಿ ಬಾಗಿಲನ್ನು ಹಾಕಿದ,
ನೀನು ಇಲ್ಲೇ ಬಿದ್ದಿರೆಂದು ಪ್ರಭುವಿನ ಅಂತಿರ ಹೋಗಿದ. ಆ ರಾತ್ರಿಯಾಲ್ಲ ಹರಿ ರೂಂಲ್ಲೇ ಹೊಟ್ಟೆಗೆ ಉಟವಿಲ್ಲದೆ ಕಳೇದನು.
ಮಾರನೆಯ ದಿನ ಬೆಳಗ್ಗೆ ಗೂಬೆಯೊಂದು ಪತ್ರವನ್ನು ತಂದು ಮನೆಯ ಮುಂದೆ ಹಾಕಿ ಪಕ್ಕದಲ್ಲಿಂದಂತಹ ಮರದ ಮೇಲೆ ಕುಳಿತು ಕಿರುಚಿತ್ತು. ಮನೆಯ ಹಾಲ್ ನಲ್ಲಿ ಪ್ರಭುವನ್ನು ನಿಲ್ಲಿಸಿ ರೇವಣ್ಣ ಮತ್ತು ಮೀನಾ ಪೋಟಗಳನ್ನು ತೆಗೆಯುತ್ತಿದ್ದರು. ಮೀನಾ "ಎಷ್ಟು ಚನ್ನಾಗಿ ಕಾಣುತ್ತಿದ್ದಿಯಾ" ಎಂದಳು ಆಗ ಅಲ್ಲಿಗೆ ಬಂದ ಹರಿ "ಇವನಿಗಿಂತ ನಾನೆ ಚನ್ನಾಗಿದ್ದಿನಿ?" ಅಂದನು ರೇವಣ್ಣ ಹರಿಯನ್ನು ಕಿರುಗಣ್ಣಲ್ಲಿ ನೋಡಿದ ಪಕ್ಕದಲ್ಲಿಂದ ಮೀನಾ "ನೀನೂ ಚನ್ನಾಗಿದಿಯಾ?" ಎಂದು ಹಾಸ್ಯವಾಗಿ ನಕ್ಕು ಅಡುಗೆ ಮನೆಗೆ ಕಡೆಗೆ ಹೋದಳು. ಹರಿ ಹೊರಕ್ಕೆ ಬರುತ್ತಿದ್ದಾಗ ಬಾಗಿಲಲ್ಲಿ ಪತ್ರಗಳು ಬಿದ್ದಿದನ್ನು ನೋಡಿ ಅವನ್ನು ತೆಗೆದು ಕೊಂಡು ಯಾರು ಯಾರಿಗೆ ಬಂದಿವೆ ಎಂದು ನೋಡಿದ.
     ಅದರಲ್ಲಿ ಒಂದು ತನ್ನ ಹೆಸರಿಗೆ ಬಂದಿರುವುದನ್ನು ನೋಡಿ ಖುಷಿಯಿಂದ ಮನೆಯ ಒಳಕ್ಕೆ ಬಂದು ರೇವಣ್ಣನಿಗೆ ಪತ್ರಗಳನ್ನು ಕೊಟ್ಟು ಅವನ ಹೆಸರಿನಲ್ಲಿ ಬಂದಿದಂತಹ ಪತ್ರವನ್ನು ಮಾತ್ರ ಕೊಡದೆ ಮುಂದೆ ಬಂದು ಅದನ್ನು ತೆರೆಯಲು ಮುಂದಾದ. ಅದನ್ನು ನೋಡಿದ ಪ್ರಭು ಅವನ ಕೈಯಿಂದ ಕಿತ್ತುಕೊಂಡು ಅಪ್ಪ ಹರಿಗೆ ಪತ್ರ ಬಂದಿದೆ ಎಂದು ರೇವಣ್ಣನತ್ತಿರ ಕೊಟ್ಟನು. ಅದಕ್ಕೆ ರೇವಣ್ಣ ನಿನಗೂ ಪತ್ರ ಬಂದಿದಿಯಾ ಎಂದು ನಕ್ಕು ಅದನ್ನು ನೋಡಿ ಅವನ ಹೆಸರಿನಲ್ಲಿಯೇ ಬಂದಿತ್ತು
    . ಅದರ ಹಿಂದೆ ಹರಿಯ ಬಲಗೈಯಲ್ಲಿಂದಂತಹ ಚಿನ್ನೆಯ ಗುರುತು ಇತ್ತು...!
   ಎಲ್ಲರೂ ಆಶ್ಚರ್ಯದಿಂದ ಅವನನ್ನು ನೋಡಿದರು. ಹರಿ ಹೆದರಿಕೊಂಡಿದ್ದ. ಅವನ ಬಾಯಿ ಒಣಗಿತ್ತು. ಹೊರಗೆ ಮತ್ತೊಂದು ಗೂಬೆ ಮೂರು ಪತ್ರಗಳನ್ನು ಹಾಕಿದನ್ನು ನೋಡಿದ ರೇವಣ್ಣ ಎಲ್ಲವನ್ನು ಹರಿದ. ಹರಿ ಬೇಜಾರಿನಿಂದ ಅವನ ರೂಂನಲ್ಲಿ ಲೈಟ್ ಅನ್ನು ಆನ್ ಅಫ್ ಮಾಡುತ್ತಿದ್ದ. ಬಾಗಿಲ ಹತ್ತಿರ ರೇವಣ್ಣ ಯಾವುದೇ ಪತ್ರಗಳು ಬಾರದಂತೆ ಬಾಗಿಲಿಗೆ ಒಂದು ಮರದ ಪಟ್ಟಿಯನ್ನು ಹೊಡೆಯುತ್ತಿದ ಸದ್ದು ಕೇಳಿತ್ತು. ಅದೇನೆಂದು ನೋಡಿದ ಹರಿ ಬಾಗಿಲನ್ನು ಹಾಕಿಕೊಂಡ. ಹೊರಗಡೇ ಗೂಬೆಗಳ ಸಾಮ್ರಾಜ್ಯವೇ ಸೃಷ್ಟಿಯಾಗಿತ್ತು. ಅವನ್ನು ನೋಡಿದ ರೇವಣ್ಣ ಅವುಗಳನ್ನು ಹಾರಿಸಲು "ಶೂ......." ಎಂದು ಕೂಗಾಡಿದ. ಎಷ್ಟು ಮಾಡಿದರು ಅವುಗಳು ಹಾರಲಿಲ್ಲ. ಮೀನಾ ರೇವಣ್ಣ ಮುಟ್ಟಿ ಕೆಳಗೆ ನೋಡಿ ಎಂದು ಕಣ್ಣಿನಲ್ಲಿ ಸನ್ನೆಯನ್ನು ಮಾಡಿದಳು. ಅಲ್ಲಿ ಹರಿಗೆ ಬಂದಿದಂತಹ ಪತ್ರಗಳು ಬಿದ್ದಿದವು. ಜೊತೆಗೆ ಹರಿ ಬಲಗೈಯಲ್ಲಿಂದ ಚಿನ್ನೆ ಪತ್ರದ ಹಿಂದೆ ಇತ್ತು. ಅದನ್ನು ನೋಡಿ ಮೀನಾ ಮತ್ತು ರೇವಣ್ಣ ಇಬ್ಬರೂ ಗಾಬರಿಯಾದರು.

