August 8, 2013

ನಮಗೆ ಜೀವವೇ ನೃತ್ಯ

ಕ್ಷತ್ರಗಳ ನಡುವಿನ ನಮ್ಮ ನೃತ್ಯ,
ದೂರದ ಕಣ್ಣಿನ ಅಂಚ್ಚಲ್ಲಿ ಅಮರ.

ಹೊಂಬ್ಬಣ್ಣದ ಸೂರ್ಯನ ಮಡಿಲಲ್ಲಿ,
ಎಲ್ಲಾ ಕಳೆದುಕೊಂಡರು ಕಾಣುತ್ತಿತ್ತು ಆ ಸ್ಪರ್ಶ.

ಕೇಕೆ ಹಾಕಿ ನಮ್ಮಯ ಸಂಗೀತದ ನೃತ್ಯ,
ಪದ ಬಂದಾಗೆ ಮೌನ ನೃತ್ಯರೂಪಕ.

ಚಳಿಗಾಲದಲ್ಲಿ ವರ್ಣಚಿತ್ರಕಾರನ ದೃಶ್ಯದ
ಸ್ಪರ್ಶ ಮೈ ತಂಪ್ಪಿಸಿತ್ತು.

ಕೇಕೆ ನಿಂತಾಗ ಹೊಸ ಹಾಡು
ಪ್ರತಿ ಕಣ್ಣೀರಿನಲ್ಲಿ ಒಂದು ಸಾಹಿತ್ಯ.

ಲಯ ಬದಲಾವಣೆಯಲ್ಲಿ ಗತಿ ನಿಧಾನಿಸಿ
ನಮ್ಮ ಬಾವಣೆಗಳೊಂದಿಗಿನ ನೃತ್ಯ.

ನೃತ್ಯದ ಜೀವನದಲ್ಲಿ
ಸಂದೇಹವಿದ್ದರೆ ಜೀವನ ಬಹು ಕಷ್ಟ...!

No comments:

Post a Comment