March 2, 2016

ಕೇರಿ ಜನ

ಅದೆಷ್ಟೋ ಕೋಟಿ ವರ್ಷಗಳಿಂದ
ಕೋಟಿ ಮೈಲುಗಳ ದೂರದಲ್ಲಿರುವೆ
ರಕ್ತ ಹೀರುತ್ತಾ ಮಂಜು ಚಿಮ್ಮುತ್ತಾ
ನೀ ಬಂದೆ
ಮಂಜು ಹೀರುತ್ತಾ ರಕ್ತ ಚಿಮ್ಮುತ್ತಾ
ನೀ ಹೋದೆ
ಹೋದೆಯ ಹೋಗು ನೀ ಹೋಗಿ ಬಾ
ನಮ್ಮ ಮುಷ್ಟಿ ಗಟ್ಟಿಯಾಗಿದೆ
ಪದದ ಹಿಮ್ಮಡಿ ಜಡ್ಡು ಹಿಡಿದಿದೆ
ಕೇರಿಯಲ್ಲಿ ಡೊಳ್ಳು ತಮಟೆ ಸದ್ದು ಕೇಳುತ್ತಿದೆ
ನಾ ಈಗ ಅಲ್ಲಿ ಹೆಜ್ಜೆಯಾಕಬೇಕು
ಅರ್ಥ ವಾಗಿಲ್ಲವ
ಊರ ಗುಡ್ಡದ ಬಂಡೆಯ ಮೇಲೆ
ಕೋಗಿಲೆ ರಾಗಕ್ಕೆ ನವಿಲು ಗರಿ ಬಿಚ್ಚದೆ
ಹರಿದ ಚಡ್ಡಿ ತೂತು ಬಾನಿನು ಕಿತ್ತಾಕಿ
ನಿತ್ತಿರುವೆ ಬೆತ್ತಲಾಗಿ ಅವಮಾನವ ಸಹಿಸಿ
ನಮ್ಮ ಭಾವವ ನೋಡುವ ಆ ಕಣ್ಣುಗಳ
ಪ್ರಶ್ನಿಸುತ್ತ ನಿಂತಿರುವೆ ಆ ಹಾರಮಿ ಕಣ್ಣುಗಳ ಕುಕ್ಕುತ್ತ
ಕೇರಿ ಜನರ ಧ್ವನಿಯಾಗಿ.

No comments:

Post a Comment