ಹಾಸನ ದನಗಳ ಜಾತ್ರೆ : ಒಂದು ಪರಿಚಯ

- ದ್ಯಾವನೂರು ಮಂಜುನಾಥ್

ಹಾಸನ ದನಗಳ ಜಾತ್ರೆಯಲ್ಲಿ ಛಾಯಚಿತ್ರ
ತೆಗೆಯುತ್ತಿರುವುದು
     ಹಾಸನ ದನಗಳ ಜಾತ್ರೆಗೆ ದಶಕಗಳ ಇತಿಹಾಸವಿದ್ದು ಜಾತ್ರೆಯ ವೈಭವನ್ನು ನೋಡುವುದಕ್ಕೆ ಎರಡು ಕಣ್ಣುಗಳು ಸಾಲದು. ಸುಗ್ಗಿ ಕಾಲ ಬಂದಿತೆಂದರೆ ನಾಡಿನಾದ್ಯಂತ ಜಾತ್ರೆಗಳು ಪ್ರರಂಭವಾಗುತ್ತವೆ ಅದರಲ್ಲು ಮೈಸೂರು ಪ್ರಂತ್ಯದಲ್ಲಿ ಡಿಸೆಂಬರ್ ಚಳಿ ಪಾರಂಭವಾಗುತ್ತಿದಂತೆ ಪ್ರರಂಭವಾಗುವ ಮೈಸೂರು ಸೀಮೆಯ ಮೊದಲ ದನಗಳ ಜಾತ್ರೆ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ರಾಮನಾಥಪುರ, ನವಂಬರ್ ತಿಂಗಳಲ್ಲಿ ಷಷ್ಠಿ ದಿನ ಸುಬ್ರಹ್ಮಣ್ಯ ರಥೋತ್ಸವ ಜೊತೆಗೆ ದನಗಳ ಜಾತ್ರೆ ಪ್ರರಂಭವಾಗುತ್ತದೆ. 

     ಈ ಜಾತ್ರೆ ಮುಗಿಯುತ್ತಿದ್ದಂತೆ ಹಾಸನ ಜಾತ್ರೆ ಪ್ರರಂಭವಾಗುತ್ತದೆ. ದನಗಳ ಜಾತ್ರೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ  ಸಾವಿರಾರು ರೈತರು ಪಾಲ್ಗೊಂಡು ತಮ್ಮ ರಾಸುಗಳಿಗೆ ಅಲಂಕಾರಗಳನ್ನ ಮಾಡಿ, ಎತ್ತಿನ ಗಾಡಿಗಳನ್ನ ಶೃಂಗರಿಸಿ ಮೆರವಣಿಗೆಯಲ್ಲಿ ದನಗಳನ್ನು ಕರೆತಂದು ರಾಜ್ಯದ ಎಲ್ಲಾ ಭಾಗದ ರೈತ ಜನರು ತಮ್ಮ ದನಗಳನ್ನು ಇಲ್ಲಿ ಕಟ್ಟಿ ತಾತ್ಕಾಲಿಕ ಬಿಡಾರವನ್ನು ಹೂಡುತ್ತಾರೆ. ತಮ್ಮ ದನಗಳ ವ್ಯಾಪರವಾಗುವರೆಗೂ ಸಹ ಇಲ್ಲೇ ವಾಸಗಿರುತ್ತಾರೆ. ಹಾಗೂ ಮನೆಯಿಂದ ತಂದ ಘಟ್ಟದ ರೊಟ್ಟಿ ತಿನ್ನುತ್ತಿದ್ದರೆ... ಚಳಿಗೆ ಅದರ ರುಚಿಯನ್ನು ಹಾಸನ ದನಗಳ ಜಾತ್ರೆಯಲ್ಲಿ ಸವಿದು ನೋಡಬೇಕು.  ಘಟ್ಟದ ರೊಟ್ಟಿ ಮುಗಿದ ಮೇಲೆ ಗಂಡಸರು ಮುದ್ದೆ ತಿರುವಿ ಘಮ ಘಮಿಸುವ ಅವರೆಕಾಳು ಸಾರು ಮಾಡಿಕೊಂಡು ತೃಪ್ತಿಯಾಗಿ ತಿಂದು ಮಲಗಿದರೆ ಯಾವ ಕೊರೆಯುವ  ಚಳಿಯೂ ಸಹ ಮೈಗೆ ತಾಗುವುದಿಲ್ಲ.

