ಮೆಟ್ಟು

ಮೆಟ್ಟು
ಮಾತನಾಡದೆ ನಿಲ್ಲು
ಮೆಟ್ಟು ಸವೆದಿವೆ, ಹುಬ್ಬು ಗಟ್ಟು ಕಟ್ಟಿದೆ
ಹೊವ್ ನಾವು ನಿಮ್ಮ ನಾಯಿಯೆ
ಕೂ ಕು ಎಂದು ಕರೆದೊಡೆ
ಓಡಿ ಬಂದು ಬಿಸುಕತ್ತು ತಿನ್ನುವುದಕ್ಕೆ
ಮೆಟ್ಟು
ರಾಜ ರಾಣಿಯರ ನೆಲದ ಸಂಸ್ಕೃತಿಯ ಹೆಸರಿನಲ್ಲಿ
ರಾಜಕಾರಣಿಗಳ ಜೊತೆ ಗೂಟ ಹೊಡೆದು
ಹಲ್ಲು ಗಿಂಜುತ್ತ ಕೋಟು ಶೂ ಹಾಕಿದರಿಗೆ
ಉತ್ಸವದ ಮಂಟಪ ಸಜ್ಜಾಗಿದೆ
ಛೀ ಥೂ ಗಬ್ಬು ನಾರುತ್ತಿದೆ
ಇವರ ವ್ಯವಸ್ಥೆ ಅವ್ಯವಸ್ಥೆಗೆ
ಮೆಟ್ಟು
ಅಧಿಕಾರದ ಅಮಲಿನಲ್ಲಿ ಇರುವ ನಿಮಗೆ
ಮೆಟ್ಟು
ಬೇಕು ಬೇಡದ ನಿಮ್ಮ ಆಹ್ವಾನಕ್ಕೆ
ಕಡಲೆಕಾಯಿ ತಿಂದ್ದು ಬಾಡುವ ಗುಲಬಿಗೆ
ನೀರ ಹಾಕಿ ಬುಡಕ್ಕೆ ಸಗಣಿ ಹಾಕುವ ನಾವು
ಗುಲಾಮರೆ....?