March 29, 2014

2014ರ ಲೋಕಸಭಾ ಕ್ಷೇತ್ರಗಳ ಕಿರು ಪರಿಚಯ...........


ದಕ್ಷಿಣ ಕನ್ನಡ (ಮಂಗಳೂರು) ಲೋಕಸಭಾ ಕ್ಷೇತ್ರ

ಬಿಜೆಪಿ: ನಳಿನ್ ಕುಮಾರ್ ಕಟೀಲ್ (48) ಇವರ ಕೇವಲ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆಯನ್ನು ಹೋಂದಿದ್ದು ಮಂಗಳೂರು ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಕೆಲಸವನ್ನು ಮಾಡಿದ್ದು ಆರೆಸ್ಸೆಸ್ ಸಂಘಟನಾ ಕಾಯದಲ್ಲಿ ಸಹ ಕೆಲಸವನ್ನು ಮಾಡಿದ್ದಾರೆ ಇವರು 2009ರಲ್ಲಿ ನಡೆದಂತಹ ಸಂಸತ್ ಚುನಾವಣೆಯಲ್ಲಿ ಗೆಲವನ್ನು ಪಡೆದ್ದಿದಾರೆ. ಕಾಂಗ್ರೆಸ್: ಜನಾರ್ದನ ಪೂಜಾರಿ (76) ಬಿಕಾಂ ಹಾಗೂ ಎಲ್ ಎಲ್ ಬಿ ವಿದಯಾರ್ಹತೆಯನ್ನು ಹೋಂದಿರುವರು , ಇವರು 1977ರಿಂದ ರಾಜಕಾರಣದಲ್ಲಿ ಸಕ್ರಿಯವಾಗಿ 4 ಬಾರಿ ಸಂಸದರಾಗಿ ಕೇಂದ್ರ ಸಚಿವರಾಗಿ ಸೇವೆಸಲ್ಲಿಸಿದ್ದು ಜೋತಗೆ ಕೆ.ಪಿಸಿಸಿ ಅಧ್ಯಕ್ಷರಾಗಿ ಸಹ ಪಕ್ಷವನ್ನು ಮುನ್ನಡೆಸಿದ ಅನುಭವ ಸಹ ಇವರಿಗಿದೆ ಇನ್ನೂ ಜೆಡಿಎಸ್ ಅಭ್ಯರ್ಥಿ ಈ ಕ್ಷೇತ್ರದಲ್ಲಿಲ್ಲ ಆದರೆ ಬೆಂಬಲ ನೀಡಲಾಗಿದೆ. ಈ ಕ್ಷೇತ್ರದ ವ್ಯಾಪ್ತಿಗೆ ಒಟ್ಟು 8 ವಿಧಾನಸಭಾ ಕ್ಷೇತ್ರ, ಶಾಸಕರಾಗಿ 1) ಬೆಳ್ತಂಗಡಿ - ಕೆ ವಸಂತ ಬಂಗೇರಾ (ಕಾಂಗ್ರೆಸ್), 2) ಮೂಡಬಿದಿರೆ -ಕೆ ಅಭಯಚಂದ್ರ ಜೈನ್ (ಕಾಂಗ್ರೆಸ್), 3) ಮಂಗಳೂರು ನಗರ (ಉತ್ತರ) - ಮೊಯಿದ್ದೀನ್ ಬಾವ (ಕಾಂಗ್ರೆಸ್), 4) ಮಂಗಳೂರು ನಗರ (ದಕ್ಷಿಣ) - ಜಾನ್ ರಿಚರ್ಡ್ ಲೋಬೊ (ಕಾಂಗ್ರೆಸ್), 5) ಮಂಗಳೂರು ಯುಟಿ ಖಾದರ್ (ಕಾಂಗ್ರೆಸ್), 6) ಬಂಟ್ವಾಳ - ಬಿ ರಮಾನಾಥ ರೈ (ಕಾಂಗ್ರೆಸ್), 7) ಪುತ್ತೂರು -ಶಕುಂತಲಾ ಶೆಟ್ಟಿ (ಕಾಂಗ್ರೆಸ್) ಮತ್ತು 8) ಸುಳ್ಯ - ಎಸ್ ಅಂಗಾರ (ಬಿಜೆಪಿ). ಇದ್ದಾರೆ.