     ಹಾಸನದ ದನಗಳ ಜಾತ್ರೆ ಒಂದು ದೇವರ ಉತ್ಸವದಂತೆಯೇ ಜನಾಕರ್ಷಕವಾಗಿರುತ್ತಿತ್ತು. ಜಾತ್ರೆಗೆಂದೇ ಮೀಸಲಾಗಿರುತ್ತಿದ್ದ ವಿಶಾಲವಾದ ಬಯಲಿನಲ್ಲಿ ಕನಿಷ್ಠ  ಒಂದು ತಿಂಗಳಿನಿಂದ ಹಿಡಿದು ಎರಡು ತಿಂಗಳವರೆಗೂ ಜಾತ್ರೆ ವಿಸ್ತರಗೊಳ್ಳುತ್ತಿತ್ತು.
       ದನಗಳ ಮಾರಾಟದ ಜೊತೆಗೆ ದನಕಟ್ಟುವ ಹುರಿಹಗ್ಗ, ಬಲವಾದ ಮೂಗುದಾರಗಳು ಅಲ್ಲಿ ಮಾರಾಟವಾಗುತ್ತವೆ. ದನಗಳ ಗೊರಸಿಗೆ ಹಲ್ಲೆ ಹೊಡೆಯುವವರೂ ಇರುತ್ತಾರೆ, ಹಳ್ಳಿಗರಿಗೆ ಮನರಂಜನೆಗಾಗಿ ನಾಟಕಗಳು, ಗ್ರಾಮೀಣ ಯುವಕ ಯುವತಿಯರಿಗೆ ಸ್ಪರ್ಧೆಗಳು, ಮ್ಯಾಜಿಕ್ ಶೋ, ತೊಗಲು ಬೊಂಬೆಯಾಟ, ಖರ್ಜೂರ ಮತ್ತು ಹಣ್ಣಿನ ಅಂಗಡಿಗಳು, ದನಗಳ ಸ್ಪರ್ಧೆ, ಉತ್ತಮ ರಾಸುಗಳಿಗೆ ಬಹುಮಾನ, ಪಶುವೈದ್ಯರೊಡನೆ ಚರ್ಚೆ, ರೈತರುಗಳ ಸ್ನೇಹ ಸಮ್ಮಿಲನ ಇವೆಲ್ಲಾ ಸೇರಿ ರೈತಾಪಿ ಜನಗಳು ಜಾತ್ರೆಯನ್ನು ತೀವ್ರ ತವಕದಿಂದ ಕಾಯುವಂತೆ ಮಾಡುತ್ತಿದೆ. ಯಾವುದೇ ದನಗಳ ಜಾತ್ರೆಯಾಗಲಿ ಆ ಪ್ರದೇಶದ ಸಾಂಸ್ಕೃತಿಕ ವೈಭವವನ್ನು ಅಲ್ಲಿ ಕಾಣಬಹುದು. ಆಯಾ ಪ್ರದೇಶದ ಸಾಂಸ್ಕೃತಿಕ ಆಚರಣೆಗಳೂ ಕಾಣಬರುತ್ತವೆ.
