September 7, 2014

ಕರಾಳ ಕಥಾ ಲೋಕ ಭಾಗ-1

   ಅಂದು ಕರಾಳ ಅಮಾವಸ್ಯೆ ವಡ್ಡರ ಕಪ್ಪೆ, ಮರದ ಹುಳುಗಳು ಕಿರುಚಾಟ ಮುಗಿಲು ಮುಟ್ಟಿತ್ತು ಇದರ ನಡುವೆಯಲ್ಲಿ ಭಯಾನಕ ಸಿಡಿಲು ಗುಡುಗು ಒಂದು ಭೂಗತ ಪ್ರಪಂಚವೇ ಸೃಷ್ಟಿಯಾಗಿತ್ತು. ಎತ್ತ ಕಡೆ ಕಣ್ಣು ಹರಿಸಿದರು ಕಪ್ಪು ಕವಿದ ವಾತವರಣ. ಮನೆ ಮುಂದೆ ತೂಗಿ ಹಾಕಿದ್ದಂತಹ ನಾಮ ಪಲಕದ ಮೇಲೆ ಕಪ್ಪನೆಯ ಗೂಬೆಯೋಂದು ಕುಳಿತು ಕೋಂಡು "ಕೂಹು... ಕೂಹು..." ಎನ್ನುವ ಕೂಗು ಇನ್ನು ಭಯದ ವಾತವಾರಣದ ಸೃಪ್ಟಿಗೆ ಕಾರಣಗಿತ್ತು. ದೂರದಲ್ಲಿ ಬರುತ್ತಿದ್ದಂತಹ ಕೊಳ್ಳೆಗಾಲದ ಪ್ರಸಿದ್ಧ ಮಾಂತ್ರಿಕ ಜಕ್ಕಣ್ಣ ನನ್ನು ನೋಡಿ ಆ ಗೂಬೆ ಮನೆ ಹಿಂದಕ್ಕೆ ಹಾರಿ ಹೋಯಿತು.
                ಜಕ್ಕಣ್ಣ ಕಪ್ಪನೆಯ ನೀಲಾಂಗಿ, ತಲೆಗೆ ಜೋಕರ್ ಟೋಪಿಯಂತೆ ಉದ್ದನೆಯ ಕಪ್ಪು ಟೋಪಿ. ಉದ್ದನೆಯ ಬಿಳಿ ಗಡ್ಡ ಬಿಟ್ಟು ಕೈಯಲ್ಲಿ ತನ್ನ ಮಂತ್ರದ ಅಸ್ತ್ರವನ್ನು ಹಿಡಿದು ಮನೆಯ ಮುಂದಿನ ಉದ್ಯಾವನಕ್ಕೆ ಬಂದು ರಸ್ತೆಯಲ್ಲಿಂದತಹ ಬೀದಿ ದೀಪಗಳನ್ನು ತನ್ನ ಬಳಿ ಇದ್ದ ಮಂತ್ರದ ಅಸ್ತ್ರದಿಂದ ಸೆರೆ ಹಿಡಿದ. ಮೊದಲೆ ಕತ್ತಲು ಅವರಿಸಿದ್ದ ವಾತವರಣ ಇನ್ನು ಕತ್ತಲನ್ನು ಅವರಿಸಿತ್ತು. ಮನೆಯ ಪಕ್ಕದಿಂದ ಒಂದು ಬೆಕ್ಕು "ಮೀಯೋ..." ಎಂದು ಒಂದು ಸಾರಿ ಶಬ್ದ ಮಾಡಿತ್ತು. ಆಗ ಜಕ್ಕಣ್ಣ "ಲೀಲಾ ನೀನು ಇಲ್ಲಿದ್ದೀಯಾ... ಪ್ರೋ|| ಮಾಣಿ ಬರುವ ಸಮಯವಾಗಿದೆ" ಎಂದು ಹೇಳಿದ ಲೀಲಾ ಮಾಂತ್ರಿಕ ಜಕ್ಕಣ್ಣನ ಹೆಂಡತಿ ಮಾಣಿ ಬರುತ್ತಿರುವ ವಿಷಯವನ್ನು ತಿಳಿದ ಕೂಡಲೆ ಬೆಕ್ಕಿನ ಸ್ವರೂಪ ಲೀಲಾವಾಗಿ ತನ್ನ ಸ್ವರೂಪನ್ನು ಪಡೇದಳು.