     ನಂತರ ಮೀನಾ ಅಡುಗೆಯ ಮನೆಯಲ್ಲಿ ಅಡುಗೆಂದು ಕಾಯಿಯನ್ನು ಹೊಡೆಯಬೇಕಾದರೆ ಕಾಯಿ ಒಳಗೂ ಸಹ ಪತ್ರಗಳಿದ್ದವು ಅದನ್ನು ನೋಡಿದ ಮೀನಾ ರೇವಣ್ಣ ಬಳಿ ಬಂದು "ಹರಿಗೆ ನಮ್ಮ ಎಲ್ಲ ರೀತಿಯಾ ವಿಷಯಗಳು ತಿಳಿಯುವ ಹಾಗೆ ಕಾಣುತ್ತಿದ್ದೆ" ಎಂದು ಸಂಜೆ ಎಲ್ಲಾರೂ ಕಾಫಿಯನ್ನು ಕುಡಿಯ ಬೇಕಾದರೆ ಹೇಳಿದಳು. ಅಲ್ಲಿಗೆ ಹರಿಯು ಸಹ ಬಂದ ಅಗಲೇ ಮನೆಯ ಕಿಟುಕಿಯ ಹತ್ತಿರ ಒಂದು ಗೂಬೆ ಹಾರಿ ಹೋಯಿತ್ತು ಅದನ್ನು ನೋಡಲು ಹರಿ ಕಿಟಕಿಯಾತ್ತಿರಾ ಬಂದ. ಮನೆಯ ಎಲ್ಲ ಕಡೇ ಪತ್ರಗಳು ಬರ ತೊಡಗಿದವು. ಹರಿ ಖುಷಿಯಿಂದ ಪತ್ರವನ್ನು ಹಿಡಿದು ಮುಂದಾದ ರೇವಣ್ಣ ಅಲ್ಲಿಗೆ ಬಂದು ಅವನಿಗೆ ಪತ್ರಗಳು ಸಿಗುತ್ತೆ ಅವನನ್ನು ಕಟ್ಟಿಯಾಕಿದ. ಈ ಏಲ್ಲ ಸನ್ನಿ ವೇಷಗಳನ್ನು ಕಂಡ ರೇವಣ್ಣ ಮೀನಾ ಇವನ ಆಸ್ತಿಯಾ ವಿಷಯಗಳ ಬಗ್ಗೆ ಆ ಪತ್ರಗಳಿಂದ ತಿಳಿಯುವ ಮುಂಚೆ ನಾವು ನಾಳೆ ಬೆಳಗ್ಗೆ ಅಗುವ ಹೊತ್ತಿಗೆ ಈ ಜಾಗವನ್ನು ಬಿಡಬೇಕು ಎಂದು ತಿರ್ಮಾನಿಸಿ ಅಲ್ಲಿಂದ ಹೊರಟರು.

1 comment:

  1. ಹರಿಯ ಬಲಗೈಯಲ್ಲಿಂದಂತಹ ಚಿನ್ನೆಯ ಗುರುತು ಆ ಪತ್ರದಲ್ಲೂ ಇದ್ದದ್ದು ನೋಡಿ ಅಚ್ಚರಿಯಾಯಿತು.
    ಹರಿಗೆ ಬರುವ ಪತ್ರಗಳನ್ನು ನೋಡಿ ಮೀನಾ ಮತ್ತು ರೇವಣ್ಣ ಇಬ್ಬರೂ ಗಾಬರಿಯಾದದ್ದು ನೈಜವಾಗಿದೆ.

    ಮುಂದುವರೆಯಲಿ...

    your blog has been shared at:
    https://www.facebook.com/groups/kannada3K/permalink/483794418371780/

    ReplyDelete