 ಪ್ರಾಣಿಗಳ ಓಟದ ಸ್ಪರ್ಧೆ, ಕೋಳಿ ಆಟ, ಯುವಕ-ಯುವತಿಯರಿಗೆ ಹಗ್ಗಜಗ್ಗಾಟದಂತಹ ಸ್ಪರ್ಧೆಗಳು ನಡೆಯುತಿತ್ತು. ಜೊತೆಗೆ ಆಯಾ ಪ್ರದೇಶದ ಮುಖ್ಯ ಬೆಳೆಯ ಮಾರಾಟವೂ ನಡೆಯುತ್ತದೆ.
     ಹಿಂದೆ ಹಾಸನದಲ್ಲಿ ನಾಟಕ ಕಂಪನಿಗಳು ದನಗಳ ಜಾತ್ರೆಯಲ್ಲಿ ತಿಂಗಳುಗಟ್ಟಲೆ ಕ್ಯಾಂಪ್ ಮಾಡಿ ನಾಟಕ ಪ್ರದರ್ಶಿಸುತ್ತಿದ್ದವು. ಆಗಾಗ ರೈತರೆಲ್ಲಾರು ಸೇರಿ ತಿಂಗಳುಗಟ್ಟಲೆ ಪೌರಣಿಕ ನಾಟಕಗಳನ್ನು ಕಲಿತು ನೆಂಟರಿಷ್ಟರನ್ನು ಕರೆಸಿಕೊಂಡು ನಾಟಕ ಪ್ರದರ್ಶಿಸಿ ಆನಂದಿಸುತ್ತಿದ್ದರು. ಬ್ರಿಟಿಷ್ ಅಧಿಕಾರಿ ವೇದರಾಲ್ ಮತ್ತು ಸ್ಥಳೀಯ ಅಪ್ಪಣ್ಣಯ್ಯಂಗಾರ್ ರವರ ಪ್ರಯತ್ನದಿಂದ ೧೯ನೆಯ ಶತಮಾನದಲ್ಲಿ ಆರಂಭವಾದ ಹಾಸನ ದನಗಳ ಜಾತ್ರೆ ಇಂದಿಗೂ ಸಹ ನಡೆಯುತ್ತಾ ಬಂದಿದೆ.
     ಗೊರೂರು ರಸ್ತೆಯ ಸಂತೆ ಮೈದಾನದಲ್ಲಿ ನಡೆಯುತ್ತಿದ್ದ ಹಾಸನದ ದನಗಳ ಜಾತ್ರೆ ಈಗಲೂ ಅದೇ ಸ್ಥಳದಲ್ಲಿ ೨೦ ದಶಕಗಳ ನಂತರ ಮರುಚಾಲನೆ ಗೊಂಡಿದ್ದು, ದಶಕಗಳಿಂದ ಮರೆಯಾಗಿದ್ದ ಜಾನಪದ ಸೊಗಡು ಮರುಕಳಿಸಿದೆ. ನಗರ ಸಭೆಯಿಂದ ಜಾನುವಾರುಗಳನ್ನು ಕಟ್ಟಲು, ನೀರಿನ ಸಮರ್ಪಕ ವ್ಯವಸ್ಥೆ ಹಾಗೂ ತಾತ್ಕಾಲಿಕ ಬೆಳಕಿನ ವ್ಯವಸ್ಥೆಯನ್ನು ಮಾಡಿದ್ದು  ಹಿಂದೆ ಅಂಗಡಿ ಮಳಿಗೆಗಳಲ್ಲಿ ಬಿರುಸಿನ ವ್ಯಾಪಾರ ನಡೆಯುತ್ತಿತ್ತು ಆಗ ಇಲ್ಲಿಯ ರಂಗಮಂಟಪದಲ್ಲಿ ಹಿರಣ್ಣಯ್ಯನವರ ಲಂಚಾವತಾರ, ಮಕ್ಮಲ್ ಟೋಪಿ, ದೇವದಾಸಿ ಮುಂತಾದ ನಾಟಕಗಳು ಪ್ರದರ್ಶನಗೊಂಡು ಜನರನ್ನು ರಂಜಿಸಿವೆ.