ಕೊಪ್ಪಳ ಲೋಕಸಭಾ ಕ್ಷೇತ್ರದ ಕಿರುಪರಿಚಯ

ಕೊಪ್ಪಳ ಹಾಲಿ ಸಂಸದರಾಗಿ ಶಿವರಾಮಗೌಡ ಶಿವಣ್ಣಗೌಡ (ಬಿಜೆಪಿ) ರವರು. ಪ್ರಸ್ತುತವಾಗಿ ಚುನಾವಣೆಯಲ್ಲಿ ಕಣದಲ್ಲಿರುವ ಬಿಜೆಪಿ ಅಭ್ಯರ್ಥಿಯಾಗಿ ಸಂಗಣ್ಣ ಕರಡಿ (63) ಇವರು 1978ರಲ್ಲಿ ತಾಲ್ಲೂಕು ಅಭಿವೃದ್ಧಿ ಮಂಡಳಿಯ ಸದಸ್ಯರಾಗಿ ರಾಜಕೀಯವನ್ನು ಪ್ರವೇಶಿದರು 1994ರಲ್ಲಿ ಪಕ್ಷೇತ ಅಭ್ಯರ್ಥಿಯಾಗಿ ವಿಧಾನಸಭೆಯನ್ನು ಪ್ರವೇಶಿದರು ಹಾಗು ಹಾಲಿ ಬಿಜೆಪಿಯ ಜಿಲ್ಲಾಧ್ಯ್ಷರಾಗಿರುವರು.,  ಕಾಂಗ್ರೆಸ್: ಬಸವರಾಜ ಹಿಟ್ನಾಳ (64) ಇವರು 1970ರಲ್ಲಿ ಮಂಡಲ ಪಂಚಾಯಿತಿ ಸದಸ್ಯರಾಗಿ ರಾಜಕೀಯವನ್ನು ಪ್ರವೇಶಿದ ಇವರು 2004ರಲ್ಲಿ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದು ಪ್ರಸ್ತತವಾಗಿ ಹಾಲಿ ಜಿಲ್ಲಾ ಕಾಂಗ್ರಸ್ ಅಧ್ಯಕ್ಷರಾಗಿರುವರು. ಜೆಡಿಎಸ್: ಅಭ್ಯರ್ಥಿ ಇಲ್ಲ ಆದರೆ ಬೆಂಬಲ ನೀಡಲಾಗಿದೆ. ಪ್ರಸ್ತುತ ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಒಟ್ಟು 8 ವಿಧಾನಸಭಾ ಕ್ಷೇತ್ರಗಳಲ್ಲಿ 1) ಸಿಂಧನೂರು - ಹಂಪನಗೌಡ (ಕಾಂಗ್ರೆಸ್) 2) ಮಸ್ಕಿ - ಪ್ರತಾಪ್ ಗೌಡ ಪಾಟೀಲ್ (ಕಾಂಗ್ರೆಸ್) 3) ಕುಷ್ಠಗಿ - ದೊಡ್ಡನಗೌಡ (ಬಿಜೆಪಿ) 4) ಕನಕಗಿರಿ - ಶಿವರಾಜ್ ತಂಗಡಗಿ ಕಾಂಗ್ರೆಸ್) 5) ಗಂಗಾವತಿ - ಇಕ್ಬಾಲ್ ಅನ್ಸಾರಿ (ಜೆಡಿಎಸ್) 6) ಯಲ್ಬುರ್ಗ - ಬಸವರಾಜ ರಾಯರೆಡ್ಡಿ (ಕಾಂಗ್ರೆಸ್) 7) ಕೊಪ್ಪಳ - ರಾಘವೇಂದ್ರ ಹಿಟ್ನಾಳ್ (ಕಾಂಗ್ರೆಸ್) 8) ಶಿರಗುಪ್ಪ - ನಾಗರಾಜ್ ಬಿಎಂ (ಕಾಂಗ್ರೆಸ್)