                ಲೀಲಾ "ಈಗ ಪ್ರೋ|| ಮಾಣಿ ನಿಜವಾಗಿಲು ಬರುತ್ತಾರಾ?" ಎಂದು ಅನುಮಾನದಿಂದಲೇ ಕೇಳಿದಳು.
                ಜಕ್ಕಣ್ಣ "ಬರುತ್ತಿದಿನಿ ಅಂತ ಈಗಿನ್ನು ಪೋನ್ ಮಾಡಿದ್ರು"
                ಲೀಲಾ " ಆ ಹುಡುಗನನ್ನು ಕರೇದು ಕೋಂಡು ಬರುತ್ತಿದ್ದಾರಾ?"
                ಎಂದು ಮಾತಾನಾಡುತ್ತ ಮುಂದೆ ಸಾಗಿದರು. ಆ ಕರಾಳ ಅಮಾವಸ್ಸೆ ದಿವಸ ಆಕಾಶ ಕಾಯದಲ್ಲಿ ಒಂದು ದೊಡ್ಡ ಬೆಳಕು ಬಂತು ಅದನ್ನು ಮಾಂತ್ರಿಕರಾದ ಜಕ್ಕಣ್ಣ ಮತ್ತು ಲೀಲಾ ನೋಡುತ್ತಿದ್ದಂತೆ ಆ ಬೆಳಕು ಇವರ ಕಡೇ ಬಂತು ಯಾವುದು ಈ ಬೆಳಕೆಂದು ನೋಡುತ್ತಿಂದತ್ತೆ ಬೈಕಿನ ಸೌಂಡ್ ಕೇಳಿಸಿತು. ಬೈಕಿನ ಮೇಲೆ ಪ್ರೋ|| ಮಾಣಿ ಹೆಡ್ ಲೈಟ್ ಹಾಕಿ 180ರ ಅತಿ ಮೇಗದಲ್ಲಿ ಆಕಾಶದಿಂದ ಜಕ್ಕಣ್ಣ ಮತ್ತು ಲೀಲಾರವರ ಮುಂದೆ ಬಂದು ಬೈಕಿನ ಡಿಸ್ಕ್ ಬ್ರೇಕ್ ಹಿಡಿದ. ಹಿಂದಿನ ಚಕ್ರ 60 ಡಿಗ್ರಿಗೆ ಬಂದು 0ಡಿಗ್ರಿಗೆ ಇಳಿಯಿತ್ತು ಲೀಲಾ ಗಾಬರಿಬಿದ್ದಳು.
                ಪ್ರೋ|| ಮಾಣಿ ಕಪ್ಪನೆಯ ಬಟ್ಟೆಯನ್ನು ಸುತ್ತಿಕೊಂಡು ಕಪ್ಪನೆಯ ಕನ್ನಡಕವನ್ನು ದರಿಸಿದ್ದ. ಗುಂಗೂರು ಗುಂಗೂರಾಗಿದ್ದ ತನ್ನ ತಲೆ ಕೂದಲು ಹಾಗೂ ಗಡ್ಡವನ್ನು ನೋಡಿದರೆ ಭಯಾನಕವಾಗಿ ಕಾಣುಸುತ್ತಿದ್ದ.

