January 12, 2016

ಮತ್ತೊಂದು ಅವಕಾಶ

ಈ ಕತ್ತಲೆ
ಬದುಕಿಗೆ ಬೆಳಕಾಗಿ,
ಅರಳಲಿ  ಹೊಸ ವರ್ಷ.
ಖಾಲಿ ಖಾಲಿ
ಈ ಮನಸ್ಸು.
ನಿಮ್ಮ  ಪ್ರೀತಿ ಸ್ನೇಹಕ್ಕೆ,
ಮತ್ತೊಂದು ಅವಕಾಶವ
ಬೇಡುತ್ತಿದೆ.
ಮತ್ತೊಂದು ಅವಕಾಶ.


 ಕ್ಷಣದ ದಾರಿದಲಿ,
ನಮ್ಮಿ ಸಮ್ಮಿಲನಕ್ಕೆ.
ಬಯಕೆ,
ಮತ್ತೊಂದು ಅವಕಾಶಕ್ಕಾಗಿ.
ಒಂದು ವ್ಯತ್ಯಾಸ ,
ಹಳೆಯ ನೆನಪುಗಳು
ಕಾಡುತ್ತಿದೆ.
ಹೊಸದ ದಿನಗಳು
ಬೇಡುತ್ತಿದೆ.
ಹೊಸತನದ ಹೊಸ್ತಿಲಲ್ಲಿ
ಸಣ್ಣ ಹೆಜ್ಜೆ ಕರೆದೊಯ್ಯತ್ತದೆ
ನಮ್ಮಿ ಸ್ನೇಹಕ್ಕಾಗಿ,
ಮತ್ತೊಂದು ಅವಕಾಶವ
ಬೇಡುತ್ತಿದೆ.
ಜೀವನದ ನೋವಿನ ಭಾಗಗಳ
ಹೃದಯದಲ್ಲಿ ಪುಡಿ ಪುಡಿ.
ಹಿಂಜರಿಕೆ ನಮಗೆ ಬೇಡ
ಭವಿಷ್ಯವ ಕೈಯಲ್ಲಿ ಹಿಡಿದು
ಓಟ ಪ್ರಾರಂಭಿಸುವ
ಹೊಸ ಪ್ರಯಾಣ
ಯಶಸ್ಸು ಕೊಂಡೊಯ್ಯುತ್ತದೆ.

No comments:

Post a Comment