ಕೋಲಾರ ಲೋಕಸಭಾ ಕ್ಷೇತ್ರದ ಕಿರುಪರಿಚಯ

ಕೋಲಾರ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಕೆ.ಎಚ್.ಮುನಿಯಪ್ಪ (67) ಆಯ್ಕೆಯಾಗಿದ್ದು ಪ್ರಸ್ತುತವಾಗಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಕಣದಲ್ಲಿರುವವರು ಇವರು 1991ರ ಚುನಾವಣೆಯಲ್ಲಿ ರಾಜೀವ್ ಗಾಂಧಿ ಹತತ್ಯೆ ಅನುಕಂಪದ ಅಲೆಯಲ್ಲಿ ಕಂಡ ಗೆಲುವಿನ ಸರಣಿ ಸತತ 6ಬಾರಿ ಮುಂದುವರಿಕೆಯಾಗಿದ್ದಾರೆ ಇಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಎಂ ನಾರಾಯಣಸ್ವಾಮಿ (61) ಇವರು ಜನತಾಪರಿವಾರದ ಮೂಲಕ ರಾಜಕೀಯವನ್ನು ಪ್ರವೇಶವನ್ನು ಪಡೆದು ಸಾಸಕರಾಗಿ ಕೆಲಸವನ್ನು ಮಾಡಿರ ಅನುಭವಿದ್ದು ಮೊದಲ ಬಾರಿಗೆ ಲೋಕಸಭೆಯ ಚುನಾವಣೆಯನ್ನು ಸ್ಪರ್ಧೆಸಿತ್ತಿರುವರು  ಜೆಡಿಎಸ್ ಯಿಂದ ಕೇಶವ ಕೆ(42) ಇವರು ಬೆಂಗಳೂರಿನಲ್ಲಿರುವ ಮ್ಯಾಕ್ಸ್ ವರ್ಥ್ ಕಂಪನಿಯ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದು ಇವರು ಕೇವಲ 20-25ದಿನಗಳ ಹಿಂದೆ ಅಷ್ಟೆ ರಾಜಕೀಯವನ್ನು ಪ್ರವೇಶವನ್ನು ಮಾಡಿದ್ದಾರೆ. ಇವರು ಚುಣವಾಣೆಯಲ್ಲಿ ಸ್ಪರ್ಧಿಸುದಕ್ಕೆ ಈ ಕ್ಷೇತ್ರದಲ್ಲಿರುವ ಜೆಡಿಎಸ್ನ ಪ್ರಭಾವವೇ ಮೂಲ ಕಾರಣವಾಗಿದೆ. ಎಎಪಿಯಿಂದ ರಾಜ್ಯ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕರ ಪೈಕಿ ಒಬ್ಬರಾರ ಕೋಟಿಗಾನಹಳ್ಳಿ ರಾಮಯ್ಯನವರು (58) ಸ್ಪರ್ಧಿಸಿತ್ತಿದ್ದು ವರು ಇವರು ಉತ್ತಮ ಸಾಹಿತಿ ಮತ್ತು ರಂಗಕರ್ಮಿಯಾಗಿದ್ದಾರೆ. ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಒಟ್ಟು 8 ವಿಧಾನಸಭಾ ಕ್ಷೇತ್ರಗಳದ 1) ಶಿಡ್ಲಘಟ್ಟ - ಎಂ ರಾಜಣ್ಣ (ಜೆಡಿಎಸ್) 2) ಚಿಂತಾಮಣಿ - ಎಂ ಕೃಷ್ಣಾರೆಡ್ಡಿ (ಜೆಡಿಎಸ್) 3) ಶ್ರೀನಿವಾಸಪುರ - ರಮೇಶ್ ಕುಮಾರ್ (ಕಾಂಗ್ರೆಸ್) 4) ಮುಳಬಾಗಿಲು - ಜಿ ಮಂಜುನಾಥ್ (ಪಕ್ಷೇತರ) 5) ಕೆಜಿಎಫ್ - ವೈ ರಾಮಕ್ಕ (ಬಿಜೆಪಿ) 6) ಬಂಗಾರಪೇಟೆ - ನಾರಾಯಣ ಸ್ವಾಮಿ ಎಸ್ಎನ್ (ಕಾಂಗ್ರೆಸ್) 7) ಕೋಲಾರ - ಆರ್ ವರ್ತೂರು ಪ್ರಕಾಶ್ (ಪಕ್ಷೇತರ) 8) ಮಾಲೂರು - ಕೆಎಸ್ ಮಂಜುನಾಥ್ ಗೌಡ (ಜೆಡಿಎಸ್)