ಹರಿಯ ಬಲಗೈಲಿದ್ದ ಚಿನ್ನೆ
                ಮಾಣಿ "ಜಕ್ಕಣ್ಣನವರೇ ಚನ್ನಾಗಿದ್ದಿರಾ?" ಎನ್ನುತ್ತ ತನ್ನ ಕನ್ನಡಕವನ್ನು ತೆಗೆದು ಕೈಯಲ್ಲಿ ಮಗುವನ್ನು ಹಿಡಿದು ಜಕ್ಕಣ್ಣ ಮತ್ತು ಲೀಲಾರವರ ಕಡೆಗೆ ಮಾಣಿ ಬಂದು ಜಕ್ಕಣ್ಣನ ಕೈಯಿಗೆ ಮಗುವನಿರಿಸಿದ. ಜಕ್ಕಣ್ಣ ಮತ್ತು ಲೀಲಾ ಆ ಮಗುವನ್ನು ನೋಡು ನೋಡುತ್ತ ಮನೆಯ ಕಡೆಗೆ ನಡೆದರು. ಇವರ ಹಿಂದೆ ಮಾಣಿ ಸಹ ನಡೆದ.
                ಲೀಲಾ "ಮಗುವಿಗೆ ಯಾವುದೇ ರೀತಿಯ ತೋಂದರೆಯಾಗದಂತೆ ನಮ್ಮ ಬಳಿಗೆ ಸೇರಿದೆ. ಈ ಮಗುವಿಗೆ ತೋಂದರೆಯಾಗದಂತೆ ನಾವು ಕಾಪಡಬೇಕಿದೆ."
                ಜಕ್ಕಣ್ಣ " ಈ ಮಗುವನ್ನು ನೋಡುತ್ತಿದ್ದರೆ ಯಾವುದೋ ಒಂದು ದೊಡ್ಡ ಕುಂಟುಬದಿಂದ ಬಂದಂತೆ ಕಾಣುತ್ತದೆ." ಎಂದು ಹೇಳತ್ತ ಹಾಸಿಗೆಯ ಮೇಲೆ ಮಲಗಿಸಿದನು.
                ಮಾಣಿಯ ಕಣ್ಣಲ್ಲಿ ನೀರು ಸುರಿಯುತ್ತಿದ್ದನ್ನು ನೋಡಿ ಜಕ್ಕಣ್ಣ "ಮಾಣಿ  ನೀನು ತುಂಬಾ ಒಳ್ಳೆಯ ಕೆಲಸವನ್ನು ಮಾಡಿ ನಾನು ನಿನಗೆ ಹೇಗೆ ಟ್ಯಾಂಕ್ಸ್ ಹೇಳಬೇಕು ಅಂತ ತಿಳಿಯುತ್ತಿಲ್ಲ, ಮಾಣಿ ನಿನಗೆ ಈ ಮಗು ಹೇಗೆ ಸಿಕ್ಕಿತ್ತು?"
                ಮಾಣಿ "ನಾನು ಇಂದಿಗೆ ಸರಿಯಾಗಿ ಒಂದು ತಿಂಗಳಲ್ಲಿ ಹಾಸನಕ್ಕೆ ಹೋಗಿದ್ದೆ ಅಲ್ಲಿ ಗೌರಿಕೊಪ್ಪಲಿನಲ್ಲಿ ಕಾಕಪ್ಪ ಎಂಬ ದುಷ್ಟ ಮಾಂತ್ರಿಕ ಈ ಮಗುವಿನ ತಂದೆ ವೆಂಕಪ್ಪ ಮತ್ತು ತಾಯಿ ಗಂಗಾಕ್ಕ ಇವರಿಬ್ಬರು ಬಳ್ಳೆಯ ಗುಣದವರು ಜೊತೆಗೆ ಪ್ರಸಿದ್ದ ಮಾಂತ್ರಿಕರೆಂದು ಹೆಸರು ಮಾಡಿದ್ದರು. ಇವರಿಬ್ಬರ ಮಗುವೇ ಈ ಮಗು ಇದರ ಹೆಸರು 'ಹರಿ' ಎಂದು. ಆವತ್ತು ಆ ದೃಷ್ಟ ಮಾಂತ್ರಿಕ ಇವನ ತಂದೆ ಮತ್ತು ತಾಯಿಯನ್ನು ಕೊಂದುಹಾಕಿದ. ಈ ಮಗುವನ್ನು ಸಹ ಎಲ್ಲಿ ಕೊಂದು ಹಾಕಿ ಬಿಡುತ್ತಾನೆಂದು ಆ ದೃಷ್ಠ ಮಾಂತ್ರಿಕನಿಗೆ ತಿಳಿಯದ ಹಾಗೇ ನಾನೇ ನಿಮ್ಮ ಬಳಿಗೆ ತಂದು ಒಪ್ಪಿಸಿದ್ದೇನೆ. ಈ ಮಗುವಿಗೆ ಇವರ ತಂದೆ ಮತ್ತು ತಾಯಿಯ ಮಾಂತ್ರಿಕ ಶಕ್ತಿ ಇವನನ್ನು ಕಾಪಾಡುತ್ತದೆ ಜೊತೆಗೆ ನಿಮ್ಮ ರಕ್ಷಣೆ ಈ ಮಗುವಿಗೆ ತೀರ ಅವಶ್ಯಕವಾಗಿದೆ." ಎಂದು ಹೇಳಿ ಹೋರಟಿ ಹೋದನು.
                ಜಕ್ಕಣ್ಣ ಮಗುವಿನ ಬಲಗೈ ಮೇಲೆ ಸೂರ್ಯನ ಸುತ್ತ ಒಂಬತ್ತು ಗ್ರಹಗಳು ಸುತ್ತುತಿರುವ ಒಂದು ವೃತ್ತಕಾರದ ಚಿನ್ನೆಯನ್ನು ನೋಡಿ ಮಗುವಿನ ಹಣೆ ಸವರುತ್ತ 'ಹರಿ' ಎಂದನು. ಈಗೆ ಹರಿ ಮುಂದೆ ಜಕ್ಕಣ್ಣ ಮತ್ತು ಲೀಲಾರವರ ಮನೆಯಲ್ಲಿ ಬೆಳದನು ಇವರೇ ನನ್ನ ನಿಜವಾದ ತಂದೆ ತಾಯಿ ಎಂದು ತಿಳಿದು ಇವರ ಮಡಿಲಿನಲ್ಲೇ ಬೆಳೆದನು.

1 comment:

  1. ಪ್ರೋ|| ಮಾಣಿ ಅವರ entry ಸಿನಿಮಾ ಸ್ಟೈಲಿನಲ್ಲಿದೆ. ಜಕ್ಕಣ್ಣ ಭಯ ಹುಟ್ಟಿಸಿದ.
    ಹರಿಯ ಬಲಗೈಲಿದ್ದ ಚಿನ್ನೆ ಕಥನ ರೋಚಕವಾಗಿದೆ.

    ಮುಂದುವರೆಯಲಿ...

    your blog has been shared at:
    https://www.facebook.com/groups/kannada3K/permalink/483794418371780/

    ReplyDelete