November 24, 2014

೮೧ ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಪ್ರಥಮ ಸಮಾಲೋಚನಾ ಸಭೆ

೨೦೧೫ ರ ಫೆಬ್ರವರಿಯಲ್ಲಿ ೮೧ ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವು ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ಜರುಗಲಿದೆ. ಈ ಸಮ್ಮೇಳದದ ಲೋಗೊ ಹೇಗೆ ಇರಬೇಕು ಎನ್ನುವುದರ ಬಗ್ಗೆ ನೆನ್ನೆ ನಡೆದ ಜಿಲ್ಲಾ ಪಂಚಾಯತ್ ಹಾಸನದಲ್ಲಿ ಸಮ್ಮೇಳನದ ಪ್ರಥಮ ಸಮಾಲೋಚನಾ ಸಭೆ ನಡೆಯಲ್ಲಿ ಚರ್ಚೆಯಲ್ಲಿತ್ತು. ಈ ಒಂದು ಚರ್ಚೆಯಲ್ಲಿ ಮಾನ್ಯರಾದ ಮಾಜಿ ಪ್ರಧಾನಿ ದೇವೇಗೌಡರು ಸೇರಿದಂತೆ ಜಿಲ್ಲೆಯ ಗಣ್ಯರು ಭಾಗವಹಿಸಿದ್ದರು.
ಈ ವರ್ಷ ಹಾಸನ ಜಿಲ್ಲೆಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೇಯುತ್ತಿರುವು ತುಂಬ ಖುಷಿಯ ವಿಷಯ.

ಅಪ್ಪಟ ಕನ್ನಡದ ‘ಹಾಸನ ಜಿಲ್ಲೆ’ ಹೆಸರೇ ಒಂದು ಚೇತನ ಶಕ್ತಿ. ಇದು ಪುಣ್ಯ ಪುರುಷರ ಪುಣ್ಯ ಭೂಮಿ. ಇತಿಹಾಸದ ಪುಟಗಳನ್ನು ಉಜ್ಜಲಗೊಳಿಸಿದ ವೀರರ ಸಾಮ್ರಾಜ್ಯ ಧರ್ಮ, ಸಂಸ್ಕೃತಿ, ಸಾಹಿತ್ಯ ಮತ್ತು ಕಲೆಗಳ ಬೀಡು. ಹಿಂದು, ಜೈನ, ಬೌದ್ಧ, ಕ್ರೈಸ್ತ, ಇಸ್ಲಾಂ ಮೊದಲಾದ ಸರ್ವಧರ್ಮ ಸಮಸ್ವಯ ಕ್ಷೇತ್ರವಾಗಿದೆ.

ಯಾರು ಶೈವ ಶಿವನೋ ವೈಷ್ಣವರ ವಿಷ್ಣವೊ
ವೀಮಾಂಸಕರ ಕರ್ಮವೊ ಬೌದ್ಧರ ಬುದ್ಧನೋ
ಜೈನರ ಜಿನನೋ ಕ್ರೈಸ್ತರ ಕ್ರಿಸ್ತನೊ
ಮಹಮ್ಮದೀಯಯರ ಅಲ್ಲಾನೊ ವೇದಾಂತಿಗಳ ಬ್ರಹ್ಮನೊ

ಎಂದು ಹಾಸನ ಜಿಲ್ಲೆಯ ಬೇಲೂರಿನ ವಿಜಯ ನಾರಾಯಣ ದೇಗುಲದಲ್ಲಿರುವ ಕ್ರಿ.ಶ.1117ರ ಶಾಸನದಲ್ಲಿ ಉಲ್ಲೇಖವಾಗಿದೆ. ಕುವೆಂಪುರವರ ಒಂದು ಕವಿತೆಯ ಸಾಲು “ಸರ್ವರಿಗೂ ಸಮಪಾಲು, ಸರ್ವರಿಗು ಸಮಬಾಳು ಎಂದು ನವಯುಗವಾಣಿ ಗೋಷಿಸಿದೆ ಕೇಳಿ” ಎಂಬ ಮಾತಿನಂತ್ತೆ ಈ ವರ್ಷದ ಲೋಗ ಇರಲಿ.
ಶ್ರವಣಬೆಳಗೊಳದ ಬಾಹುಬಲಿ, ಮುಜಾರಬಾದ್ ಕೋಟೆ, ಶೇಟ್ಟಿಹಳ್ಳಿಯ ಚರ್ಚೆ, ಬೇಲೂರು ಹಳೇಬೀಡು, ಹಾಸನ ಜಿಲ್ಲೆಯ ದನಗಳ ಜಾತ್ರೆ ಈ ಒಂದು ಲಾಂಛನದಲ್ಲಿ ಸೇರಲಿ .

ದ್ಯಾವನೂರು ಮಂಜುನಾಥ್

No comments:

Post a Comment