ಹಾವೇರಿ ಲೋಕಸಭಾ ಕ್ಷೇತ್ರದ ಕಿರುಪರಿಚಯ

ಹಾವೇರಿ ಲೋಕಸಭಾ ಕ್ಷೇತ್ರದ  ಹಾಲಿ ಸಂಸದ ಉದಾಸಿ ಶಿವಕುಮಾರ್ ಚನ್ನಬಸಪ್ಪ (47)ರವರು ಹಾಲಿ ಚುನಾವಣೆಯಲ್ಲಿ ಕಣದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವರು ಇವರು 2009ರ ಪ್ರಥಮ ಬಾರಿಗೆ ಸಂಸತ್ ಪ್ರವೇಶವನ್ನು ಮಾಡಿ 2ನೆಯ ಸಲ ಚುನಾವಣೆಯಲ್ಲಿ ಸ್ಪರ್ಧೆಯನ್ನು ಮಾಡುತ್ತಿದ್ದಾರೆ, ಕಾಂಗ್ರೆಸ್ ಯಿಂದ ಸಲೀಂ ಅಹ್ಮದ್ (50) ಇವರು ಯುತ್ ಕಾಂಗ್ರೆಸ್ ಮೂಲಕ ರಾಜಕೀಯವನ್ನು ಪ್ರವೇಶದ ಇವರು ಒಂದು ಅವಧಿಗೆ ವಿಧಾನ ಪರಿಷತ್ ಸದಸ್ಯರಾಗಿರುವರು, ಜೆಡಿಎಸ್ ಯಿಂದ: ರವಿ (53) ಇವರ ತಂದೆಯರಾದ ಮಾಜಿ ಸಂಸಂದ ದಿ.ಡಿ.ಎಂ. ಮೆಣಸಿನಕಾಯಿರವರ ಪ್ರೇರಣೆಯಿಂದ ಜನತಾ ಪರಿವಾದ ಮೂಲಕ ರಾಜಕೀಯವನ್ನು ಪ್ರವೇಶಿ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಈ  ಕ್ಷೇತ್ರದ ವ್ಯಾಪ್ತಿಗೆ ಬರುವ ಒಟ್ಟು 8 ವಿಧಾನಸಭಾ ಕ್ಷೇತ್ರಗಳ ವಿವರ: 1) ರೋಣ - ಗುರುಪಾದ ಎಸ್ ಪಾಟೀಲ್ (ಕಾಂಗ್ರೆಸ್) 2) ಗದಗ - ಹಣಮಂತಗೌಡ ಪಾಟೀಲ್ (ಕಾಂಗ್ರೆಸ್) 3) ಶಿರಹಟ್ಟಿ - ರಾಮಕೃಷ್ಣ ದೊಡ್ಡಮನಿ (ಕಾಂಗ್ರೆಸ್) 4) ಹಾವೇರಿ - ರುದ್ರಪ್ಪ ಮಾನಪ್ಪ ಲಮ್ಹಾಣಿ (ಕಾಂಗ್ರೆಸ್) 5) ಹಾನಗಲ್ - ಮನೋಹರ ತಹಸೀಲ್ದಾರ್ (ಕಾಂಗ್ರೆಸ್) 6) ಬ್ಯಾಡಗಿ - ಬಸವರಾಜ ಎನ್ ಶಿವಣ್ಣನವರ್ (ಕಾಂಗ್ರೆಸ್) 7) ಹಿರೇಕೆರೂರು - ಯುಬಿ ಬಣಕಾರ್ (ಕೆಜೆಪಿ) 8) ರಾಣೆಬೆನ್ನೂರು - ಕೋಳಿವಾಡ್ ಕೆಬಿ (ಕಾಂಗ್ರೆಸ್)


ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಿರು ಪರಿಚಯ

ಶಿವಮೊಗ್ಗ ಹಾಲಿ ಸಂಸದ ಬಿವೈ ರಾಘವೇಂದ್ರ ಆಯ್ಕೆಯಾಗಿದ್ದು ಪ್ರಸ್ತುತವಾಗಿ ಹಾಲಿ ಚುನಾವಣೆಯಲ್ಲಿ ಕಣದಲ್ಲಿ ಬಿಜೆಪಿಯಿಂದ ಶಿಕಾರಿಪುರ ಪುರಸಭೆಯಿಂದ ರಾಜಕೀಯ ಪ್ರವೇಶವನ್ನು ಮಾಡಿ ಕರ್ನಾಟಕ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಕೀರ್ತಿಯನ್ನು ಪಡೆದ ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿಯಾಗಿದ್ದು ಕೆಜೆಪಿಯನ್ನು ಸ್ಥಾಪನೆ ಮಾಡಿ ಮರಳಿ ಬಿಜೆಪಿಗೆ ಸೇರ್ಪಡೆಯನ್ನು ಮಾಡಿರುವ ಯಡಿಯೂರಪ್ಪ (61) ಲೋಕಸಭೆಯಲ್ಲಿ 2ನೆಯ ಬಾರಿ ಸ್ಪರ್ಧೆಸುತ್ತಿದ್ದಾರೆ, ಕಾಂಗ್ರೆಸ್ ಅಭ್ಯರ್ಧಿಯಾಗಿ: ಮಂಜುನಾಥ ಭಂಡಾರಿ (52), ಜೆಡಿಎಸ್ ಯಿಂದ ಮಾಜಿ ಮುಖ್ಯಮಂತ್ರಿ ದಿ.ಎಸ್.ಬಂಗಾರಪ್ಪ ಅವರ ಪುತ್ರಿ ನಟ ಶಿವರಾಜ್ ಕುಮಾರ್ ಪತ್ನಿ ಇದೇ ಮೋದಲ ಬಾರಿಗೆ ಸಕ್ರಿಯ ರಾಜಕೀಯವನ್ನು ಪ್ರವೇಶವನ್ನು ಮಾಡಿರುವರು ಗೀತಾ ಶಿವರಾಜಕುಮಾರ್ (49 ). ಈ ಕ್ಷೇತ್ರದ ವ್ಯಾಪ್ತಿಗೆ ಬರುವ ಒಟ್ಟು 8 ವಿಧಾನಸಭಾ ಕ್ಷೇತ್ರ, ಶಾಸಕರ ವಿವರ: 1) ಶಿವಮೊಗ್ಗ ಗ್ರಾಮಾಂತರ - ಶಾರದಾ ಪೂರ್ಯ ನಾಯ್ಕ್ (ಜೆಡಿಎಸ್ ಶಾಸಕಿ) 2) ಭದ್ರಾವತಿ - ಅಪ್ಪಾಜಿ ಎಂಜೆ (ಜೆಡಿಎಸ್) 3) ಶಿವಮೊಗ್ಗ - ಪ್ರಸನ್ನ ಕುಮಾರ್ ಕೆಬಿ (ಕಾಂಗ್ರೆಸ್) 4) ತೀರ್ಥಹಳ್ಳಿ - ಕಿಮ್ಮನೆ ರತ್ನಾಕರ (ಕಾಂಗ್ರೆಸ್) 5) ಶಿಕಾರಿಪುರ - ಬಿಎಸ್ ಯಡಿಯೂರಪ್ಪ (ಕೆಜೆಪಿ) 6) ಸೊರಬ - ಎಸ್ ಮಧು ಬಂಗಾರಪ್ಪ (ಜೆಡಿಎಸ್) 7) ಸಾಗರ - ಕಾಗೋಡು ತಿಮ್ಮಪ್ಪ (ಕಾಂಗ್ರೆಸ್) 8) ಬೈಂದೂರು - ಗೋಪಾಲ ಪೂಜಾರಿ (ಕಾಂಗ್ರೆಸ್ )


