ಕಥೆ ಚಿತ್ರಕಥೆ ಸಂಭಾಷಣೆ ಜೋಗಿ

-ದ್ಯಾವನೂರು ಮಂಜುನಾಥ್
ಪುಸ್ತಕ : ಕಥೆ ಚಿತ್ರಕಥೆ ಸಂಭಾಷಣೆ
ಲೇಖಕರು: ಜೋಗಿ
ಪ್ರಕಾಶಕರು: ಸಾವಣ್ಣ ಎಂಟರ್ ಪ್ರೈಸಸ್

     ಕನ್ನಡ ದಿನಪತ್ರಿಕೆಯ ಅಂಕಣ ಬರಹ, ಪುರವಣಿ, ಸಿನಿಮಾ, ಧಾರಾವಾಹಿ , ಕಥೆ, ಲೇಖನ ಹೀಗೆ ಕೈಯಿಗೆ ಸಿಗುವುದೆಲ್ಲದರಲ್ಲಿಯೂ ಸಕ್ರಿಯವಾಗಿ ಸಾಲು ಸಾಲಾಗಿ ಪುಸ್ತಕವನ್ನು ಬರೆಯುತ್ತಿರುವ ಜೋಗಿಯವರನ್ನು ನೋಡಿದರೆ ಅಚ್ಚಾರಿಯಾಗುತ್ತದೆ. ಹಾಗೇ ಇಂದು ಕನ್ನಡದಲ್ಲಿ ತಮ್ಮದೆ ಯಾದಂತಹ ಓದಗರನ್ನು ಹುಟ್ಟುಹಾಕಿರುವುದು ಸಹ ಅಚ್ಚರಿಯ ವಿಷಯವಾಗಿದೆ.
     ಇವರ ಕಥೆ ಚಿತ್ರಕಥೆ ಸಂಭಾಷಣೆ ಎಂಬ ಪುಸ್ತಕ ಸಿನಿಮಾ ಕ್ಷೇತ್ರದಲ್ಲಿ ಒಂದು ಉತ್ತಮ ಚಿತ್ರವನ್ನು ನಿರ್ದೇಶನ ಮಾಡಬೇಕೆಂಬ ಕನಸನ್ನು ಕಟ್ಟಿಕೊಡವರಿಗೆ ಮಾರ್ಗಸೂಚಿಯಾಗಿರುವುದು. ಜೋಗಿಯವರು ಸಿನಿಮಾ ರಂಗದ ಸರಿ ತಪ್ಪುಗಳನ್ನು ಗಮನಿಸುತ್ತಾ ಬಂದಿರುವ ಇವರು ನಮ್ಮ ಮುಂದಿನ ದಿನದಲ್ಲಿ ಸಿನಿಮಾ ರಂಗ ಹೇಗಿರಬೇಕು ಹಾಗೂ ಅದರಲ್ಲಿ ಅಡಗಿರುವು ಸೂಕ್ಷ್ಮ ಮಾರ್ಗದರ್ಶನದ ವಿಚಾರವನ್ನು ಈ ಪುಸ್ತಕದಲ್ಲಿ ಒರೆದಿದ್ದಾರೆ. ನಿರ್ದೇಶಕ’ ಅನ್ನೋ ಪಟ್ಟವನ್ನು ಯಶಸ್ವಿಯಾಗಿ ಅಲಂಕರಿಸಿರುವ ಹದಿನಾಲ್ಕು ಜನ ಯುವ ನಿರ್ದೇಶಕರು, ಇಬ್ಬರು ಕಿರುತೆರೆ ಮತ್ತು ಇಬ್ಬರು ಹಿರಿತೆರೆಯ ಸ್ಕ್ರೀನ್ ಪ್ಲೇ ತಜ್ಞರೂ ಈ ಪುಸ್ತಕದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

     ಯಾವುದೇ ಒಂದು ಸಿನಿಮಾ ತನ್ನ ಕಥೆಯನ್ನು ಬೇರೆ ಬೇರೆ ಪ್ರಕಾರಗಳ ಮೂಲಕ ಹೇಳುತ್ತಾ ಹೋದಾಗ ಅದರ ಆಶಯ ನೋಡುಗನ ಅನುಭವವಾಗುವಂತೆ ಮೂಡಿಸಿದಾಗ ಮಾತ್ರ ನಾವುಗಳು ಒಂದೊಳ್ಳೆ ಸಿನಿಮಾ ಮಾಡಬಹುದಾಗಿದೆ. ಹಾಗೆ ಸಿನಿಮಾ ಮಾಡಬೇಕಾದ್ರೆ ಮೊದಲು ಅವನು ಓದುಗನಾಗಿರಬೇಕು,ಜೀವನವನ್ನ ತೀವ್ರವಾಗಿ ನೋಡಿರಬೇಕು , ನೆನಪುಗಳಿರಬೇಕು , ಯಾವುದನ್ನಾದರೂ ನೋಡಿದಾಗ ಅದು ತೀವ್ರವಾಗಿ ತಟ್ಟಿರಬೇಕು. ಕಥೆ ನಿಮ್ಮನ್ನ ತಟ್ಟದಿದ್ದರೆ ಜನರನ್ನ ತಟ್ಟುವುದಿಲ್ಲ.
     ನೀವು ಸಹ ಮುಂದಿನ ದಿನದಲ್ಲಿ ಒಂದೊಳ್ಳೆ ಸಿನಿಮಾ ಮಾಡಬೇಕು ಎಂದು ಕನಸನ್ನುಕಟ್ಟಿದ್ದಾರೆ ಈ ಪುಸ್ತಕವನ್ನು ತಪ್ಪದೆ ಓದಿ. ಈ ಪುಸ್ತಕದಲ್ಲಿ ಪ್ರಕಾಶ್ ರೈ ಹೇಳುವಂತೆ ಈ ಒಂದು ಪುಸ್ತಕ ಸಿನಿಮಾ ಮಾಡುವವರ ಪಾಲಿಗೆ ಬಹುಮುಖ್ಯ ಕೈಪಿಡಿ ಯಾಗಿದೆ.