ರಾಯಚೂರು ಲೋಕಸಭಾ ಕ್ಷೇತ್ರದ ಕಿರುಪರಿಚಯ

ರಾಯಚೂರು ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಸಣ್ಣ ಫಕೀರಪ್ಪ ಆಯ್ಕೆಯಾಗಿದ್ದು. ಹಾಲಿ ಚುನಾವಣೆಯಲ್ಲಿ ಕಣದಲ್ಲಿ ಬಿಜೆಪಿಯಿಂದ: ಕೆ.ಶಿವನಗೌಡ ನಾಯಕ (48), ಕಾಂಗ್ರೆಸ್: ಬಿವಿ ನಾಯಕ (37) ಜೆಡಿಎಸ್: ದೇವೇಂದ್ರಪ್ಪ ರವರು ಸ್ಪರ್ಧಿಸುತ್ತಿದ್ದಾರೆ.  ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಟ್ಟು 8 ವಿಧಾನಸಭಾ ಕ್ಷೇತ್ರ, ಶಾಸಕರ ವಿವರ: 1) ಶೋರಾಪುರ - ರಾಜಾ ವೆಂಕಟಪ್ಪ ನಾಯ್ಕ್ (ಕಾಂಗ್ರೆಸ್) 2) ಶಹಾಪುರ - ಗುರು ಪಾಟೀಲ್ ಶಿರವಾಳ (ಕೆಜೆಪಿ) 3) ಯಾದಗೀರ್ - ಎಬಿ ಮಾಲಕರೆಡ್ಡಿ (ಕಾಂಗ್ರೆಸ್) 4) ರಾಯಚೂರು ಗ್ರಾಮಾಂತರ - ತಿಪ್ಪರಾಜು (ಬಿಜೆಪಿ) 5) ರಾಯಚೂರು - ಡಾ ಶಿವರಾಜ ಪಾಟೀಲ್ ಎಸ್ (ಜೆಡಿಎಸ್) 6) ಮಾನ್ವಿ - ಜಿ ಹಂಪಯ್ಯ ನಾಯಕ್ (ಕಾಂಗ್ರೆಸ್) 7) ದೇವದುರ್ಗ - ವೆಂಕಟೇಶ್ ನಾಯ್ಕ್ (ಕಾಂಗ್ರೆಸ್) 8) ಲಿಂಗಸೂರು - ಮಾನಪ್ಪ ವಜ್ಜಲ್ (ಜೆಡಿಎಸ್) ಇದುವರೆಗೂ ಯಾರೆಲ್ಲಾ ಈ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ? ಮೈಸೂರು ರಾಜ್ಯದ ಅಧೀನದಲ್ಲಿದ್ದಾಗ 1962: ಜಗನ್ನಾಥರಾವ್ ವೆಂಕಟರಾವ್ ಚಂದ್ರಿಕಿ (ಕಾಂಗ್ರೆಸ್) 1967: ಆರ್ ವಿ ನಾಯ್ಕ್ (ಸ್ವತಂತ್ರ ಪಾರ್ಟಿ) 1971: ಪಂಪನಗೌಡ ಸಕ್ರೆಪ್ಪ ಗೌಡ ಅತ್ನೂರು (ಕಾಂಗ್ರೆಸ್) ಕರ್ನಾಟಕ ರಾಜ್ಯ ಉದಯವಾದಾಗ 1977: ರಾಜಶೇಖರ ಮಲ್ಲಪ್ಪ (ಕಾಂಗ್ರೆಸ್) 1980: ಬಿವಿ ದೇಸಾಯಿ (ಕಾಂಗ್ರೆಸ್) 1984: ಬಿವಿ ದೇಸಾಯಿ (ಕಾಂಗ್ರೆಸ್) 1989: ಆರ್ ಅಂಬಣ್ಣ ನಾಯ್ಕ್ ದೊರೆ (ಕಾಂಗ್ರೆಸ್) 1991: ಎ ವೆಂಕಟೇಶ್ ನಾಯ್ಕ್ (ಕಾಂಗ್ರೆಸ್) 1996: ರಾಜಾ ರಂಗಪ್ಪ ನಾಯ್ಕ್ (ಜೆಡಿಎಸ್) 1998: ಎ ವೆಂಕಟೇಶ್ ನಾಯ್ಕ್ (ಕಾಂಗ್ರೆಸ್) 1999: ಎ ವೆಂಕಟೇಶ್ ನಾಯ್ಕ್ (ಕಾಂಗ್ರೆಸ್) 2004: ಎ ವೆಂಕಟೇಶ್ ನಾಯ್ಕ್ (ಕಾಂಗ್ರೆಸ್) 2009: ಸಣ್ಣ ಫಕೀರಪ್ಪ (ಬಿಜೆಪಿ)


ಮೈಸೂರು ಲೋಕಸಭಾ ಕ್ಷೇತ್ರ ಪರಿಚಯ

ಮೈಸೂರು ಕ್ಷೇತ್ರದ ಹಾಲಿ ಸಂಸದ ಅಡಗೂರು ಎಚ್ ವಿಶ್ವನಾಥ್ (65) (ಕಾಂಗ್ರೆಸ್) ಪುನಹಃ ಚುನಾವಣೆಯ ಕಣದಲ್ಲಿರುವವರು ಇವರು 1970ರಲ್ಲಿ ರಾಜಕೀಯ ಪ್ರವೇಶವನ್ನು ಮಾಡಿ 1978ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಅಯ್ಕೆಯಾಗಿ  ಸಚಿವ ಸೇವೆಯನ್ನು ಸಲ್ಲಿಸಿರುವ ಪುನಹಃ ಬಯಸಿ ಸ್ಪರ್ಧೆಯನ್ನು ಮಾಡುತ್ತಿರುವರು. ಬಿಜೆಪಿಯಿಂದ ಪತ್ರಕರ್ತ, ಅಂಕಣಕಾರಾಗಿರುವ  ಪ್ರತಾಪ್ ಸಿಂಹ(37) ಲೋಕಸಭಾ ಚುನಾವಣೆಯನ್ನು ಸ್ಪರ್ಧಿಸುವುದರ ಮೂಲಕ ಸಕ್ರಿಯವಾಗಿ ರಾಜಕೀಯವನ್ನು ಪ್ರವೇಶ ಮಾಡುತ್ತಿದ್ದಾರೆ ಇನ್ನು ಜೆಡಿಎಸ್ನಲ್ಲಿ  ನ್ಯಾ. ಚಂದ್ರಶೇಖರಯ್ಯ(71) ಸ್ಪರ್ಧಿಸುತ್ತಿದ್ದು ಇವರು ಹೈಕೋರ್ಟ್ ನ್ಯಾಯಮೂರ್ತಿಯಾಗಿ ಮಾಜಿ ಉಪಲೋಕಾಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ. ಮೈಸೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಒಟ್ಟು 8 ವಿಧಾನಸಭಾ ಕ್ಷೇತ್ರ, ಶಾಸಕರ ವಿವರ: 1) ಮಡಿಕೇರಿ - ಅಪ್ಪಚ್ಚು ರಂಜನ್ (ಬಿಜೆಪಿ) 2) ವಿರಾಜಪೇಟೆ - ಕೆಜಿ ಬೋಪಯ್ಯ (ಬಿಜೆಪಿ) 3) ಪಿರಿಯಾಪಟ್ಟಣ - ಕೆ ವೆಂಕಟೇಶ್ (ಕಾಂಗ್ರೆಸ್) 4) ಹುಣಸೂರು - ಎಚ್ ಪಿ ಮಂಜುನಾಥ್ (ಕಾಂಗ್ರೆಸ್) 5) ಚಾಮುಂಡೇಶ್ವರಿ - ಜಿಟಿ ದೇವೇಗೌಡ (ಜೆಡಿಎಸ್) 6) ಕೃಷ್ಣರಾಜ - ಸೋಮಶೇಖರ್ ಎಂಕೆ (ಕಾಂಗ್ರೆಸ್) 7) ಚಾಮರಾಜ - ವಾಸು (ಕಾಂಗ್ರೆಸ್) 8) ನರಸಿಂಹರಾಜ - ತನ್ವೀರ್ ಸೇಠ್ (ಕಾಂಗ್ರೆಸ್) ಇದುವರೆಗೂ ಈ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದವರು ಇಂತಿದೆ ಮೈಸೂರು ರಾಜ್ಯದ ಅಧೀನದಲ್ಲಿದ್ದಾಗ 1951: ಎನ್ ರಾಚಯ್ಯ (ಕಾಂಗ್ರೆಸ್)/ ಎಂಎಸ್ ಗುರುಪಾದಸ್ವಾಮಿ (ಕಿಸಾನ್ ಮಜ್ದೂರ್ ಪ್ರಜಾ ಪಾರ್ಟಿ) 1957: ಎಸ್ಎಂ ಸಿದ್ದಯ್ಯ/ ಎಂ ಶಂಕರಯ್ಯ (ಕಾಂಗ್ರೆಸ್) 1962: ಎಂ ಶಂಕರಯ್ಯ (ಕಾಂಗ್ರೆಸ್) 1967: ಎಚ್ ಡಿ ತುಲಸಿದಾಸ್ (ಕಾಂಗ್ರೆಸ್) 1971: ಎಂ ಡಿ ತುಲಸಿದಾಸ್ (ಕಾಂಗ್ರೆಸ್) ಕರ್ನಾಟಕ ರಾಜ್ಯ ಉದಯವಾದಾಗ 1977: ಎಚ್ ಡಿ ತುಲಸಿದಾಸ್ (ಕಾಂಗ್ರೆಸ್) 1980: ಎಂ ರಾಜಶೇಖರ ಮೂರ್ತಿ (ಕಾಂಗ್ರೆಸ್) 1984: ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ (ಕಾಂಗ್ರೆಸ್) 1989: ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ (ಕಾಂಗ್ರೆಸ್) 1991: ಚಂದ್ರಪ್ರಭಾ ಅರಸ್ (ಕಾಂಗ್ರೆಸ್) 1996: ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ (ಕಾಂಗ್ರೆಸ್) 1998: ಸಿಎಚ್ ವಿಜಯಶಂಕರ್ (ಬಿಜೆಪಿ) 1999: ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ (ಕಾಂಗ್ರೆಸ್) 2004: ಸಿಎಚ್ ವಿಜಯಶಂಕರ್ (ಬಿಜೆಪಿ) 2009: ಅಡಗೂರು ಎಚ್ ವಿಶ್ವನಾಥ್ (ಕಾಂಗ್ರೆಸ್)

ದ್ಯಾವನೂರು ಮಂಜುನಾಥ್







1 comment:

  1. '2014ರ ಲೋಕಸಭಾ ಕ್ಷೇತ್ರಗಳ ಕಿರು ಪರಿಚಯ' ಉಪಯುಕ್ತ ಬರಹ.

    ReplyDelete